ನಮ್ಮ ಅಡುಗೆಮನೆಯಲ್ಲಿ ಕಂಡುಬರುವ ಸಾಮಾನ್ಯ ಮಸಾಲೆಗಳು ಅಂದ್ರೆ ಜೀರಿಗೆ, ಸಾಸಿವೆ, ಏಲಕ್ಕಿ, ದಲ್ ಚಿನ್ನಿ ಇದರಲ್ಲಿ ಲವಂಗವೂ ಇದ್ದು ಅದು ಆಹಾರದ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುತ್ತದೆ. ಅದಕ್ಕೆ ಅಷ್ಟೇ ಅಲ್ಲದೆ ಔಷಧಿ ತಯಾರಿಕೆಯಲ್ಲಿ ಕೂಡ ಬಳಕೆ ಮಾಡಲಾಗುತ್ತದೆ. ಪ್ರತಿ ದಿನ ನಿಯಮಿತವಾಗಿ ಲವಂಗವನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಲವಂಗದಲ್ಲಿ ಔಷಧಿ ಗುಣಗಳಿರುವುದರಿಂದ ಆಯುರ್ವೇದದಲ್ಲಿ ಬಳಕೆ ಮಾಡಲಾಗುತ್ತದೆ. 


COMMERCIAL BREAK
SCROLL TO CONTINUE READING

ಲವಂಗದಲ್ಲಿದೆ ಔಷಧಿ ಗುಣ: ಲವಂಗ(Cloves)ದಲ್ಲಿ ರಂಜಕ, ಸೋಡಿಯಂ, ಪೊಟ್ಯಾಸಿಯಮ್, ವಿಟಮಿನ್ ಕೆ, ಫೈಬರ್, ಒಮೆಗಾ 3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್, ಕಬ್ಬಿಣ ಅಂಶ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಅಲ್ಲದೆ, ಲವಂಗವು ರೋಗನಿರೋಧಕ ಗುಣಲಕ್ಷಣಗಳನ್ನು ಸಹ ಹೊಂದಿದೆ, ಇದರಿಂದಾಗಿ ಲವಂಗವು ದೇಹದ ಅನೇಕ ರೋಗಗಳನ್ನು ಬುಡದಿಂದ ತೆಗೆದುಹಾಕಲು ಸಹಾಯ ಮಾಡುತ್ತದೆ.


Blood Cancer Signs: ನಿಮಗೂ ಈ ಲಕ್ಷಣಗಳಿದ್ದರೆ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ


ರಾತ್ರಿಯಲ್ಲಿ ಲವಂಗವನ್ನು ತಿನ್ನುವುದರಿಂದ ಪ್ರಯೋಜನಗಳೇನು: ಲವಂಗ ತಿನ್ನಲು ಸರಿಯಾದ ಸಮಯ ಯಾವುದು ಎಂದು ನಿಮಗೆ ತಿಳಿದಿದರೆ ಒಳ್ಳೆಯದು, ಯಾವ ಸಮಯದಲ್ಲಿ ಬೇಕಾದ್ರು ಲವಂಗವನ್ನು ಬಳಸುವುದರಿಂದ ಆರೋಗ್ಯ(Health)ಕ್ಕೆ ಪ್ರಯೋಜನವಾಗುತ್ತದೆ. ಆದರೆ, ರಾತ್ರಿ ಬಳಕೆ ಮಾಡುವುದು ಬಹಳ ಪರಿಣಾಮಕಾರಿಯಾಗಿರುತ್ತದೆ. ರಾತ್ರಿ ಮಲಗುವ ಮೊದಲು ನೀವು 2 ಲವಂಗವನ್ನು ತಿಂದು  ನಂತರ 1 ಗ್ಲಾಸ್ ಬಿಸಿನೀರನ್ನು ಕುಡಿಯಿರಿ, ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ಉರಿತ, ಕೀಳು ನೋವು ಮುಂತಾದ ಸಮಸ್ಯೆಗಳಿಗೆ ರಾಮಬಾಣವಾಗಿದೆ.  


Hapatitis ಲಸಿಕೆಯಿಂದ Corona ಚಿಕಿತ್ಸೆ ಸಾಧ್ಯ? DCGI ಅನುಮತಿ ಕೋರಿದ Zydus Cadila


- ರಾತ್ರಿ ಮಲಗುವ ಮುನ್ನ ಲವಂಗವನ್ನು ತಿನ್ನುವುದು ಮತ್ತು ಬೆಚ್ಚಗಿನ ನೀರು ಕುಡಿಯುವುದು ಮಲಬದ್ಧತೆ(Constipation), ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಮತ್ತು ಅಜೀರ್ಣ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.


- ಹಲ್ಲು ನೋವು(Teeth Pain) ಅಥವಾ ಹಲ್ಲಿನಲ್ಲಿ ಹುಳುಗಳ ಸಮಸ್ಯೆ ಇದ್ದರೆ, ರಾತ್ರಿ ಮಲಗುವ ಮುನ್ನ 2 ಲವಂಗವನ್ನು ಸರಿಯಾಗಿ ಅಗಿಯಿರಿ ಮತ್ತು ನಂತರ 1 ಲೋಟ ಬೆಚ್ಚಗಿನ ನೀರನ್ನು ಕುಡಿಯಿರಿ.


Critical Health Insurance Policy ಬಗ್ಗೆ ನಿಮಗೆಷ್ಟು ತಿಳಿದಿದೆ?


-ಲವಂಗವನ್ನು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ತಲೆನೋವು(Headache) ನಿವಾರಣೆಗೆ ಸಹಾಯ ಮಾಡುತ್ತದೆ, ಬಾಯಿಯಿಂದ ಕೆಟ್ಟ ವಾಸನೆಯ ಸಮಸ್ಯೆ ಇದ್ದರೂ ಲವಂಗ ನಿಮಗೆ ಪ್ರಯೋಜನಕಾರಿಯಾಗುತ್ತದೆ. 


- ರಾತ್ರಿ  ಮಲಗುವ ಮುನ್ನ 2 ಲವಂಗವನ್ನು ತಿನ್ನಿರಿ ಮತ್ತು ಅದರ ನಂತರ 1 ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಗಂಟಲಿಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ಉದಾಹರಣೆಗೆ - ಗಂಟಲು ಸಮಸ್ಯೆ, ಗಂಟಲು ನೋವು, ಗಂಟಲಲ್ಲಿ ಕಫ, ಲವಂಗ ಕೂಡ ಈ ಎಲ್ಲ ಸಮಸ್ಯೆಗಳನ್ನು ತೆಗೆದು ಹಾಕುತ್ತದೆ. 


Skin care : ಈ Scrub ಬಳಸಿದರೆ ಕಲೆ ರಹಿತ ತ್ವಚೆ ನಿಮ್ಮದಾಗಿಸಿಕೊಳ್ಳಬಹುದು


ಲವಂಗದ ಕಷಾಯವನ್ನೂ ಮಾಡಬಹುದು: ಲವಂಗವು ಖಾರವಾಗಿರುವ ಕಾರಣ ಅಗಿಯುವುದು ಅಥವಾ ತಿನ್ನಲು ನಿಮಗೆ ಕಷ್ಟವಾದರೆ, ಲವಂಗವನ್ನ ಚೆನ್ನಾಗಿ ಪುಡಿಮಾಡಿ ಅದನ್ನ 1 ಲೋಟ ನೀರಿನಲ್ಲಿ 2-3 ನಿಮಿಷ ಕುದಿಸಿ ನಂತರ ಹಾರಿಸಿ ಕುಡಿಯಿರಿ. ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಪ್ರಯೋಜನಗಳನ್ನು ಸಹ ನೀವು ಪಡೆಯಬಹುದು. ಮಕ್ಕಳಿಗೆ ಮಲಬದ್ಧತೆ ಅಥವಾ ಶೀತ ಕೆಮ್ಮು ಸಮಸ್ಯೆ ಇದ್ದರೆ, 1 ಲವಂಗವನ್ನು ಚೆನ್ನಾಗಿ ಪುಡಿಮಾಡಿ ಅರ್ಧ ಟೀ ಚಮಚ ಜೇನುತುಪ್ಪದಲ್ಲಿ ಹಾಕಿ ಮಕ್ಕಳಿಗೆ ಕೊಡಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.