ನವದೆಹಲಿ : ಬೆಳ್ಳುಳ್ಳಿ ಸೇವನೆಯಿಂದ ಆರೋಗ್ಯಕ್ಕೆ ಬಹಳಷ್ಟು (Benefits of Garlic) ಪ್ರಯೋಜನಗಳಿವೆ. ಇದರಲ್ಲಿರುವ ಇನ್ ಫ್ಲಮೇಟರಿ ಗುಣ ದೇಹವನ್ನು ಸೋಂಕಿನಿಂದ (Infection) ಕಾಪಾಡುತ್ತದೆ. ಆದರೆ, ಇವತ್ತು ನಾವು ಹೇಳುವ ಪ್ರಯೋಜನಗಳನ್ನು ಕೇಳಿದರೆ ದಂಗಾಗುತ್ತೀರಿ. ಬೆಳ್ಳುಳ್ಳಿಯ ಎಸಳುಗಳನ್ನು ತಲೆದಿಂಬಿನ ಅಡಿಯಲ್ಲಿಟ್ಟು ಮಲಗಿದರೆ, ಅನೇಕ ಪ್ರಯೋಜನಗಳಾಗುತ್ತವೆ.
ಸೊಳ್ಳೆ ನೊಣಗಳು ದೂರವಿರುತ್ತವೆ
ರಾತ್ರಿಯ ವೇಳೆಯಲ್ಲಿ ಸೊಳ್ಳೆ (mosquito) ಕಾಟದಿಂದ ಎಷ್ಟೋ ಬಾರಿ ನಿದ್ದೆ ಹಾಳಾಗುತ್ತದೆ. ಸೊಳ್ಳೆಗಳ ಕಾಟ ತಪ್ಪಿಸಲು ಮಾರುಕಟ್ಟೆಯಲ್ಲಿ ಬಹಳಷ್ಟು ರಾಸಾಯನಿಕ ವಸ್ತುಗಳು ಸಿಗುತ್ತವೆ. ಅವುಗಳು ಸೊಳ್ಳೆಗಳನ್ನು ಓಡಿಸುತ್ತವೆ ನಿಜ. ಆದರೆ, ನಮ್ಮ ಆರೋಗ್ಯದ (health) ಮೇಲೂ ಕೆಟ್ಟ ಪರಿಣಾಮವನ್ನು ಬೀರುತ್ತವೆ. ಆದರೆ ತಲೆದಿಂಬಿನ ಕೆಳಗೆ ಬೆಳ್ಳುಳ್ಳಿಯಿಟ್ಟರೆ, ಸೊಳ್ಳೆಗಳು ನಮ್ಮ ಹತ್ತಿರ ಕೂಡಾ ಸುಳಿಯುವುದಿಲ್ಲ. ಸೊಳ್ಳೆ ಮಾತ್ರವಲ್ಲ ಯಾವ ಕೀಟ ಕೂಡಾ ನಮ್ಮ ಸಮೀಪ ಬರುವುದಿಲ್ಲ. ಬೆಳ್ಳುಳ್ಳಿಯಲ್ಲಿರುವ ಕೆಲ ಅಂಶಗಳು ಸೊಳ್ಳೆ, ನೊಣ ಮತ್ತು ಕೀಟಗಳಿಗೆ ಟಾಕ್ಸಿಕ್ ರೂಪದಲ್ಲಿ ಕೆಲಸ ಮಾಡುತ್ತದೆ. ಬೆಳ್ಳುಳ್ಳಿಯ ವಾಸನೆಗೆ (Garlic Smell) ಸೊಳ್ಳೆ, ನೊಣ ಮತ್ತು ಕೀಟಗಳು ದೂರ ಹೋಗುತ್ತದೆ.
ಇದನ್ನೂ ಓದಿ : Immunity Booster : ರೋಗ ನಿರೋಧಕ ಶಕ್ತಿಗೆ ಸೇವಿಸಿ 'ಅಮೃತ ಬಳ್ಳಿ ಕಷಾಯ' : ಇಲ್ಲಿದೆ 5 ಪ್ರಯೋಜನಗಳು!
ನಿದ್ದೆಗೂ ಒಳ್ಳೆಯದು :
ಬೆಳ್ಳುಳ್ಳಿಯನ್ನು (Garlic) ದಿಂಬಿನ ಕೆಳಗೆ ಇಟ್ಟುಕೊಳ್ಳುವುದರಿಂದ ಒಳ್ಳೆಯ ನಿದ್ದೆ ಬರುತ್ತದೆ. ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ 1 ಮತ್ತು ವಿಟಮಿನ್ ಬಿ 6 ಇರುತ್ತದೆ. ಇದು ನಿದ್ರಾಹೀನತೆ ಕಾಯಿಲೆಯ ವಿರುದ್ಧ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಅಧ್ಯಯನದ ಪ್ರಕಾರ, ಒಬ್ಬ ಸ್ವಸ್ಥ ವ್ಯಕ್ತಿ ದಿನವೊಂದಕ್ಕೆ ಕಡಿಮೆಯೆಂದರೂ 7 ಗಂಟೆಗಳ ನಿದ್ದೆ ಮಾಡಬೇಕಾಗುತ್ತದೆ. ನಿದ್ರೆಯ ಕೊರತೆ ಅನೇಕ ಗಂಭೀರ ಕಾಯಿಲೆಗಳು ಮತ್ತು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಿರುವಾಗ ಬೆಳ್ಳುಳ್ಳಿಯನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಇಂಥಹ ಕಾಯಿಲೆಗಳನ್ನು ದೂರವಿಡಬಹುದು.
ರೋಗನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ :
ಪ್ರತಿದಿನ ಬೆಳ್ಳುಳ್ಳಿಯನ್ನು ದಿಂಬಿನ ಕೆಳಗೆ ಇಡುವುದರಿಂದ ವ್ಯಕ್ತಿಯ ರೋಗ ನಿರೋಧಕ ಶಕ್ತಿ (Immunity) ಕೂಡಾ ಹೆಚ್ಚಾಗುತ್ತದೆ. ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಎಂಬ ಅಂಶವು ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ದೇಹವನ್ನು ಸೋಂಕಿನಿಂದ ರಕ್ಷಿಸುತ್ತದೆ. ಸಂಶೋಧನೆಯಲ್ಲೂ ಈ ವಿಷಯ ಸಾಬೀತಾಗಿದೆ.
ಇದನ್ನೂ ಓದಿ : ಮಕ್ಕಳ ಪಾಲನೆಯಲ್ಲಿ ತಪ್ಪಿಯೂ ಈ ಐದು ತಪ್ಪು ಮಾಡಬಾರದು.!
ಶೀತದಿಂದ ಮುಕ್ತಿ :
ಮೂಗು ಕಟ್ಟುವುದು ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ. ಮೂಗು ಕಟ್ಟಿಕೊಳ್ಳುವುದರಿಂದ (Nose block) ನಿದ್ದೆಗೂ ಸಮಸ್ಯೆ ಉಂಟಾಗುತ್ತದೆ. ಪ್ರತಿದಿನ ತಲೆದಿಂಬಿನ ಅಡಿಯಲ್ಲಿ ಬೆಳ್ಳುಳ್ಳಿ ಎಸಳುಗಳನ್ನು ಇಟ್ಟು ಮಲಗಿದರೆ, ಅದರಲ್ಲಿರುವ ಆಲಿಸಿನ್ ಅಂಶದಿಂದಾಗಿ, ಮೂಗು ಕಟ್ಟಿಕೊಳ್ಳುವ ಸಮಸ್ಯೆಯಿಂದಲೂ ಮುಕ್ತಿ ಸಿಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.