ನವದೆಹಲಿ : ಬೇಯಿಸಿದ ತರಕಾರಿ ಖಂಡಿತಾ ಆರೋಗ್ಯಕ್ಕೆ ಹಿತಕರ.  ಆದರೆ, ಕೆಲವೊಂದು ತರಕಾರಿಗಳನ್ನು ಹಸಿ ಹಸಿ ತಿಂದು ಮುಗಿಸಬೇಕು. ಯಾಕೆ ಗೊತ್ತಾ. ಹಸಿ ತಿನ್ನುವುದರಿಂದ ಕೆಲವೊಂದು ವಿಶೇಷ ಪೋಷಕಾಂಶಗಳು ಸಿಗುತ್ತವೆ. ತರಕಾರಿಗಳನ್ನು ಬೇಯಿಸಿ, ತಿನ್ನಬೇಕೆಂದೇನೂ ಇಲ್ಲ. ಕೆಲವು ತರಕಾರಿಗಳನ್ನು ಹಸಿ ಹಸಿ ತಿಂದರೆ ಅದರಲ್ಲಿ ಪೋಷಕಾಂಶಗಳು ಬೇಕಾದಷ್ಟು ಸಿಗುತ್ತದೆ. ಬೇಯಿಸಿದರೆ ಪೋಷಕಾಂಶಗಳು ಕಡಿಮೆಯಾಗುತ್ತದೆ.  ಆದರೆ, ತುಂಬಾ ಜನರಿಗೆ ಯಾವುದನ್ನು ಹಸಿ ತಿನ್ನಬೇಕು (Benefits of raw vegetables). ಇನ್ನಾವುದನ್ನು ಬೇಯಿಸಿ ತಿನ್ನಬೇಕು ಎಂಬ ಮಾಹಿತಿ ಬಹಳಷ್ಟು ಜನರಲ್ಲಿ ಇಲ್ಲ.  ಈಗ ಹಸಿ ತಿನ್ನಬೇಕಾದ ತರಕಾರಿಗಳು ಯಾವುದು ನೋಡೋಣ.


COMMERCIAL BREAK
SCROLL TO CONTINUE READING

1. ಬಿಟ್ರೂಟ್
ಬಿಟ್ರೂಟ್ ಆರೋಗ್ಯಕ್ಕೆ ಅತ್ಯಂತ (Health benefits of Beetroot) ಲಾಭದಾಯಕ.  ಇದರಲ್ಲಿ ಫೈಬರ್, ವಿಟಮಿನ್ ಸಿ, ಪೊಟ್ಯಾಶಿಯಂ, ಮೆಗ್ನೇಶಿಯಂ, ವಿಟಮಿನ್ ಬಿ ಮುಂತಾದ ಸಾಕಷ್ಟು ಪೋಷಕಾಂಶಗಳು ಇದರಲ್ಲಿವೆ.  ಬಿಟ್ರೂಟ್ (Beetroot) ಹಸಿ ತಿಂದರೆ ಒಳ್ಳೆಯದು ಎಂದು ಆಹಾರ ತಜ್ಞರು ಹೇಳುತ್ತಾರೆ.  ಬಿಟ್ರೂಟ್ ಹಸಿ ತಿಂದರೆ, ಇಮ್ಯೂನಿಟಿ (Immunity) ಹೆಚ್ಚುತ್ತದೆ. ಮಲಬದ್ದತೆ ನಿವಾರಣೆಯಾಗುತ್ತದೆ.  ಕಬ್ಬಿಣದಾಂಶದ ಕೊರತೆ ಕಡಿಮೆಯಾಗುತ್ತದೆ. 


ಇದನ್ನೂ ಓದಿ : Banana Peel Face Pack: ಮುಖದಲ್ಲಿನ ಕಲೆ ನಿವಾರಣೆಗೆ ಬಳಸಿ ಬಾಳೆಹಣ್ಣಿನ ಫೇಸ್ ಪ್ಯಾಕ್


2. ಬ್ರೊಕಲಿ
ಬ್ರೊಕಲಿಯನ್ನು ಹಸಿ ಮತ್ತು ಬೇಯಿಸಿ ಎರಡೂ ರೀತಿಯಲ್ಲಿ ತಿನ್ನಬಹುದು.  ಬ್ರೊಕಲಿಯಲ್ಲಿ ವಿಟಮಿನ್ ಸಿ, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಪ್ರೊಟಿನ್ ಬೇಕಾದಷ್ಟಿರುತ್ತದೆ. ಬ್ರೊಕಲಿ ಕಚ್ಚಾ ತಿಂದರೆ ಒಳ್ಳೆಯದಂತೆ.


3. ಬೆಳ್ಳುಳ್ಳಿ. 
ಬೆಳ್ಳುಳ್ಳಿಯ ಪ್ರಯೋಜನದ (benefits of garlic) ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬೆಳ್ಳುಳ್ಳಿಯನ್ನು ಹಸಿ ತಿನ್ನಬೇಕಂತೆ, ಬೆಳ್ಳುಳ್ಳಿಯಲ್ಲಿ ಕ್ಯಾಲ್ಸಿಯಂ, ಮ್ಯಾಂಗನೀಸ್, ಜರ್ಮೇನಿಯಂ, ಸೆಲೇನಿಯಂ ಮೊದಲಾದ ಪೋಷಕಾಂಶಗಳಿರುತ್ತವೆ. ಇವು ನಮ್ಮ ಆರೋಗ್ಯಕ್ಕೆ (garlic benefits) ತುಂಬಾ ಒಳ್ಳೆಯದು. 


ಇದನ್ನೂ ಓದಿ : ಮಾರುಕಟ್ಟೆಯಿಂದ ತರುವ ಖಾರದ ಪುಡಿಯಲ್ಲಿ ಕಲಬೆರೆಕೆ ಇದೆಯಾ ಎಂದು ಪತ್ತೆ ಹಚ್ಚುವುದು ಹೇಗೆ?


4. ಕೆಂಪು ಮೆಣಸು
ಮೆಣಸಿನಲ್ಲಿ (Red chilly) ವಿಟಮಿನ್ ಸಿ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ವಿಟಮಿನ್ ಬಿ16, ವಿಟಮಿನ್ ಇ ಕೂಡಾ ಭರ್ಜರಿಯಾಗಿರುತ್ತದೆ.  ಮೆಣಸು ಹಸಿ ತಿಂದರೆ ವಿಟಮಿನ್ ಸಿ ದಂಡಿಯಾಗಿ ಸಿಗುತ್ತದೆ. ಬೇಯಿಸಿದರೆ ಅದರ ವಿಟಮಿನಗಳು ನಷ್ಟವಾಗುತ್ತವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.