Benefits of Milk Dates : ಹಾಲು, 2 ಖರ್ಜೂರದಲ್ಲಿದೆ ಪುರುಷರ ಆರೋಗ್ಯ : ಪ್ರತಿದಿನ ಈ ಸಮಯದಲ್ಲಿ ಸೇವಿಸಿ ಪಡೆಯಿರಿ ಪ್ರಯೋಜನ!
ಆರೋಗ್ಯ ತಜ್ಞರು ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸುತ್ತಾರೆ, ಆದರೆ ಖರ್ಜೂರವನ್ನು ಸೂಪರ್ ಫುಡ್ ವಿಭಾಗದಲ್ಲಿ ಸೇರಿಸಲಾಗಿದೆ. ನಾವು ಈ ಎರಡನ್ನೂ ಒಟ್ಟಿಗೆ ಸೇವಿಸಿದಾಗ, ಅವುಗಳ ಪ್ರಯೋಜನಗಳು ಹಲವು ಪಟ್ಟು ಹೆಚ್ಚಾಗುತ್ತವೆ.
ನೀವು ದೈಹಿಕ ದೌರ್ಬಲ್ಯದಿಂದ ಬಳಲುತ್ತಿರುವ ಪುರುಷರು ಖರ್ಜೂರ ಮತ್ತು ಹಾಲನ್ನು ಸೇವಿಸಿ. ಈ ಆಹಾರಗಳನ್ನ ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳನ್ನು ಪಡೆಯುತ್ತೀರಿ. ಇದು ಪುರುಷರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಆರೋಗ್ಯ ತಜ್ಞರು ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸುತ್ತಾರೆ, ಆದರೆ ಖರ್ಜೂರವನ್ನು ಸೂಪರ್ ಫುಡ್ ವಿಭಾಗದಲ್ಲಿ ಸೇರಿಸಲಾಗಿದೆ. ನಾವು ಈ ಎರಡನ್ನೂ ಒಟ್ಟಿಗೆ ಸೇವಿಸಿದಾಗ, ಅವುಗಳ ಪ್ರಯೋಜನಗಳು ಹಲವು ಪಟ್ಟು ಹೆಚ್ಚಾಗುತ್ತವೆ.
ಪ್ರಸಿದ್ಧ ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿಯವರ ಪ್ರಕಾರ, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್ಗಳು ಸಮೃದ್ಧವಾಗಿರುವ ಹಾಲು(Milk) ಮತ್ತು ಗ್ಲೂಕೋಸ್ ಮತ್ತು ಫ್ರಕ್ಟೋಸ್ ಸಮೃದ್ಧವಾಗಿರುವ ಖರ್ಜೂರಗಳು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಅವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ, ನೀವು ಅನೇಕ ರೋಗಗಳಿಂದ ದೂರವಿರಬಹುದು. ಖರ್ಜೂರವನ್ನು ಹಾಲಿನಲ್ಲಿ ನೆನೆಸಿ ಸ್ವಲ್ಪ ಹೊತ್ತು ಕುದಿಸಿದಾಗ, ಅದರ ಆರೋಗ್ಯ ಪ್ರಯೋಜನಗಳು 100 ಪಟ್ಟು ಹೆಚ್ಚಾಗುತ್ತದೆ, ಸೇವಿಸುವುದರಿಂದ ರಕ್ತಹೀನತೆಯಂತಹ ಸಮಸ್ಯೆಗಳನ್ನ ಗುಣಪಡಿಸಬಹುದು.
ಇದನ್ನೂ ಓದಿ : Raw Food: ಈ ಆಹಾರ ಪದಾರ್ಥಗಳನ್ನು ಎಂದಿಗೂ ಬೇಯಿಸಿ ತಿನ್ನಬಾರದು
ಹಾಲು ಮತ್ತು ಖರ್ಜೂರಗಳ ಪ್ರಯೋಜನಗಳು
1. ಗರ್ಭಿಣಿ ಮಹಿಳೆಯರಿಗೆ ಹಾಲು ಮತ್ತು ಖರ್ಜೂರ
ಡಾ. ಅಬ್ರಾರ್ ಮುಲ್ತಾನಿಯವರ ಪ್ರಕಾರ, ಖರ್ಜೂರ(Dates)ವು ಒಂದು ಆಹಾರ ಪದಾರ್ಥವಾಗಿದ್ದು, ಇದು ತಾಯಿಯ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡುವುದಲ್ಲದೆ, ಭ್ರೂಣದ ಬೆಳವಣಿಗೆಗೂ ಪ್ರಯೋಜನಕಾರಿಯಾಗಿದೆ. ನೀವು ಹಸುವಿನ ಹಾಲಿನಲ್ಲಿ ನೆನೆಸಿದ ಖರ್ಜೂರವನ್ನು ಸೇವಿಸಿದಾಗ, ದೇಹದಲ್ಲಿ ಆಕ್ಸಿಟೋಸಿನ್ ಪ್ರಮಾಣ ಹೆಚ್ಚಾಗುತ್ತದೆ, ಇದು ಹೆರಿಗೆಯ ಸಮಯದಲ್ಲಿ ಗರ್ಭಾಶಯದ ಸೂಕ್ಷ್ಮತೆಯನ್ನು ಹೆಚ್ಚಿಸಲು ಸಹ ಕೆಲಸ ಮಾಡುತ್ತದೆ.
2. ಚರ್ಮಕ್ಕೆ ಪ್ರಯೋಜನಕಾರಿ
ಆ್ಯಂಟಿಆಕ್ಸಿಡೆಂಟ್ಗಳು ಖರ್ಜೂರದಲ್ಲಿ ಹೇರಳವಾಗಿ ಕಂಡುಬರುತ್ತವೆ, ಇವುಗಳು ವಯಸ್ಸಾದ ವಿರೋಧಿ ಗುಣಗಳಿಂದ ಸಮೃದ್ಧವಾಗಿವೆ. ಅದರ ಸೇವನೆಯಿಂದ ಚರ್ಮ(Skin) ಸುಕ್ಕು ಗಟ್ಟುವುದು ನಿಧಾನಗೊಳಿಸಬಹುದು, ಇದು ಚರ್ಮದ ಮೇಲೆ ವಯಸ್ಸಾದ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ : Ajwain Water Benefits : ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ 'ಅಜವಾನ ನೀರು' : ಇದರಿಂದ ಆರೋಗ್ಯಕ್ಕಿದೆ ಅನೇಕ ಪ್ರಯೋಜನಗಳು!
3. ರಕ್ತಹೀನತೆಗೆ ಪ್ರಯೋಜನಕಾರಿ
ಯಾರ ದೇಹದಲ್ಲಿ ಕಬ್ಬಿಣದ ಕೊರತೆಯಿರುತ್ತದೆಯೋ ಆಗ ಅವರಿಗೆ ರಕ್ತಹೀನತೆ ಇರುತ್ತದೆ ಮತ್ತು ಇದನ್ನು ಹೋಗಲಾಡಿಸಲು ಸಹಾಯಕವಾಗಿದೆ, ನಿಮಗೆ ಕಬ್ಬಿಣದಂಶವಿರುವ ಆಹಾರವನ್ನು ಸೇವಿಸಲು ಸೂಚಿಸಲಾಗುತ್ತದೆ. ನೀವು ಹಾಲಿನೊಂದಿಗೆ ಖರ್ಜೂರವನ್ನು ಸೇವಿಸಿದರೆ, ಈ ಸಮಸ್ಯೆಯನ್ನು ನಿವಾರಿಸಬಹುದು.
4. ವೀರ್ಯವನ್ನು ಹೆಚ್ಚಿಸುವಲ್ಲಿ ಸಹಾಯಕ
ಆಯುರ್ವೇದದಲ್ಲಿ ಖರ್ಜೂರವನ್ನು ಔಷಧಿಯಾಗಿ ಬಳಸಲಾಗುತ್ತದೆ. ಇದು ಪುರುಷರ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಖರ್ಜೂರ ಮತ್ತು ಹಾಲನ್ನು(Milk-Dates) ಒಟ್ಟಿಗೆ ಸೇವಿಸುವುದರಿಂದ ಫಲವತ್ತತೆ ಹೆಚ್ಚುತ್ತದೆ. ಹಾಲಿನಲ್ಲಿ ಬೇಯಿಸಿದ ಎರಡು ಅಥವಾ ಮೂರು ಒಣ ಖರ್ಜೂರವನ್ನು ಪ್ರತಿದಿನ ಸವಿಸುವುದರಿಂದ ಶಕ್ತಿ ಮತ್ತು ವೀರ್ಯ ಹೆಚ್ಚಾಗುತ್ತದೆ. ಇದರಲ್ಲಿರುವ ಮೆಗ್ನೀಶಿಯಂ ನಿಮ್ಮ ದೇಹದಲ್ಲಿ ಸಕ್ಕರೆಯನ್ನು ನಿಯಂತ್ರಿಸುತ್ತದೆ, ಇದರಿಂದಾಗಿ ನೀವು ಮಧುಮೇಹದಂತಹ ಸಮಸ್ಯೆಗಳಿಂದ ದೂರವಿರಬಹುದು.
ಇದನ್ನೂ ಓದಿ : Skin Problems: ಚರ್ಮದ ಸಮಸ್ಯೆಗೆ ನಿಮ್ಮ Sleeping Positions ಕೂಡ ಕಾರಣವಿರಬಹುದು
ಯಾವ ಸಮಯದಲ್ಲಿ ಸೇವಿಸಬೇಕು
ರಾತ್ರಿ ಮಲಗುವ ಮುನ್ನ ಹಾಲು ಮತ್ತು ಖರ್ಜೂರವನ್ನು ಸೇವಿಸಬಹುದು ಎಂದು ವೈದ್ಯರು ಅಬ್ರಾರ್ ಮುಲ್ತಾನಿ ಹೇಳುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ