ಬೆಂಗಳೂರು : Beetroot Benefits In Summer : ಬೇಸಿಗೆ ಕಾಲ (Summer) ಪ್ರಾರಂಭವಾಗಿದೆ. ಬಿಸಿಲ ಧಗೆ ಏರುತ್ತಲೇ ಇದೆ. ಬೇಸಿಗೆಯಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು (Health Problem) ಎದುರಿಸಬೇಕಾಗುತ್ತದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಯೆಂದರೆ ಡಿ ಹೈಡ್ರೇಶನ್. ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗದಂತೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಈ ಸಮಸ್ಯೆಯಿಂದ ಪಾರಾಗಬೇಕಾದರೆ ಬೀಟ್ರೂಟ್ ಸಹಕಾರಿ. ಬೇಸಿಗೆಯಲ್ಲಿ ಬೀಟ್ರೂಟ್ (Beetroot) ಸೇವಿಸುವುದರಿಂದ ಸ್ಕಿನ್ ಡ್ಯಾಮೇಜ್ ಅನ್ನು ಸರಿಪಡಿಸುತ್ತದೆ. ಅಲ್ಲದೆ, ದೇಹದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಇದು ಸುಧಾರಿಸುತ್ತದೆ.
ರಕ್ತಹೀನತೆ- ರಕ್ತಹೀನತೆಯಿಂದ (anemia) ಬಳಲುತ್ತಿರುವವರಿಗೆ ಬೀಟ್ರೂಟ್ ವರದಾನವಾಗಿ ಪರಿಣಮಿಸಲಿದೆ. ಬೀಟ್ರೂಟ್ (Beetroot) ಜೊತೆಗೆ ಅದರ ಎಲೆ ಕೂಡಾ ರಕ್ತಹೀನತೆಗೆ ರಾಮಬಾಣ.
ಇದನ್ನೂ ಓದಿ : Fenugreek Seed Water: ನಿತ್ಯ ಖಾಲಿ ಹೊಟ್ಟೆಯಲ್ಲಿ ಮೆಂತ್ಯದ ನೀರು ಸೇವಿಸಿ, ಈ ರೋಗಗಳಿಂದ ದೂರವಿರಿ
ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ : ಬೀಟ್ರೂಟ್ ಕ್ಯಾನ್ಸರ್ (Cancer) ಅಪಾಯವನ್ನು ಕಡಿಮೆ ಮಾಡುತ್ತದೆ. ಬೀಟ್ರೂಟ್ ಕ್ಯಾನ್ಸರ್ ಗೆ ಕಾರಣವಾಗುವ ಕೋಶಗಳನ್ನು ನಾಶಪಡಿಸುತ್ತದೆ. ಬೀಟ್ರೂಟ್ ತಿನ್ನುವುದರಿಂದ ಪ್ಫ್ರೋಸ್ಟೇಟ್ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಅಪಾಯವೂ ಕಡಿಮೆಯಾಗುತ್ತದೆ.
ಚರ್ಮದ ಆರೋಗ್ಯಕ್ಕೆ ಸಹಕಾರಿ : ಬೀಟ್‌ರೂಟ್‌ನಲ್ಲಿರುವ ಅಂಟಿ ಆಕ್ಸಿಡೆಂಟ್ ಚರ್ಮವನ್ನು (Skin) ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಚರ್ಮದ ಸುಕ್ಕುಗಳನ್ನು (wrinkles) ತೆಗೆದು ಹಾಕಲು ಸಹ ಸಹಾಯ ಮಾಡುತ್ತದೆ.
ಇದನ್ನೂ ಓದಿ : ಪುರುಷರು ಪ್ರತಿ ದಿನ ಬೆಳಿಗ್ಗೆ ಮೊಟ್ಟೆ ಸೇವಿಸಿದರೆ ಸಿಗಲಿದೆ ಇಷ್ಟೊಂದು ಪ್ರಯೋಜನ
ಮೂಳೆಗಳನ್ನು ಸದೃಢವಾಗಿಸುತ್ತದೆ : ಬೀಟ್‌ರೂಟ್‌ನಲ್ಲಿ ಕ್ಯಾಲ್ಸಿಯಂ (Calcium) ಪ್ರಮಾಣ ಹೇರಳವಾಗಿರುತ್ತದೆ. ಮೂಳೆಗಳು ಸದೃಢಗೊಳ್ಳಲು ಕ್ಯಾಲ್ಸಿಯಂ ಅಗತ್ಯ. ಈ ಹಿನ್ನೆಲೆಯಲ್ಲಿ ಬೀಟ್‌ರೂಟ್ ಸೇವಿಸಿದರೆ ಮೂಳೆಗಳು ಮತ್ತು ಹಲ್ಲುಗಳು ಬಲಗೊಳ್ಳುತ್ತವೆ.
ದಟ್ಟವಾದ ಕೂದಲಿಗೆ : ಬೀಟ್‌ರೂಟ್‌ನಲ್ಲಿ ಫಾಸ್ಫೋರಸ್ ಪ್ರಮಾಣವು ಅಧಿಕವಾಗಿರುತ್ತದೆ. ದಟ್ಟವಾದ ಕೂದಲು (Hair) ಬೆಳೆಯಲು ಇದು ಸಹಕಾರಿಯಾಗುತ್ತದೆ. ಹಾಗಾಗಿ ದಟ್ಟವಾದ ಕೂದಲು ಹೊಂದಬೇಕಾದರೆ ಬೀಟ್ರೂಟ್ ತಿನ್ನಿ.
ಇದನ್ನೂ ಓದಿ : Pumpkin- ಕುಂಬಳಕಾಯಿಯನ್ನು ಈ ರೀತಿ ಬಳಸಿ ಸುಂದರ ತ್ವಚೆ, ಕೂದಲು ನಿಮ್ಮದಾಗಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.