ಈ ಹಣ್ಣುಗಳನ್ನು ಸಿಪ್ಪೆ ಸಮೇತ ತಿನ್ನಿ...‌ ಬಿಪಿ, ಶುಗರ್, ಕೊಲೆಸ್ಟ್ರಾಲ್‌ ಎಲ್ಲವೂ ಒಂದೇ ಬಾರಿಗೆ ನಿಯಂತ್ರಣವಾಗುತ್ತೆ!

Edible fruits with peel: ಕೆಲವರು ಕೆಲ ಹಣ್ಣುಗಳ ಸಿಪ್ಪೆ ತೆಗೆದು ತಿನ್ನುತ್ತಾರೆ. ಆದರೆ ಹಣ್ಣುಗಳನ್ನು ಸಿಪ್ಪೆ ಸಮೇತ ತಿಂದರೆ ಪ್ರಯೋಜನ ದುಪ್ಪಟ್ಟಾಗಿರುತ್ತದೆ. ಅಂತಹ ಹಣ್ಣುಗಳು ಯಾವುವು ಎಂಬುದನ್ನು ತಿಳಿಯೋಣ. 

Written by - Bhavishya Shetty | Last Updated : Jul 22, 2024, 08:42 PM IST
    • ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ
    • ಹಣ್ಣುಗಳನ್ನು ಸಿಪ್ಪೆ ಸಮೇತ ತಿಂದರೆ ಪ್ರಯೋಜನ ದುಪ್ಪಟ್ಟಾಗಿರುತ್ತದೆ
    • ಅಂತಹ ಹಣ್ಣುಗಳು ಯಾವುವು ಎಂಬುದನ್ನು ತಿಳಿಯೋಣ
ಈ ಹಣ್ಣುಗಳನ್ನು ಸಿಪ್ಪೆ ಸಮೇತ ತಿನ್ನಿ...‌ ಬಿಪಿ, ಶುಗರ್, ಕೊಲೆಸ್ಟ್ರಾಲ್‌ ಎಲ್ಲವೂ ಒಂದೇ ಬಾರಿಗೆ ನಿಯಂತ್ರಣವಾಗುತ್ತೆ! title=
File Photo

Edible fruits with peel: ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ನಿತ್ಯವೂ ಯಾವುದಾದರೂ ಒಂದು ಹಣ್ಣನ್ನು ಆಹಾರದಲ್ಲಿ ಸೇರಿಸುವುದರಿಂದ ಅನೇಕ ರೋಗಗಳಿಂದ ಮುಕ್ತಿ ಸಿಗುತ್ತದೆ. ಆದರೆ ಕೆಲವರು ಕೆಲ ಹಣ್ಣುಗಳ ಸಿಪ್ಪೆ ತೆಗೆದು ತಿನ್ನುತ್ತಾರೆ. ಆದರೆ ಹಣ್ಣುಗಳನ್ನು ಸಿಪ್ಪೆ ಸಮೇತ ತಿಂದರೆ ಪ್ರಯೋಜನ ದುಪ್ಪಟ್ಟಾಗಿರುತ್ತದೆ. ಅಂತಹ ಹಣ್ಣುಗಳು ಯಾವುವು ಎಂಬುದನ್ನು ತಿಳಿಯೋಣ. 

ಇದನ್ನೂ ಓದಿ:  ಪಿರಿಯಡ್ ಟೈಮ್ ನಲ್ಲಿ ಬಾಯ್ ಫ್ರೆಂಡ್ ಜೊತೆ.... ಜಾನ್ವಿ ಕಪೂರ್ ಶಾಕಿಂಗ್ ಕಾಮೆಂಟ್!  

ಕಿವಿ ಹಣ್ಣು: ಇದು ಸ್ವಲ್ಪ ದುಬಾರಿಯೇ.. ಆದರೆ ಇದರ ಆರೋಗ್ಯಕಾರಿ ಪ್ರಯೋಜನಗಳು ಕೂಡ ಜಾಸ್ತಿ. ಡೆಂಗ್ಯೂ ಪೀಡಿತರಲ್ಲಿ ಪ್ಲೇಟ್ ಲೆಟ್ʼಗಳ ಸಂಖ್ಯೆ ಹೆಚ್ಚಲು ಕಿವಿ ಹಣ್ಣನ್ನು ವಿಶೇಷವಾಗಿ ಸೇವಿಸಬೇಕು ಎನ್ನುತ್ತಾರೆ ವೈದ್ಯರು. ಇನ್ನು ಕಿವಿ ಹಣ್ಣಿನ ಚರ್ಮವು ಒರಟಾಗಿರುತ್ತದೆ ಮತ್ತು ದೃಢವಾಗಿರುತ್ತದೆ. ಹೀಗಾಗಿ ಅದನ್ನು ತಿನ್ನಲು ಯಾರೂ ಇಷ್ಟಪಡುವುದಿಲ್ಲ.. ಆದರೆ, ಕಿವಿ ಹಣ್ಣಿನ ಸಿಪ್ಪೆಯಲ್ಲಿ ಆ್ಯಂಟಿಆಕ್ಸಿಡೆಂಟ್, ಫ್ಲೇವನಾಯ್ಡ್ ಮತ್ತು ವಿಟಮಿನ್ ಸಿ ಸಿಗುತ್ತದೆ. ಸಿಪ್ಪೆಯು ತಿರುಳಿಗಿಂತ ಹೆಚ್ಚು ಪೌಷ್ಟಿಕವಾಗಿದೆ.

ಡ್ರ್ಯಾಗನ್ ಹಣ್ಣು: ಇತ್ತೀಚಿಗೆ ಹೆಚ್ಚು ಜನಪ್ರಿಯವಾಗಿರುವ ಡ್ರ್ಯಾಗನ್ ಫ್ರೂಟ್ ಸಿಪ್ಪೆ ತೆಗೆದೇ ತಿನ್ನುತ್ತೇವೆ. ಆದರೆ ಡ್ರ್ಯಾಗನ್ ಫ್ರೂಟ್ ನ ಸಿಪ್ಪೆ ತುಂಬಾ ಆರೋಗ್ಯಕರ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಸಿಪ್ಪೆಯಲ್ಲಿ ಉತ್ಕರ್ಷಣ ನಿರೋಧಕಗಳು, ಫೈಬರ್ ಮತ್ತು ಬೆಟಾಸಯಾನಿನ್‌ʼಗಳು ಸಮೃದ್ಧವಾಗಿವೆ. ಇದು ಉತ್ತಮ ಪ್ರಮಾಣದ ಆಂಥೋಸಯಾನಿನ್‌ಗಳನ್ನು ಸಹ ಒಳಗೊಂಡಿದೆ. ತೂಕ ಇಳಿಸಲು ಕೂಡ ಸಹಾಯ ಮಾಡುತ್ತವೆ. ಡ್ರ್ಯಾಗನ್ ಹಣ್ಣಿನ ಸಿಪ್ಪೆಯಲ್ಲಿರುವ ಆಹಾರದ ಫೈಬರ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ.

ಪಿಯರ್: ಈ ಹಣ್ಣನ್ನು ತಿನ್ನುವಾಗ ಸೇಬು ಹಣ್ಣಿನಂತೆ ಸ್ವಾದದ ಅನುಭವವಾಗುತ್ತದೆ. ಇದು ಕೊಲೆಸ್ಟ್ರಾಲ್, ಮಲಬದ್ಧತೆ, ಮಧುಮೇಹ ಮತ್ತು ಕ್ಯಾನ್ಸರ್ ಅನ್ನು ದೂರವಿಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.  ಈ ಹಣ್ಣಿನ ಸಿಪ್ಪೆಯಲ್ಲಿ ಫೈಬರ್ ಇದ್ದು, ತೂಕ ಇಳಿಕೆಗೆ ಇದು ಸಹಾಯಕ. 

ಸೀಬೆಹಣ್ಣು: ಪೇರಲೆ.. ಅಗ್ಗವಾಗಿ ಎಲ್ಲೆಡೆ ಸಿಗುವ ಹಣ್ಣು.. ಇದನ್ನು ಸಾಮಾನ್ಯವಾಗಿ ಸಿಪ್ಪೆ ಸಮೇತ ತಿನ್ನಲಾಗುತ್ತದೆ. ಇದರ ಸಿಪ್ಪೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಚರ್ಮದ ಕೋಶಗಳನ್ನು ಪುನರುತ್ಪಾದಿಸುತ್ತದೆ. ಅಷ್ಟೇ ಅಲ್ಲದೆ, ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡುತ್ತದೆ. ಮೊಡವೆಗಳನ್ನೂ ತಡೆಯುತ್ತದೆ.

ಸೇಬು: ನಮ್ಮಲ್ಲಿ ಹಲವರು ಸಿಪ್ಪೆ ತೆಗೆದು ಸೇಬು ತಿನ್ನುತ್ತಾರೆ. ಆದರೆ ಹೀಗೆ ಮಾಡುವುದರಿಂದ ಅನೇಕ ಪೋಷಕಾಂಶಗಳು ವ್ಯರ್ಥವಾಗಿ ಹೋಗುತ್ತವೆ.  ಸೇಬಿನ ಚರ್ಮವು ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಕೆ ಯಲ್ಲಿ ಸಮೃದ್ಧವಾಗಿದೆ. ಇದು ಪೊಟ್ಯಾಸಿಯಮ್, ರಂಜಕ ಮತ್ತು ಕ್ಯಾಲ್ಸಿಯಂ ಅನ್ನು ಸಹ ಒಳಗೊಂಡಿದೆ. 

ಇದನ್ನೂ ಓದಿ:   ಕ್ರಿಕೆಟ್‌ ಬಳಿಕ ಈ ಕ್ಷೇತ್ರವೇ ವಿರಾಟ್‌ ಕೊಹ್ಲಿ ಮುಂದಿನ ಗುರಿ...

(ಸೂಚನೆ: ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ವಿವರಗಳನ್ನು ನಿಮಗೆ ಒದಗಿಸಲಾಗಿದೆ. ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಜೀ ಕನ್ನಡ ನ್ಯೂಸ್ ಯಾವುದೇ ಮಾಹಿತಿಗೆ ಜವಾಬ್ದಾರನಾಗಿರುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News