ನವದೆಹಲಿ : ಹಕ್ಕಿ ಜ್ವರ ದೇಶಾದ್ಯಂತ ಅಪಾಯದ ಕರೆಗಂಟೆ ಬಾರಿಸಿದೆ. ಕರೋನಾದಿಂದ ಕಂಗಾಲಾಗಿರುವ ಜನತೆಗೆ ಹಕ್ಕಿಜ್ವರ ದಿಗಿಲು ಮುಟ್ಟಿಸಿದೆ. ಕೇರಳದಿಂದ ಮೊದಲುಗೊಂಡು ದೇಶದ ಬಹುತೇಕ ಎಲ್ಲಾ ರಾಜ್ಯಗಳು ಹೈ ಅಲರ್ಟ್ ಘೋಷಿಸಿವೆ. ಕರ್ನಾಟಕದಲ್ಲಿ ಇದುವರೆಗೆ ಹಕ್ಕಿ ಜ್ವರ ಪತ್ತೆಯಾಗಿಲ್ಲ. ಆದರೂ ಸಮಸ್ತ ಮುನ್ನೆಚ್ಚರಿಕೆ ವಹಿಸಲಾಗಿದೆ.
ಹಕ್ಕಿ ಜ್ವರದ (Bird Flu) ಕಾರಣ ಬಹುತೇಕ ಎಲ್ಲಾ ರಾಜ್ಯಗಳು ಕೋಳಿ ಸಾಗಾಣಿಕೆಗೆ ನಿರ್ಬಂಧ ಹೇರಿವೆ. ಅಂತರರಾಜ್ಯ ಕೋಳಿ ಸಾಗಣೆ, ಕುಕ್ಕುಟೋತ್ಪನ್ನ ರವಾನೆಗೆ ನಿಷೇಧ ನಿರ್ಬಂಧವನ್ನೂ ಹೇರಲಾಗಿದೆ. ದೇಶಾದ್ಯಂತ ಪೌಲ್ಟ್ರಿ ಫಾರ್ಮಿಂಗ್ ಉದ್ಯಮ ಬಹುದೊಡ್ಡ ಸಂಕಟವನ್ನು ಎದುರಿಸುತ್ತಿದೆ. ಕೋಳಿ ಮಾಂಸ, ಮೊಟ್ಟೆಗಳಿಗೆ (Egg) ದಿಢೀರ್ ಬೇಡಿಕೆ ಕುಸಿದಿದೆ. ಬೆಲೆ ಕುಸಿದು ರೈತರು (Farmers) ಕಂಗಾಲಾಗಿದ್ದಾರೆ. ಹೊಟೆಲ್ ರೆಸ್ಟೋರೆಂಟ್ ಗಳಲ್ಲೂ ಚಿಕನ್ ಐಟಮ್ ಗಳಿಗೆ ಬೇಡಿಕೆ ಕುಸಿದಿದೆ. ಈ ಹೊತ್ತಿನಲ್ಲಿ ಮೂಡುವ ಮೊದಲ ಪ್ರಶ್ನೆ ಈ ಹೊತ್ತಲ್ಲಿ ಚಿಕನ್, ಮೊಟ್ಟೆ ತಿನ್ನಬಹುದೇ..? ಎನ್ನುವುದು.
ಇದನ್ನೂ ಓದಿ : Bird Flu : ಹಕ್ಕಿ ಜ್ವರ ತಡೆಯಲು ರಾಜ್ಯದಲ್ಲಿ ರೆಡಿಯಾಗಿದೆ ‘ಏಳು ಸುತ್ತಿನ ಕೋಟೆ’..!
ಚಿಕನ್, ಮೊಟ್ಟೆ ತಿಂದರೆ ಕೋಳಿ ಜ್ವರ ಬರುತ್ತಾ..?
ಇದೊಂದು ಪ್ರಶ್ನೆ ಹಕ್ಕಿ ಜ್ವರದ ಸಂದರ್ಭದಲ್ಲಿ ಸದಾ ಕಾಡುತ್ತಿರುತ್ತದೆ. ಹಕ್ಕಿ ಜ್ವರದ ವೈರಸ್ (Virus) ಹಕ್ಕಿಗಳಿಂದ ಹಕ್ಕಿಗಳಿಗೆ ಹರಡುತ್ತದೆ. ಇಂಥ ಹಕ್ಕಿಗಳ ನಿರಂತರ ಸಂಪರ್ಕಕ್ಕೆ ಬಂದ ವ್ಯಕ್ತಿಗೂ ಹಕ್ಕಿ ಜ್ವರ ಬರುವ ಸಾಧ್ಯತೆ ಇರುತ್ತದೆ. ಕೋಳಿ ಮಾಂಸ, ಕೋಳಿ ಮೊಟ್ಟೆ ತಿಂದರೆ ಕೋಳಿ ಜ್ವರ ಬರುತ್ತೆ ಎನ್ನುವ ಮಾತು ಕೂಡಾ ಚಾಲ್ತಿಯಲ್ಲಿದೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ (Market) ಚಿಕನ್ ಮತ್ತು ಮೊಟ್ಟೆ ಧಾರಣೆ ದಿಢೀರ್ ಕುಸಿಯುತ್ತದೆ. ಆದರೆ, ಕೋಳಿ ಮಾಂಸ ಅಥವಾ ಮೊಟ್ಟೆ ತಿಂದರೆ ಹಕ್ಕಿ ಜ್ವರ ಬರುತ್ತದೆ ಅನ್ನೋದಕ್ಕೆ ಇದೀಗ ಯಾವುದೇ ಪುರಾವೆ ಸಿಕ್ಕಿಲ್ಲ. ಆ ರೀತಿಯ ಪ್ರಕರಣವೂ ಇದುವರೆಗೆ ಪತ್ತೆ ಆಗಿಲ್ಲ.
ಆದರೆ ಮುನ್ನೆಚ್ಚರಿಕೆ ಅತೀ ಅವಶ್ಯಕ :
ಕೋಳಿ ಮಾಂಸ ತಿಂದರೆ, ಕೋಳಿ ಜ್ವರ ಬರಲ್ಲಅಂದ ಮಾತ್ರಕ್ಕೆ ಬೇಕಾಬಿಟ್ಟಿ ಮಾಡುವ ಅಗತ್ಯ ವಿಲ್ಲ. ಈ ಹೊತ್ತಿನಲ್ಲಿ ಚಿಕನ್ ಅಥವಾ ಮೊಟ್ಟೆಯ ಖಾದ್ಯ ಮಾಡುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿರುತ್ತದೆ. ಆದಷ್ಟೂ ಆರೋಗ್ಯಕಾರಿ ಕೋಳಿಯ ಮಾಂಸ ಅಥವಾ ಮೊಟ್ಟೆಯನ್ನು ಬಳಸುವುದು ಅತೀ ಅಗತ್ಯ. ಒಂದು ವೇಳೆ ಯಾವುದಾದರೂ ಕೋಳಿ ಫಾರಂನಲ್ಲಿ ಕೋಳಿಗಳು ರೋಗಗ್ರಸ್ತವಾಗಿ ಸಾಯುತ್ತಿದ್ದರೆ, ಅಲ್ಲಿನ ಕೋಳಿಗಳನ್ನು ಆಹಾರಕ್ಕೆ ಬಳಕೆ ಮಾಡಬಾರದು. ಅವುಗಳನ್ನು ಸರಿಯಾದ ವಿಧಾನದಲ್ಲಿ ಕೊಲ್ಲಬೇಕು. ಈ ವಿಚಾರದಲ್ಲಿ ಅತೀ ಮುನ್ನೆಚ್ಚರಿಗೆ ಅತ್ಯಾವಶ್ಯಕ.
ಇದನ್ನೂ ಓದಿ : ಹಕ್ಕಿ ಜ್ವರದಿಂದ ಸುಮಾರು 25 ಸಾವಿರ ಪಕ್ಷಿಗಳ ಸಾವು, ಹೈಅಲರ್ಟ್ ಜಾರಿ
ಮೊಟ್ಟೆ ಮತ್ತು ಮಾಂಸವನ್ನು ಸರಿಯಾಗಿ ಬೇಯಿಸಿ ತಿನ್ನಿ :
ಎಷ್ಟೇ ಜಾಗ್ರತೆವಹಿಸಿದ್ದರೂ ಹಕ್ಕಿ ಜ್ವರ ಸೋಂಕಿತ ಕೋಳಿಗಳ ಮಾಂಸ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿರುತ್ತವೆ. ಹಾಗಾಗಿ, ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಸರಿಯಾಗಿ ಬೇಯಿಸಲೇ ಬೇಕು. ಮೊಟ್ಟೆಯನ್ನು ಹಳದಿ ಲೋಳೆ ಗಟ್ಟಿಯಾಗುವ ತನಕವೂ ಬೇಯಿಸಿ. ಅರೆ ಬೆಂದ ಮೊಟ್ಟೆ ಅಂದರೆ Half boiled egg ಯಾವುದೇ ಕಾರಣಕ್ಕೆ ತಿನ್ನಬೇಡಿ. ಅಮ್ಲೇಟ್ ಮಾಡಿದರೆ, ಅದರ ಎರಡೂ ಬದಿ, ಮತ್ತು ಅದರ ಒಳಭಾಗ ಸಾಕಷ್ಟು ಬೆಂದಿದೆ ಎಂದು ಖಚಿತವಾದ ಮೇಲೆ ಸ್ವಾಹಾ ಮಾಡಿ.
ಇವೆಲ್ಲಾ ಹೇಳಿದ್ದು ವಿಶ್ವ ಆರೋಗ್ಯ ಸಂಸ್ಥೆ (WHO) :
ಇನ್ನು ಕೋಳಿ ಮಾಂಸದ ವಿಚಾರ. ಚಿಕನ್ 70 ಡಿಗ್ರಿ ಸೆಲ್ಸಿಯಸ್ ಉಷ್ಠಾಂಶದಲ್ಲಿ ಬೇಯಿಸಲೇ ಬೇಕು. ನಿಮಗೆ ಅಡುಗೆ ಮನೆಯಲ್ಲಿ ಖಾದ್ಯದ ಉಷ್ಣಾಂಶ ತಿಳಿಯಲು ಸಾಧ್ಯವಾಗದೇ ಹೋದರೆ, ಮಾಮೂಲಿಗಿಂತ 5 ರಿಂದ 10 ನಿಮಿಷ ಹೆಚ್ಚಿಗೆ ಬೇಯಿಸಿ. ನಿಮಗೆ ಗೊತ್ತಿರಲಿ 70 ಡಿಗ್ರಿ ಸೆಲ್ಸಿಯಸ್ ಉಷ್ಠಾಂಶದಲ್ಲಿ ಹಕ್ಕಿಜ್ವರದ ವೈರಸ್ ಸಾಯುತ್ತದೆ. ಹಾಗಾಗಿ, ನಿಮಗೆ ನಿಮ್ಮ ಕುಟುಂಬಕ್ಕೆ ಚಿಕನ್ ಖಾದ್ಯದಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಗೊತ್ತಿರಲಿ ಇದು ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟಿರುವ ಸಲಹೆ. (WHO)
ಒಂದು ವೇಳೆ ವೈರಸ್ ನಿಮ್ಮ ದೇಹಕ್ಕೆ ಬಂದು ಬಿಟ್ಟರೂ, ಅದು ದೇಹಕ್ಕೆ ಒಗ್ಗಿಕೊಳ್ಳಲು ಸಾಕಷ್ಟು ದಿನಗಳು ಬೇಕು. ಅಷ್ಟರಲ್ಲಿ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ (Immunity) ಚೆನ್ನಾಗಿದ್ದರೆ, ದೇಹಕ್ಕೆ ಬಂದ ವೈರಸ್ ದೇಹಕ್ಕೆ ಒಗ್ಗದೇ ಸಾಯುತ್ತದೆ. ಆದರೆ, ವೈರಸ್ ದೇಹಕ್ಕೆ ಒಗ್ಗಿ ಬಿಟ್ಟರೆ ಅದು ಸಾಂಕ್ರಾಮಿಕವಾಗಿ ಹರಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.