Bird Flu : ಗ್ರಿಲ್ಡ್ ಚಿಕನ್ ಸೇಫಾ..? ತಂದೂರಿ ತಿನ್ನಬಹುದಾ..? ಒವನ್ ನಲ್ಲಿ ವೈರಸ್ ಸಾಯುತ್ತಾ..?
ಕೋಳಿ ಜ್ವರ ದೇಶಾದ್ಯಂತ ಆತಂಕ ಸೃಷ್ಟಿಸಿದೆ. ಈ ಹೊತ್ತಲ್ಲಿ ಚಿಕನ್ ತಿನ್ನೋದು ಎಷ್ಟು ಸೇಫ್. ಚಿಕನ್ ಖಾದ್ಯ ಹೇಗೆ ತಯಾರಿ ಮಾಡಬೇಕು. ಗ್ರಿಲ್ಡ್ , ತಂದೂರಿ ಚಿಕನ್ ತಿನ್ನಬಹುದಾ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಬೆಂಗಳೂರು : ಕೋಳಿ ಜ್ವರ ದೇಶಾದ್ಯಂತ ಆತಂಕ ಸೃಷ್ಟಿಸಿದೆ. ಹಲವು ರಾಜ್ಯಗಳು ಕೋಳಿ ಜ್ವರದ ಮೇಲೆ ನಿಗಾ ಇಟ್ಟಿದ್ದು, ಮೊಟ್ಟೆ, ಕೋಳಿ ಮಾರಾಟದ ಮೇಲೆ ನಿರ್ಬಂಧ ಹೇರಿವೆ. ಪೌಲ್ಟ್ರಿ ಫಾರ್ಮ್ ಉದ್ಯಮ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಕೋಳಿ ಜ್ವರ ಆವರಿಸಿರುವ ಈ ಹೊತ್ತಿನಲ್ಲಿ ಚಿಕನ್ ತಿನ್ನಬಹುದಾ ಎಂಬ ಪ್ರಶ್ನೆ ಸಾಮಾನ್ಯವಾಗಿ ಸೃಷ್ಟಿಯಾಗುತ್ತದೆ. ಯಾವ ರೀತಿಯ ಚಿಕನ್ ಖಾದ್ಯ ಈ ಹೊತ್ತಲ್ಲಿ ಸೇಫ್ ಅನ್ನೋ ಟಿಪ್ಸ್ ಇಲ್ಲಿದೆ.
ಗ್ರಿಲ್ಡ್ ಚಿಕನ್ ಸೇಫಾ..?
ನಾನ್ ವೆಜಿಟೆರಿಯನ್ಸ್ ಗೆ ಗ್ರಿಲ್ಡ್ ಚಿಕನ್ (Grilled Chicken) ಅಂದರೆ ಪಂಚಪ್ರಾಣ. ಕೋಳಿ ಜ್ವರದ ಹೊತ್ತಿನಲ್ಲಿ ಗ್ರಿಲ್ಡ್ ಚಿಕನ್ ಸೇಫಾ..? ಈ ಪ್ರಶ್ನೆಗೆ ಪರಿಣಿತರು ಉತ್ತರಿಸಿದ್ದಾರೆ. ಚಿಕನ್ ಒವನ್ (Oven) ಒಳಗೆ ಗ್ರಿಲ್ ಆಗುವಾಗ ಸುಮಾರು 170 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತದೆ. ಸಾಮಾನ್ಯವಾಗಿ ಈ ತಾಪಮಾನದಲ್ಲಿ ವೈರಸ್ (Virus) ಬದುಕಲ್ಲ. ಆದರೆ, ಚಿಕನ್ ಗ್ರಿಲ್ ಆಗುವಾಗ ಅದರ ಹೊರಭಾಗ ಚೆನ್ನಾಗಿ ಬೆಂದಿರುತ್ತಿದೆ. ಅದರ ಒಳಭಾಗ ಆಳವಾಗಿ ಬೆಂದಿರುವ ಸಾಧ್ಯತೆ ಕಡಿಮೆ. ಹಾಗಾಗಿ, ಗ್ರಿಲ್ಡ್ ಚಿಕನ್ ದೂರು ಇಡುವುದು ಉತ್ತಮ ಅಂತಾರೆ ತಜ್ಞರು
ಇದನ್ನೂ ಓದಿ : Bird flu ಮೊಟ್ಟೆ, ಚಿಕನ್ ತಿಂದರೆ ಕೋಳಿ ಜ್ವರ ಬರುತ್ತಾ..? ಈ ಹೊತ್ತಲ್ಲಿ ಗೊತ್ತಿರಲೇಬೇಕಾದ ವಾಸ್ತವಾಂಶಗಳು ಇವು..!
ತಂದೂರಿ ಚಿಕನ್ ತಿನ್ನಬಹುದಾ..?
ಸುಮಾರು 150 ರಿಂದ 200 ಡಿಗ್ರಿ ಸೆಲ್ಸಿಯಸ್ ತಾಪಮಾನದ ತಂದೂರಿಯಲ್ಲಿ (Thandoori) ತಂದೂರಿ ಚಿಕನ್ ತಯಾರಿಸಲಾಗುತ್ತದೆ. ಮೊದಲೇ ಹೇಳಿದಂತೆ ಈ ತಾಪಮಾನದಲ್ಲಿ ವೈರಸ್ ಬದುಕುಳಿಯಲು ಸಾಧ್ಯತೆಯೇ ಇಲ್ಲ. ಆದರೆ, ಗ್ರಿಲ್ ಚಿಕನ್ ರೀತಿಯಲ್ಲಿಯೇ, ತಂದೂರಿಯಲ್ಲೂ ಕೂಡಾ ಚಿಕನ್ ಒಳ ಭಾಗ ಬೇಯುವ ಸಾಧ್ಯತೆ ಕಡಿಮೆ. ಹಾಗಾಗಿ ತಂದೂರಿ ಕೆಲಕಾಲ ದೂರ ಇಡಬಹುದು.
ಓವೆನ್ ನಲ್ಲಿ ಚಿಕನ್ ಖಾದ್ಯ ಮಾಡಿದರೆ ಅದು ಸೇಫಾ..?
ಓವೆನ್ ನಲ್ಲಿಯೂ ವಿವಿಧ ರೀತಿಯ ತಾಪಮಾನದ ಲೆವೆಲ್ ಗಳಿವೆ. ಇಲ್ಲೂ ಕೂಡಾ ಚಿಕನ್ ಹೊರಭಾಗದಲ್ಲಿ ಚೆನ್ನಾಗಿ ಬೆಂದಿರುತ್ತದೆ. ಒಳಭಾಗ ಬೇಯದೇ ಇರುವ ಸಾಧ್ಯತೆ ಇರುತ್ತದೆ. ಹಾಗಾಗಿ, ಒವೆನ್ ಬಳಕೆ ಬೇಡ.
ಇದನ್ನೂ ಓದಿ : ಮತ್ತೆ ಕದ ತಟ್ಟಿದ Bird Flu, ಕೇಂದ್ರದಿಂದ ಮಹತ್ವದ ನಿರ್ಧಾರ
ಹಾಗಾದ್ರೆ, ಚಿಕನ್ ಖಾದ್ಯ ಮಾಡೋದು ಹೇಗೆ..?
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ 70 ಡಿಗ್ರಿ ಸೆಲ್ಸಿಯಸ್ ಉಷ್ಠಾಂಶದಲ್ಲಿ ಸರಿ ಸುಮಾರು ಅರ್ಧ ಗಂಟೆ ಬೆಂದಾಗ, ಅದರಲ್ಲಿ ಯಾವುದೇ ವೈರಸ್ ಉಳಿಯಲು ಸಾಧ್ಯವಿಲ್ಲ. ಹಾಗಾಗಿ ಚಿಕನ್ ಕರಿ ಅಥವಾ ಅದೇ ರೀತಿಯ ಇತರ ಖಾದ್ಯ ಮಾಡುವುದು ಉತ್ತಮ. ಒಟ್ಟಿನಲ್ಲಿ ನಿಮ್ಮ ಡಿಶ್ ಕನಿಷ್ಠ 70 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಕನಿಷ್ಠ ಅರ್ಧ ಗಂಟೆ ಬೇಯಬೇಕು.
ಹಾಗಾಗಿ ಕೋಳಿ ಜ್ವರ (Bird Flu) ಹೊತ್ತಲ್ಲಿ ಚಿಕನ್ ನ್ನು ಚೆನ್ನಾಗಿ ಬೇಯಿಸಿ ತಿನ್ನುವುದು ಉತ್ತಮ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.