ಮಾನ್ಸೂನ್‌ನಲ್ಲಿ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ 5 ಸೂಪರ್‌ಫುಡ್‌ಗಳು

Foods To Control Cholesterol: ಪೋಷಕಾಂಶ-ಭರಿತ ಆಹಾರಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ತುಂಬಾ ಪ್ರಯೋಜನಕಾರಿ ಆಗಿದೆ. ಆಹಾರ ತಜ್ಞರ ಪ್ರಕಾರ, ಮಳೆಗಾಲದಲ್ಲಿ ಕೆಲವು ಆಹಾರಗಳ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /10

ಹೆಚ್ಚಿನ ಆರ್ದ್ರತೆ ಮತ್ತು ಆಹಾರದ ಬದಲಾವಣೆಗಳು ಹೃದಯರಕ್ತನಾಳದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೂ ಕಾರಣವಾಗಬಹುದು. 

2 /10

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಇದು ಹೃದಯರಕ್ತನಾಳದ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಇದರಿಂದಾಗಿ ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕೂಡ ಹೆಚ್ಚಿಸುತ್ತದೆ. 

3 /10

ದೇಹದಲ್ಲಿ ಉತ್ತಮ ಮಟ್ಟವು ಸರಿಯಾದ ರಕ್ತ ಪರಿಚಲನೆಯನ್ನು ಬೆಂಬಲಿಸುವುದರೊಂದಿಗೆ  ಹೃದಯ ಸ್ತಂಭನದ ಅಪಾಯವನ್ನೂ ಕಡಿಮೆ ಮಾಡಿ, ಒಟ್ಟಾರೆಯಾಗಿ ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ. 

4 /10

ಮಳೆಗಾಲದಲ್ಲಿ ಚುಮು-ಚುಮು ಚಳಿಗೆ ಕುರುಕಲು ತಿಂಡಿಗಳ ಬಳಕೆ ಸಾಮಾನ್ಯಕ್ಕಿಂತ ಹೆಚ್ಚು. ಹಾಗಾಗಿ ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಪಾಯವನ್ನು ಹೆಚ್ಚಿಸಬಹುದು. ಇದನ್ನು ತಪ್ಪಿಸಲು ಕೆಲವು ಆಹಾರಗಳು ಹೆಚ್ಚು ಪ್ರಯೋಜನಕಾರಿ ಆಗಿವೆ. ಅಂತಹ ಐದು ಸೂಪರ್‌ಫುಡ್‌ಗಳು ಇಲ್ಲಿವೆ... 

5 /10

ಸಾಮಾನ್ಯವಾಗಿ ತೂಕ ಇಳಿಕೆಗೆ ಸೂಪರ್‌ಫುಡ್‌ ಎಂದು ಪರಿಗಣಿಸಲಾಗಿರುವ ಓಟ್ಸ್ ನಲ್ಲಿ ಕರಗುವ ಫೈಬರ್ ಸಮೃದ್ಧವಾಗಿದೆ. ನಿತ್ಯ ಬೆಳಿಗ್ಗೆ ಉಪಹಾರದಲ್ಲಿ ಓಟ್ಸ್ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಾನ್ಸೂನ್‌ನಲ್ಲಿ ಆರೋಗ್ಯಕರ ಹೃದಯಕ್ಕೆ ಇದು ಅತ್ಯುತ್ತಮ ಆಯ್ಕೆ. 

6 /10

ನಟ್ಸ್ ಗಳಲ್ಲಿ ಅದರಲ್ಲೂ ಬಾದಾಮಿ, ವಾಲ್‌ನಟ್ಸ್ ಗಳಲ್ಲಿ ಫೈಬರ್, ಸಸ್ಯ ಸ್ಟೆರಾಲ್‌ಗಳು ಮತ್ತು ಅಪರ್ಯಾಪ್ತ ಕೊಬ್ಬಿನ ಪ್ರಮಾಣ ಅಧಿಕವಾಗಿದ್ದು, ಇದು ನೈಸರ್ಗಿಕವಾಗಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

7 /10

ಸಾರ್ಡೀನ್‌ಗಳು, ಸಾಲ್ಮನ್‌ಗಳು ಮತ್ತು ಮ್ಯಾಕೆರೆಲ್‌ಗಳಂತಹ ಕೊಬ್ಬಿನ ಮೀನುಗಳು ಒಮೆಗಾ-3 ಕೊಬ್ಬಿನಾಮ್ಲಗಳ ಅತ್ಯುತ್ತಮ ಮೂಲಗಳಾಗಿವೆ. ನಿಮ್ಮ ದೈನಂದಿನ ಆಹಾರದಲ್ಲಿ ಇವುಗಳ ಬಳಕೆಯೂ ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಒಟ್ಟಾರೆ ಹೃದಯರಕ್ತನಾಳದ ಆರೋಗ್ಯವನ್ನು ಉತ್ತೇಜಿಸುತ್ತದೆ.

8 /10

ಮೊನೊಸ್ಯಾಚುರೇಟೆಡ್ ಕೊಬ್ಬುಗಳಲ್ಲಿ ಸಮೃದ್ಧವಾಗಿರುವ ಆಲಿವ್ ಆಯಿಲ್ ಬಳಕೆಯಿಂದ ಇದು ಕೆಟ್ಟ ಕೊಲೆಸ್ಟ್ರಾಲ್/ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ, ಉತ್ತಮ ಕೊಲೆಸ್ಟ್ರಾಲ್ (ಎಚ್‌ಡಿ‌ಎಲ್) ಮಟ್ಟವನ್ನು ಹೆಚ್ಚಿಸುತ್ತದೆ. 

9 /10

ಬೀನ್ಸ್‌ನಲ್ಲಿ ಕರಗುವ ನಾರಿನಂಶ ಕಂಡುಬರುವುದರಿಂದ ಇದು ದೇಹದಲ್ಲಿ ಎಲ್‌ಡಿ‌ಎಲ್ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಪರಿಣಾಮಕಾರಿ ಆಹಾರವಾಗಿದೆ. ನಿಮ್ಮ ಆಹಾರದಲ್ಲಿ ಬೀನ್ಸ್ ಬಳಕೆಯು ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ. 

10 /10

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.