ಕಟ್ಟಿಕೊಂಡ ಮೂಗು ಮತ್ತು ಗಂಟಲು ನೋವಿಗೆ ಶೀಘ್ರ ಪರಿಹಾರ ಈ ಮನೆ ಮದ್ದು
ತಣ್ಣನೆಯ ಗಾಳಿ ಶೀತ ಕೆಮ್ಮು, ಮೂಗು ಕಟ್ಟುವುದು, ಗಂಟಲು ನೋವು ಇತ್ಯಾದಿ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಹೀಗಾದಾಗ ಉಸಿರಾಟಕ್ಕೆ ತೊಂದರೆಯಾಗುತ್ತದೆ. ರಾತ್ರಿ ವೇಳೆ ನಿದ್ದೆಗೂ ಇದು ಅಡ್ಡಿಯುಂಟು ಮಾಡುತ್ತದೆ.
ಬೆಂಗಳೂರು : ಚಳಿಗಾಲದಲ್ಲಿ ಸಾಮಾನ್ಯವಾಗಿ ಎಲ್ಲರ ಆರೋಗ್ಯವೂ ಕೆಡುತ್ತದೆ. ಈ ಋತುವಿನಲ್ಲಿ ಬೀಸುವ ತಣ್ಣನೆಯ ಗಾಳಿ ಶೀತ ಕೆಮ್ಮು, ಮೂಗು ಕಟ್ಟುವುದು, ಗಂಟಲು ನೋವು ಇತ್ಯಾದಿ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಹೀಗಾದಾಗ ಉಸಿರಾಟಕ್ಕೆ ತೊಂದರೆಯಾಗುತ್ತದೆ. ರಾತ್ರಿ ವೇಳೆ ನಿದ್ದೆಗೂ ಇದು ಅಡ್ಡಿಯುಂಟು ಮಾಡುತ್ತದೆ. ಕೆಲವೊಂದು ಮನೆಮದ್ದು ಅನುಸರಿಸುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಕಷಾಯ :
ಉಸಿರುಕಟ್ಟುವುದು, ಗಂಟಲು ನೋವು, ಮೂಗು ಕಟ್ಟಿಕೊಳ್ಳುವುದು ಈ ಸಮಸ್ಯೆಗಳನ್ನು ಗುಣಪಡಿಸಲು ಮನೆಯಲ್ಲಿಯೇ ಇರುವ ಮಸಾಲೆಗಳಿಂದ ತಯಾರಿಸಿದ ಕಷಾಯವನ್ನು ಸೇವಿಸಬಹುದು. ಇದು ಚಳಿಗಾಲದಲ್ಲಿ ತಲೆದೋರುವ ಈ ಸಮಸ್ಯೆಗಳ ವಿರುದ್ದ ಹೋರಾಡುತ್ತದೆ. ತುಳಸಿ, ಕರಿಮೆಣಸು, ಒಣ ಶುಂಠಿ ಮತ್ತು ಚಕ್ಕೆಯನ್ನು ಒಟ್ಟಿಗೆ ಕುದಿಸಿ ಕಷಾಯ ಮಾಡಿಕೊಳ್ಳಿ. ಇದಕ್ಕೆ ಬೆಲ್ಲ ಮತ್ತು ನಿಂಬೆ ರಸವನ್ನು ಕೂಡಾ ಸೇರಿಸಿ. ಇದನ್ನೂ ಕುಡಿದರೆ ಮೇಲೆ ಹೇಳಿದಅ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
ಇದನ್ನೂ ಓದಿ : Black Pepper: ಕರಿಮೆಣಸು ಹೀಗೆ ಸೇವಿಸಿದರೆ ಈ ರೋಗಗಳು ದೂರವಾಗುತ್ತವೆ
ಮೂಗಿನಲ್ಲಿ ಎಣ್ಣೆ ಹಾಕಿಕೊಳ್ಳುವುದು :
ಕಟ್ಟಿದ ಮೂಗನ್ನು ತೆರೆಯಲು ಮೂಗಿನೊಳಗೆ ಎಣ್ಣೆ ಹಾಕುವಂತೆ ಹೇಳಲಾಗುತ್ತದೆ. ಬೆಳಿಗ್ಗೆ 1-2 ಹನಿ ಎಳ್ಳು ಅಥವಾ ತೆಂಗಿನ ಎಣ್ಣೆಯನ್ನು ಮೂಗಿಗೆ ಹಾಕಬೇಕು. ಹೀಗೆ ಮಾಡಿದರೆ ತಕ್ಷಣವೇ ಕಟ್ಟಿದ ಮೂಗಿನಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ.
ಲವಂಗ ಮತ್ತು ಜೇನುತುಪ್ಪ :
ಲವಂಗ ಮತ್ತು ಜೇನುತುಪ್ಪದಲ್ಲಿರುವ ಔಷಧೀಯ ಗುಣಗಳು ಶೀತ ಮತ್ತು ಜ್ವರದ ಸಮಯದಲ್ಲಿ ಪರಿಹಾರ ನೀಡುತ್ತದೆ. ಲವಂಗದ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ. ದಿನಕ್ಕೆ 2-3 ಬಾರಿ ಹೀಗೆ ಮಾಡುತ್ತಾ ಬಂದರೆ ಕಟ್ಟಿದ ಮೂಗೂ ಮತ್ತು ಗಂಟಲು ನೋವಿನಿಂದ ಪರಿಹಾರ ಸಿಗುತ್ತದೆ.
ಇದನ್ನೂ ಓದಿ : Corona Prevention : ಈ ಆಹಾರಗಳನ್ನು ಸೇವಿಸಿದರೆ ಕೊರೊನಾಗೆ ಆಹ್ವಾನ ನೀಡಿದಂತೆ
ಗಾರ್ಗ್ಲಿಂಗ್ :
ಚಳಿ ಹೆಚ್ಚಾಗುತ್ತಿರುವ ಕಾರಣ ಗಂಟಲಿನಲ್ಲಿ ಕಫ ಸಂಗ್ರಹವಾಗುತ್ತದೆ. ಈ ನೋವಿನಿಂದಾಗಿ ಗಂಟಲು ಉರಿಯುವಂತೆಯೂ ಆಗುತ್ತದೆ. ಎಳ್ಳು ಅಥವಾ ತೆಂಗಿನೆಣ್ಣೆಯನ್ನು ಬಿಸಿ ನೀರಿನಲ್ಲಿ ಬೆರೆಸಿ ಗಾರ್ಗ್ಲಿಂಗ್ ಮಾಡಿದರೆ ಗಂಟಲು ನೋವು ಮತ್ತು ಕಟ್ಟಿದ ನೋವಿನ ಸಮಯೇ ನಿವಾರಣೆಯಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.