ರಾತ್ರಿ ಕಾಣಿಸುವ ಈ ಲಕ್ಷಣಗಳು ಹೇಳುತ್ತವೆ ಕಿಡ್ನಿ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ ಎಂದು
Kidney Damage Symptoms at Night: ಕಿಡ್ನಿಯಲ್ಲಿ ಸಮಸ್ಯೆ ಉಂಟಾದಾಗ ದೇಹ ನಮಗೆ ಈ ಬಗ್ಗೆ ಸಣ್ಣ ಸುಳಿವು ನೀಡುತ್ತದೆ. ರಾತ್ರಿ ವೇಳೆಯಲ್ಲಿ ನಿಮ್ಮ ದೇಹದಲ್ಲಿ ಆಗುವ ಕೆಲವು ಬದಲಾವಣೆಗಳಿಂದ ಕಿಡ್ನಿ ಆರೋಗ್ಯ ಕೆಟ್ಟಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.
Kidney Damage Symptoms at Night : ಮೂತ್ರಪಿಂಡಗಳು ನಮ್ಮ ಹೊಟ್ಟೆಯೊಳಗೆ ಇರುವ ಒಂದು ಜೋಡಿ ಅಂಗಗಳಾಗಿವೆ. ಅದರ ಸಹಾಯದಿಂದ,ರಕ್ತದಲ್ಲಿನ ತ್ಯಾಜ್ಯ ವಸ್ತುಗಳು ಮತ್ತು ಹೆಚ್ಚುವರಿ ನೀರನ್ನು ದೇಹದಿಂದ ಹೊರ ಹಾಕಲಾಗುತ್ತದೆ.ಇದಲ್ಲದೆ ಮೂತ್ರಪಿಂಡಗಳು ದೇಹದಲ್ಲಿನ ರಾಸಾಯನಿಕಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.ಮೂತ್ರಪಿಂಡಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಹಾರ್ಮೋನುಗಳನ್ನು ಉತ್ಪಾದಿಸುತ್ತವೆ. ಮೂತ್ರಪಿಂಡಗಳು ಆರೋಗ್ಯಕರವಾಗಿಲ್ಲದಿದ್ದರೆ,ದೇಹದ ಅನೇಕ ಕಾರ್ಯಗಳು ಸ್ಥಗಿತಗೊಳ್ಳಬಹುದು.ಮೂತ್ರಪಿಂಡ ವೈಫಲ್ಯ ಸಂಭವಿಸುವ ಮೊದಲು,ನಮ್ಮ ದೇಹವು ಅನೇಕ ಸಂಕೇತಗಳನ್ನು ನೀಡುತ್ತದೆ.ಈ ಚಿಹ್ನೆಗಳನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆಯನ್ನು ಪ್ರಾರಂಭಿಸಬಹುದು.
ಮುಖ ಊದಿಕೊಳ್ಳುವುದು :
ಕಣ್ಣುರೆಪ್ಪೆಯ ಮೇಲೆ ಕಾಣಿಸಿಕೊಳ್ಳುವ ಊತ ಮೂತ್ರಪಿಂಡದ ಸಮಸ್ಯೆಗಳನ್ನು ಸೂಚಿಸುತ್ತದೆ. ಮೂತ್ರಪಿಂಡದ ವೈಫಲ್ಯದಿಂದಾಗಿ, ತ್ಯಾಜ್ಯ ಉತ್ಪನ್ನಗಳು ದೇಹದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಇದರಿಂದಾಗಿ ಮುಖದ ಮೇಲೆ ಊತ ಕಾಣಿಸಿಕೊಳ್ಳುತ್ತದೆ.ಮುಖದ ಮೇಲೆ ಊತ ಕಂಡುಬಂದರೆ ಒಮ್ಮೆ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು.
ಇದನ್ನೂ ಓದಿ : ಮಾನ್ಸೂನ್‌ನಲ್ಲಿ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ 5 ಸೂಪರ್‌ಫುಡ್‌ಗಳು
ಕಾಲುಗಳಲ್ಲಿ ಊತ :
ರಾತ್ರಿ ವೇಳೆ ನಿಮ್ಮ ಕಾಲುಗಳ ಸುತ್ತಲೂ ಊತ ಕಾಣಿಸಿಕೊಂಡರೆ ಅದು ಸಾಮಾನ್ಯ ಎಂದುಕೊಂಡು ನಿರ್ಲಕ್ಷಿಸಬೇಡಿ.ಇದು ಕಿಡ್ನಿ ಸಮಸ್ಯೆಯ ಸಂಕೇತವಾಗಿರಬಹುದು.
ತುಂಬಾ ದಣಿವಾಗುವುದು :
ಹಗಲಿನಲ್ಲಿ ನಾವು ಕೆಲಸದಲ್ಲಿ ಎಷ್ಟು ನಿರತರಾಗುತ್ತೇವೆ ಎಂದರೆ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಕೂಡಾ ಗಮನಿಸುವುದಿಲ್ಲ. ಆದರೆ ರಾತ್ರಿ ವಿಶ್ರಾಂತಿ ಮಾಡುವಾಗಲೂ ಸುಸ್ಗುತ್ತಿದ್ದರೆ ಅದು ಅಪಾಯದ ಗಂಟೆ. ಸಾಕಷ್ಟು ವಿಶ್ರಾಂತಿ ತೆಗೆದುಕೊಂಡರೂ ಆಯಾಸ ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಸ್ನಾಯು ಸೆಳೆತ :
ರಾತ್ರಿಯಲ್ಲಿ ಕಾಲುಗಳಲ್ಲಿ ನೋವು ಮತ್ತು ಒತ್ತಿ ಹಿಡಿದಂತ ಅನುಭವವಾಗುವುದು ಮೂತ್ರಪಿಂಡದ ಹಾನಿಯನ್ನು ಸೂಚಿಸುತ್ತದೆ. ರಾತ್ರಿ ಇಂತಹ ರೋಗಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ತೋರದೆ ವೈದ್ಯರನ್ನು ಸಂಪರ್ಕಿಸಿ.
ಇದನ್ನೂ ಓದಿ : ಸಂಧಿವಾತದ ಸಂದರ್ಭದಲ್ಲಿ ಈ 5 ತರಕಾರಿಗಳನ್ನು ತಿನ್ನಬೇಡಿ
ನಿದ್ದೆ ಬಾರದೆ ಇರುವುದು :
ಕಿಡ್ನಿ ವೈಫಲ್ಯದಿಂದ ರಾತ್ರಿ ಮಲಗಲು ತುಂಬಾ ತೊಂದರೆಯಾಗುತ್ತದೆ. ವಿನಾ ಕಾರಣ ನಿದ್ದೆ ಬರುತ್ತಿಲ್ಲ ಎಂದಾದರೆ ತಜ್ಞರನ್ನು ಒಮ್ಮೆ ಸಂಪರ್ಕಿಸಿ. ಆದ್ದರಿಂದ ನಿಮ್ಮ ಚಿಕಿತ್ಸೆಯನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭಿಸಬಹುದು.
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.