Good News: Pfizer ಈ ಕೊರೊನಾ ವ್ಯಾಕ್ಸಿನ್ ಶೇ.90ರಷ್ಟು ಯಶಸ್ವಿ, ಶೀಘ್ರದಲ್ಲಿಯೇ ಅನುಮೋದನೆ ಸಿಗುವ ಸಾಧ್ಯತೆ

ಲಸಿಕೆ ಕ್ಲಿನಿಕಲ್ ಪ್ರಯೋಗಗಳಲ್ಲಿ ಶೇಕಡಾ 90 ರಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ. ಈ ಫಲಿತಾಂಶಗಳು ನಿರೀಕ್ಷೆಗಿಂತ ಉತ್ತಮವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ತಿಂಗಳ ಅಂತ್ಯದ ವೇಳೆಗೆ, ಲಸಿಕೆ ಮಾರಾಟ ಮಾಡಲು ಕಂಪನಿಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ.

Last Updated : Nov 10, 2020, 10:57 AM IST
  • ಕೊರೊನಾ ವೈರಸ್ ಮಹಾಮಾರಿಯ ಅಪಾಯ ಇನ್ನೂ ಕಡಿಮೆಯಾಗಿಲ್ಲ.
  • ಅಮೆರಿಕದ ಔಷಧಿ ತಯಾರಕ ಕಂಪನಿ ಫೈಜರ್ ಕೊರೊನಾವೈರಸ್ ಲಸಿಕೆ ಕ್ಲಿನಿಕಲ್ ಟ್ರಯಲ್ ನಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಿದೆ.
  • ಈ ಲಸಿಕೆ ಕ್ಲಿನಿಕಲ್ ಪ್ರಯೋಗಗಳಲ್ಲಿ ಶೇಕಡಾ 90 ರಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ.
Good News: Pfizer ಈ ಕೊರೊನಾ ವ್ಯಾಕ್ಸಿನ್ ಶೇ.90ರಷ್ಟು ಯಶಸ್ವಿ, ಶೀಘ್ರದಲ್ಲಿಯೇ ಅನುಮೋದನೆ ಸಿಗುವ ಸಾಧ್ಯತೆ title=

ನವದೆಹಲಿ: ಕೊರೊನಾ ವೈರಸ್(Corornavirus) ಮಹಾಮಾರಿಯ ಅಪಾಯ ಇನ್ನೂ ಕಡಿಮೆಯಾಗಿಲ್ಲ ಇದರ ಮೂರನೇ ಅಲೆ ಅನೇಕ ದೇಶಗಳಲ್ಲಿ ನೋಡಲಾಗುತ್ತಿದೆ. ಏತನ್ಮಧ್ಯೆ ನೆಮ್ಮದಿಯ ಸುದ್ದಿಯೊಂದು ಪ್ರಕಟವಾಗಿದೆ. ಹೌದು ಅಮೆರಿಕದ ಔಷಧಿ ತಯಾರಕ ಕಂಪನಿ ಫೈಜರ್ ಕೊರೊನಾವೈರಸ್ ಲಸಿಕೆ ಕ್ಲಿನಿಕಲ್ ಟ್ರಯಲ್ ನಲ್ಲಿ ಉತ್ತಮ ಫಲಿತಾಂಶಗಳನ್ನು  ನೀಡಿದೆ. ಈ  ಲಸಿಕೆ ಕ್ಲಿನಿಕಲ್ ಪ್ರಯೋಗಗಳಲ್ಲಿ ಶೇಕಡಾ 90 ರಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ. ಈ ಫಲಿತಾಂಶಗಳು ನಿರೀಕ್ಷೆಗಿಂತ ಉತ್ತಮವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ತಿಂಗಳ ಅಂತ್ಯದ ವೇಳೆಗೆ, ಲಸಿಕೆ ಮಾರಾಟ ಮಾಡಲು ಕಂಪನಿಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ.

ಇದನ್ನು ಓದಿ- ಭಾರತದಲ್ಲಿ ತಯಾರಾಯಿತು covid-19 ಲಸಿಕೆ: ಫೆಬ್ರವರಿಯಲ್ಲಿ ಲಭ್ಯ!

ಶೇ.90 ರಷ್ಟು ಪರಿಣಾಮಕಾರಿಯಾಗಿದೆ ಈ ವ್ಯಾಕ್ಸಿನ್ 
ಜಾಗತಿಕ ಮಟ್ಟದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಮಹಾಮಾರಿಯ ಪ್ರಕೋಪವನ್ನು ನಿಲ್ಲಿಸಲು ಒದೊಂದು ಭರವಸೆಯ ಸುದ್ದಿಯಾಗಿದೆ. ಫೈಜರ್ ತನ್ನ ಪಾಲುದಾರ BioNTech ಜೊತೆ ಕರೋನಾ ವೈರಸ್ ಲಸಿಕೆಯನ್ನು ಸಿದ್ಧಪಡಿಸುತ್ತಿದೆ. ಫೈಜರ್ ಅಮೇರಿಕನ್ ಮತ್ತು BioNTech ಜರ್ಮನ್ ಫಾರ್ಮಾ ಕಂಪನಿಯಾಗಿದೆ. ಲಸಿಕೆ ಪ್ರಯೋಗದ ಸಮಯದಲ್ಲಿ, ಲಸಿಕೆ ಸೋಂಕಿತ 94 ಜನರಲ್ಲಿ 90 ಪ್ರತಿಶತ ಪರಿಣಾಮಕಾರಿ ಸಾಬೀತಾಗಿದೆ ಎಂದು ಕಂಪನಿ ಸೋಮವಾರ ಸಂಜೆ ತಡವಾಗಿ ಪ್ರಕಟಿಸಿದೆ. ಈ ಸೋಂಕಿತರಲ್ಲಿ ಕೋವಿಡ್ -19 ರ ಕನಿಷ್ಠ 1 ಲಕ್ಷಣಗಳಿದ್ದವು. ಲಸಿಕೆ ಪ್ರಾಯೋಗಿಕ ಹಂತದಲ್ಲಿದೆ, ಆದರೆ ಫಲಿತಾಂಶಗಳು ನಿರೀಕ್ಷೆಗಿಂತ ಉತ್ತಮವಾಗಿವೆ. ಶೀಘ್ರದಲ್ಲೇ ಜಗತ್ತಿಗೆ ಲಸಿಕೆ ಪಡೆಯುವ ವಿಧಾನ ಸ್ಪಷ್ಟವಾಗಲಿದೆ.

ಇದನ್ನು ಓದಿ- Good News!ಭಾರತದಲ್ಲಿ COVID-19 ಲಸಿಕೆ ಲಭ್ಯತೆಯ ಬಗ್ಗೆ ಆರೋಗ್ಯ ಸಚಿವರಿಂದ ಮಹತ್ವದ ಘೋಷಣೆ

ಟ್ವೀಟ್ ಮಾಡಿದ ಡೊನಾಲ್ಡ್ ಟ್ರಂಪ್
ಹಾಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡುವ ಮೂಲಕ ಅಮೆರಿಕಾದ ಪಾಲಿಗೆ ಇದೊಂದು ದೊಡ್ಡ ಸುದ್ದಿ ಎಂದು ಹೇಳಿದ್ದಾರೆ. ಲಸಿಕೆ ಶೀಘ್ರದಲ್ಲೇ ಬರಲಿದೆ. 90 ಪ್ರತಿಶತಕ್ಕಿಂತ ಹೆಚ್ಚು ಪರಿಣಾಮಕಾರಿ ಎಂದು ಕಂಡುಬಂದಿದೆ. ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ವಿಶ್ವದಲ್ಲಿ ಇದುವರೆಗೆ 1.2 ದಶಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಜನರು ಲಸಿಕೆಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಫೈಜರ್ ಪ್ರಕಾರ, ಪರೀಕ್ಷಿಸಿದ ಸ್ವಯಂಸೇವಕರಲ್ಲಿ, ಇದು ರೋಗವನ್ನು ತಡೆಗಟ್ಟುವಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಯಶಸ್ವಿಯಾಗಿದೆ. ಲಸಿಕೆ ಸುರಕ್ಷಿತವಾಗಿದೆ ಎಂದು ಉಳಿದ ದತ್ತಾಂಶಗಳು ಸೂಚಿಸಿದರೆ, ಈ ತಿಂಗಳ ಅಂತ್ಯದ ಮೊದಲು, ಕಂಪನಿಯ ಆರೋಗ್ಯ ನಿಯಂತ್ರಕರು ಲಸಿಕೆ ಮಾರಾಟ ಮಾಡಲು ಅನುಮೋದನೆ ಪಡೆಯಲಿದ್ದಾರೆ.

ಇದನ್ನು ಓದಿ- ಬ್ರಿಟನ್ ನಲ್ಲಿ ಮೂರು ತಿಂಗಳೊಳಗೆ ಕೊರೊನಾ ಲಸಿಕೆ ಬಿಡುಗಡೆ..!

ಯಾವುದೇ ಗಂಭೀರ ಸೈಡ್ ಎಫೆಕ್ಟ್ ಇಲ್ಲ
ಕ್ಲಿನಿಕಲ್ ಪ್ರಯೋಗಗಳಲ್ಲಿ ಇದುವರೆಗೆ ಯಾವುದೇ ಗಂಭೀರ ಸೈಡ್ ಎಫೆಕ್ಟ್ ಗಳು ಈ ಲಸಿಕೆಗೆ ಕಂಡುಬಂದಿಲ್ಲ ಎಂದು Pfizer ಹೇಳಿದೆ. ಪ್ರಸ್ತುತ ಯುಎಸ್ ಮತ್ತು ಇತರ ದೇಶಗಳಲ್ಲಿ ಸುಮಾರು 44,000 ಜನರ ಮೇಲೆ ಇದನ್ನು ಪರೀಕ್ಷಿಸಲಾಗುತ್ತಿದೆ. ಆದರೆ, ಈ ಲಸಿಕೆ ಎಷ್ಟು ಸಮಯದವರೆಗೆ ಜನರಲ್ಲಿ ಕರೋನದ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಕಾಯ್ದಿರಿಸುತ್ತದೆ ಎಂಬುದು ಮಾತ್ರ ಇದುವರೆಗೆ ಸ್ಪಷ್ಟವಾಗಿಲ್ಲ.

Trending News