ಮತ್ತೆ ಕದ ತಟ್ಟಿದ Bird Flu, ಕೇಂದ್ರದಿಂದ ಮಹತ್ವದ ನಿರ್ಧಾರ

Bird Flu: ಹಕ್ಕಿ ಜ್ವರದ ಹಿನ್ನೆಲೆ ಕರ್ನಾಟಕ ಹಾಗೂ ಕೇರಳದ ಗಡಿಗೆ ಹೊಂದಿಕೊಂಡಂತೆ ಇರುವ ಪ್ರದೇಶಗಳಲ್ಲಿ ಹೈ ಅಲರ್ಟ್ ಜಾರಿಗೊಳಿಸಲಾಗಿದೆ. ಕರ್ನಾಟಕದ ಒಟ್ಟು ನಾಲ್ಕು ಜಿಲ್ಲೆಗಳಲ್ಲಿ ಅಲರ್ಟ್ ಜಾರಿಗೊಳಿಸಲಾಗಿದೆ.

Written by - Nitin Tabib | Last Updated : Jan 6, 2021, 01:49 PM IST
  • ದೇಶಾದ್ಯಂತ ಹೆಚ್ಚಾಗುತ್ತಿರುವ ಹಕ್ಕಿಜ್ವರ ಪ್ರಕರಣಗಳು.
  • ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಲರ್ಟ್ ಘೋಷಣೆ.
  • ನವದೆಹಲಿಯಲ್ಲಿ ಕಂಟ್ರೋಲ್ ರೂಮ್ ತೆರೆಯಲು ಮುಂದಾದ ಕೇಂದ್ರ ಸರ್ಕಾರ.
ಮತ್ತೆ ಕದ ತಟ್ಟಿದ Bird Flu, ಕೇಂದ್ರದಿಂದ ಮಹತ್ವದ ನಿರ್ಧಾರ title=
Bird Flu (File Photo)

ನವದೆಹಲಿ: Bird Flu - ಸುಮಾರು 6 ಕ್ಕೂ ಅಧಿಕ ರಾಜ್ಯಗಳಲ್ಲಿ ಹಕ್ಕಿಜ್ವರದ ಪ್ರಕರಣಗಳು ಪತ್ತೆಯಾದ ಕಾರಣ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡಿವೆ. ಇನ್ನೊಂದೆಡೆ ಕೇಂದ್ರ ಸರ್ಕಾರ ಕೂಡ ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ಕಂಟ್ರೋಲ್ ರೂಮ್ ರಧಿಸಿದ್ದು, ತನ್ಮೂಲಕ ಎಲ್ಲಾ ರಾಜ್ಯಗಳ ಜೊತೆಗೆ ಸಂಪರ್ಕ ಸಾಧಿಸಲಾಗುವುದು.

ಮಧ್ಯಪ್ರದೇಶದಲ್ಲಿ ಅತ್ಯಧಿಕ ಬರ್ಡ್ ಫ್ಲೂ ಪ್ರಕರಣಗಳು
ಕೊರೊನಾ ಸಂಕಷ್ಟದ ನಡುವೆ ಇದೀಗ ದೇಶಾದ್ಯಂತ ಹೆಚ್ಚಾಗುತ್ತಿರುವ ಬರ್ಡ್ ಫ್ಲೂ ಪ್ರಕರಣಗಳು ಬೆಚ್ಚಿಬೀಳಿಸತೊಡಗಿವೆ. ಮಧ್ಯ ಪ್ರದೇಶದಲ್ಲಿ ಹಕ್ಕಿ ಜ್ವರದ ಅತ್ಯದಿಕ ಪ್ರಕರಣಗಳು ಬೆಳಕಿಗೆ ಬಂದಿವೆ. ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾಗೆಗಳನ್ನು ಹತ್ಯೆಮಾಡಲಾಗಿದೆ ಹಾಗೂ ಅವುಗಳಲ್ಲಿ ಮಾರಕ ವೈರಸ್ ಪತ್ತೆಯಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ತುರ್ತು ಸಭೆ ನಡೆಸಿದ್ದಾರೆ.

ವಿವಿಧ ರಾಜ್ಯಗಳ ಕೋಳಿ ಫಾರ್ಮ್ ಗಳ ಸ್ಯಾಂಪಲ್ ಸಂಗ್ರಹಿಸಲಾಗುವುದು ಹಾಗೂ ಈ ಕುರಿತು ಶೀಘ್ರದಲ್ಲಿಯೇ ರಾಜ್ಯ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡಲಾಗುವುದು ಎನ್ನಲಾಗಿದೆ.

ಇದನ್ನು ಓದಿ- ಹಕ್ಕಿ ಜ್ವರದಿಂದ ಸುಮಾರು 25 ಸಾವಿರ ಪಕ್ಷಿಗಳ ಸಾವು, ಹೈಅಲರ್ಟ್ ಜಾರಿ

ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಹಾಗೂ ಕೇರಳದಲ್ಲಿ ಹಕ್ಕಿ ಜ್ವರ ಪ್ರಕರಣಗಳು ಬೆಳಕಿಗೆ ಬಂದ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಕೂಡ ದೆಹಲಿಯಲ್ಲಿ ಕಂಟ್ರೋಲ್ ರೂಮ್ ತೆರೆದಿದೆ. ತನ್ಮೂಲಕ ದೇಶದಲ್ಲಿ ವರದಿಯಾಗುತ್ತಿರುವ ಪ್ರಕರಣಗಳ ಮೇಲೆ ನಿಗಾವಹಿಸಲಾಗುವುದು ಎನ್ನಲಾಗಿದೆ.

ಕರ್ನಾಟಕದಲ್ಲಿ ಜಾರಿಯಾದ ಅಲರ್ಟ್
ಹಕ್ಕಿ ಜ್ವರದ ಅಪಾಯದ ಹಿನ್ನೆಲೆ ಕರ್ನಾಟಕ ಕೂಡ ಕೇರಳಕ್ಕೆ ಹೊಂದಿಕೊಂಡಂತೆ ಇರುವ ತನ್ನ ಗಡಿಯಲ್ಲಿ ಅಲರ್ಟ್ ಜಾರಿಗೊಳಿಸಿದೆ. ಕೇರಳ ಕೂಡ ಪ್ರಭಾವಿತಗೊಂಡ ಪ್ರದೇಶದಲ್ಲಿ ಹಕ್ಕಿಗಳ ಮಾರಣಹೋಮಕ್ಕೆ ಆದೇಶ ನೀಡಿದೆ.

ಭಾರತದಲ್ಲಿ ಇದುವರೆಗೆ ಮಧ್ಯಪ್ರದೇಶ, ರಾಜಸ್ಥಾನ, ಇಂದೋರ್, ಕೇರಳ ಹಾಗೂ ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ಬೆಳಕಿಗೆ ಬಂದಿವೆ. ಸುಮಾರು 10 ರಾಜ್ಯಗಳು ಈಗಾಗಲೇ ಅಲರ್ಟ್ ಘೋಷಿಸಿವೆ.

ಇದನ್ನು ಓದಿ- Corona Vaccine ನಿಮ್ಮ ಬಳಿ ಹೇಗೆ ತಲುಪಲಿದೆ ಗೊತ್ತೇ?

ಇಡೀ ವಿಶ್ವಾದ್ಯಂತ ಕೊರೊನಾ ವೈರಸ್ ನಿಂದ ಸುಮಾರು 18 ಲಕ್ಷ 64 ಸಾವಿರ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸ್ತುತ ಕೊರೊನಾ ವೈರಸ್ ಮೃತ್ಯುದರ ಶೇ.3ರಷ್ಟಾಗಿದ್ದು,, ಇದುವರೆಗಿನ ಹಕ್ಕಿ ಜ್ವರದ ಮೃತ್ಯುದರ ಶೇ. 60ರಷ್ಟಾಗಿದೆ. ಇದರರ್ಥ ಕೊರೊನಾ ವೈರಸ್ ಗಿಂತ ಹಕ್ಕಿಜ್ವರ ಮನುಷ್ಯರ ಪಾಲಿಗೆ ಹೆಚ್ಚು ಅಪಾಯಕಾರಿಯಾಗಿದೆ. ಬರ್ಡ್ ಫ್ಲೂ ಪ್ರಕರಣಗಳ ಮೃತ್ಯುದರ ಕೊರೊನಾ ಮೃತ್ಯುದರಕ್ಕಿಂತ 20 ಪಟ್ಟು ಹೆಚ್ಚಾಗಿದೆ.

ಏನಿದು ಬರ್ಡ್ ಫ್ಲೂ?
Avian Influenza ವೈರಸ್ ಆಗಿರುವ H5N1 ನಿಂದ ಹಕ್ಕಿ ಜ್ವರ ಬರುತ್ತದೆ. ಈ ವೈರಸ್ ಪಕ್ಷಿಗಳಿಂದ ಮನುಷರ ಶರೀರಕ್ಕೆ ತಲುಪುತ್ತದೆ. WHO ನೀಡಿರುವ ಮಾಹಿತಿ ಪ್ರಕಾರ ಈ ರೋಗ ಮನುಷ್ಯರಿಂದ ಮನುಷ್ಯರಿಗೆ ಹರಡುವುದು ಕಷ್ಟ. ಆದರೆ, ಇದೊಂದು ಮಾರಕ ವೈರಸ್ ಆಗಿದೆ. ಈ ವೈರಸ್ ನಿಂದ ಸಂಭವಿಸಿರುವ ಸಾವಿನ ಪ್ರಮಾಣ ಶೇ.60 ರಷ್ಟಿದೆ.

ಇದನ್ನು ಓದಿ-Moringa : ಹಿತ್ತಲಲ್ಲೇ ಸಿಗುವ ನುಗ್ಗೇಕಾಯಿಯಲ್ಲಿದೆ ಇಷ್ಟೊಂದು ಅದ್ಭುತ ಗುಣಗಳು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News