ನವದೆಹಲಿ: 'ದೋ ಬೂಂದ್ ಜಿಂದಗಿ ಕೆ' ಈ ಟ್ಯಾಗ್ ಲೈನ್ ಅನ್ನು ನೀವು ಸಾಮಾನ್ಯವಾಗಿ ಟಿವಿ ಜಾಹಿರಾತು ಅಥವಾ ವೃತ್ತಪತ್ರಿಕೆಗಳಲ್ಲಿ ನೋಡಿರಬಹುದು. ಇದು ಪೋಲಿಯೋ ನಿರ್ಮೂಲನೆಗಾಗಿ ನೀಡಲಾಗುವ ಔಷಧಿಯಾಗಿದೆ. ಈ ಲಸಿಕೆಯ ಎರಡು ಹನಿ ಕುಡಿಸುವುದರಿಂದ ಪೋಲಿಯೋದಿಂದ ರಕ್ಷಣೆ ಪಡೆಯಬಹುದು. ಇದನ್ನೇ ಆಧಾರವಾಗಿಟ್ಟುಕೊಂಡು ಇದೀಗ ಕೊರೊನಾ ವೈರಸ್ (Coronavirus) ಅನ್ನು ಸೋಲಿಸುವ ಸಿದ್ಧತೆ ನಡೆದಿದೆ.  ಕೊರೊನಾ ವೈರಸ್ ಗಾಗಿ ಲಸಿಕೆ ತಯಾರಿಸುತ್ತಿರುವ ಭಾರತೀಯ ಕಂಪನಿ ಭಾರತ್ ಬಯೋಟೆಕ್ ಮುಂದಿನ ವರ್ಷದ ಹೊತ್ತಿಗೆ ಮಹಾಮಾರಿ ವಿರುದ್ಧ ಹೋರಾಡುವ ಲಸಿಗೆ ಸಿಗಲಿದೆ ಎಂದು ಹೇಳಿದೆ. ವಿಶೇಷತೆ ಎಂದರೆ ಈ ಸ್ವದೇಶಿ ನಿರ್ಮಿತ ವ್ಯಾಕ್ಸಿನ್ ನ ಎರಡು ಹನಿಗಳು ಮಾತ್ರ ಕೊರೊನಾ ಸೋಲಿಸಲು ಸಾಕಾಗಲಿವೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ- Good News: ಭಾರತಕ್ಕೆ ತಲುಪಿದ ರಷ್ಯಾ Corona Vaccine Sputnik-V ಮೊದಲ ಸರದಿ


ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಸಿಂಗಲ್ ಡೋಸ್ ಕೊರೊನಾ ವ್ಯಾಕ್ಸಿನ್
ಕರೋನಾ ಲಸಿಕೆಗೆ ಸಂಬಂಧಿಸಿದ ದೊಡ್ಡ ಮಾಹಿತಿಯೊಂದು ಇದೀಗ ಬಹಿರಂಗಪಡಿಸಲಾಗಿದೆ. ಕರೋನಾ ಲಸಿಕೆ ಕುರಿತು ಪ್ರಯೋಗಗಳನ್ನು ನಡೆಸುತ್ತಿರುವ ಭಾರತ್ ಬಯೋಟೆಕ್ ಕಂಪನಿಯು ಮುಂದಿನ ವರ್ಷ ಸಿಂಗಲ್ ಡೋಸ್ ಲಸಿಕೆ ಮಾರುಕಟ್ಟೆಯಲ್ಲಿ ಸಿಗಲಿದೆ ಎಂದಿದೆ. ಈ ವ್ಯಾಕ್ಸಿನ್ ನ ಕೇವಲ ಎರಡು ಹನಿಗಳನ್ನು ಮೂಗಿನ ಮೂಲಕ ನೀಡಲಾಗುವುದು. ಕರೋನಾವನ್ನು ಸೋಲಿಸಲು ಇದು ಸಾಕು. ಭಾರತ್ ಬಯೋಟೆಕ್,  ಐಸಿಎಂಆರ್ ಸಹಯೋಗದೊಂದಿಗೆ ಲಸಿಕೆ ತಯಾರಿಸುವ ಕೆಲಸ ಮಾಡುತ್ತಿದೆ.


ಇದನ್ನು ಓದಿ-Good News: Pfizer ಈ ಕೊರೊನಾ ವ್ಯಾಕ್ಸಿನ್ ಶೇ.90ರಷ್ಟು ಯಶಸ್ವಿ, ಶೀಘ್ರದಲ್ಲಿಯೇ ಅನುಮೋದನೆ ಸಿಗುವ ಸಾಧ್ಯತೆ


ಮೂರನೇ ಹಂತದ ಟ್ರಯಲ್ ಜಾರಿಯಲ್ಲಿದೆ
ಕರೋನಾ ವೈರಸ್ ಸಾಂಕ್ರಾಮಿಕದ ನಡುವೆಯೇ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್‌ನ ಸ್ಥಳೀಯ ಲಸಿಕೆ 'ಕೊವಾಕ್ಸಿನ್' ಅಂತಿಮ ಹಂತದ ಟ್ರಯಲ್ ನಲ್ಲಿದೆ. ಈ ಲಸಿಕೆ ಕ್ಯಾಂಡಿಡೀಟ್ಎರಡು ಹಂತದ ಪ್ರಯೋಗಗಳು ಯಶಸ್ವಿಯಾಗಿವೆ ಮತ್ತು ಪ್ರಸ್ತುತ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ. ಬಯೋ ಸೇಫ್ಟಿ ಲೆವೆಲ್ -3 (ಬಿಎಸ್ಎಲ್ 3) ಉತ್ಪಾದನಾ ಸೌಲಭ್ಯವನ್ನು ಹೊಂದಿರುವ ವಿಶ್ವದ ಏಕೈಕ ಲಸಿಕೆ ಕಂಪನಿ ಭಾರತ್ ಬಯೋಟೆಕ್. ಕರೋನಾ ಸೋಂಕನ್ನು ಕಡಿತಗೊಳಿಸಲು ಕಂಪನಿಯು ಮತ್ತೊಂದು ಲಸಿಕೆಯ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಲಸಿಕೆ ಕೂಡ ಮುಂದಿನ ವರ್ಷದ ವೇಳೆಗೆ ಸಿದ್ಧವಾಗಲಿದೆ.


ಇದನ್ನು ಓದಿ- ದೇಶದ ಮೊದಲ ವೈಯಕ್ತಿಕ ಕೊವಿಡ್ Life Insurance ಪಾಲಸಿ ಬಿಡುಗಡೆ, ಸಿಗಲಿದೆ ಈ ಲಾಭ


ವ್ಯಾಕ್ಸಿನ್ ಬಂದರೂ ಕೂಡ ಮಹಾಮಾರಿಯ ಪ್ರಕೋಪ ನಿಲ್ಲುವುದಿಲ್ಲ
ಅತ್ತ ವಿಶ್ವ ಆರೋಗ್ಯ ಸಂಸ್ಥೆ ಕೂಡ ವ್ಯಾಕ್ಸಿನ್ ಬರುವ ನಿರೀಕ್ಷೆಗಳ ನಡುವೆಯೇ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಈ ಕುರಿತು ಹೇಳಿಕೆ ನೀಡಿರುವ WHO ಡೈರೆಕ್ಟರ್ ಜನರಲ್ ಟೆಡ್ರೋಸ್ ಅಧಾನೋಮ್ ಘೆಬ್ರಿಯೇಸಿಸ್ ವ್ಯಾಕ್ಸಿನ್ ಮಾರುಕಟ್ಟೆಗೆ ಬಂದ ಬಳಿಕವೂ ಕೂಡ ವೈರಸ್ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವಲ್ಲಿ ಯಶಸ್ಸು ಸಿಗುವುದಿಲ್ಲ ಎಂದಿದ್ದಾರೆ. WHO ಪ್ರಕಾರ ವ್ಯಾಕ್ಸಿನ್ ಮಾರುಕಟ್ಟೆಗೆ ಬಂದ ಬಳಿಕ ಸದ್ಯ ಇರುವ ಸಂಪನ್ಮೂಲಗಳನ್ನು ಬಲಪಡಿಸಲಾಗುವುದು.