Breastfeeding Diet : ಒಂದು ಉತ್ತಮ ಸಮತೋಲಿತ ಮತ್ತು ಪೌಷ್ಟಿಕ ಆಹಾರ ಕ್ರಮವು ಶುಶ್ರೂಷೆಯಲ್ಲಿರುವ ತಾಯಂದಿರಿಗೆ ಮತ್ತು ಅವರ ಮಗುವಿಗೆ ಸಾಕಷ್ಟು ಶಕ್ತಿ ಮತ್ತು ಪೋಷಕಾಂಶಗಳನ್ನು ನೀಡುವುದನ್ನು ಖಾತರಿಪಡಿಸುತ್ತದೆ. ತಾಯಂದಿರಿಗೆ ಪ್ರಯೋಜನವಾಗುವಂತಹ ಐದು ಆಹಾರಗಳು ಇಲ್ಲಿವೆ. 


COMMERCIAL BREAK
SCROLL TO CONTINUE READING

ಓಟ್ಸ್: ಓಟ್ಸ್ ಅತ್ಯುತ್ತಮವಾದ ಫೈಬರ್, ಕಬ್ಬಿಣ ಮತ್ತು ಶಕ್ತಿಯನ್ನು ತುಂಬುವಂತಹ ಅಂಶಗಳ ಮೂಲವಾಗಿವೆ. ಇವುಗಳು ಹಾಲಿನ ಪೂರೈಕೆಯನ್ನು ವೃದ್ಧಿಸುತ್ತವೆ ಮತ್ತು ತಾಯಿಯನ್ನು ಪರಿಪೂರ್ಣಳಾಗುವಂತೆ ಮತ್ತು ತೃಪ್ತಿಯನ್ನು ಹೊಂದುವಂತೆ ಮಾಡುತ್ತವೆ. ಹೆಚ್ಚುವರಿಯಾಗಿ, ಓಟ್ಸ್ ಬೆಟಾ-ಗ್ಲೂಕಾನ್ ಎಂದು ಕರೆಯಲಾಗುವ ಒಂದು ಬಗೆಯ ಫೈಬರ್ ಅಂಶವನ್ನು ಒಳಗೊಂಡಿವೆ. ಇವು ತಾಯಿ ಮತ್ತು ಮಗು ಇಬ್ಬರಲ್ಲೂ ರೋಗನಿರೋಧಕ ಶಕ್ತಿಯ ಅಂಶಗಳನ್ನು ಹೊಂದಿವೆ. 


ಸಲ್ಮೋನ್: ಸಲ್ಮೋನ್ ನಂತಹ ಕೊಬ್ಬಿನ ಮೀನುಗಳು ಒಮೆಗಾ-3 ಕೊಬ್ಬಿನ ಆಮ್ಲಗಳಲ್ಲಿ ಸಮೃದ್ಧವಾಗಿವೆ. ವಿಶೇಷವಾಗಿ DHA (ಡೊಕೊಸಾಹೆಕ್ಸೆನೊಯಿಕ್ ಆಮ್ಲ), ಇದು ಮಗುವಿನ ಮೆದುಳು ಮತ್ತು ಕಣ್ಣಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಪ್ರೊಟೀನ್ ಮತ್ತು ವಿಟಮಿನ್ ಡಿ ಯ ಉತ್ತಮ ಮೂಲವಾಗಿದ್ದು, ತಾಯಿಯ ಆರೋಗ್ಯಕ್ಕೆ ಮುಖ್ಯವಾಗಿದೆ.


ಇದನ್ನೂ ಓದಿ: ನೀವು ಹೆಚ್ಚು ಜೇನುತುಪ್ಪವನ್ನು ಸೇವಿಸುತ್ತಿದ್ದೀರಾ? ಬಿಪಿ ಬರುವುದು ಖಚಿತ.. ಯಾಕೆ ಗೊತ್ತಾ?


ಸೊಪ್ಪು: ಪಾಲಕ, ಕಾಲೆ ಮತ್ತು ಕೋಸುಗೆಡ್ಡೆಯಂತಹ ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಫೋಲೇಟ್ ನಂತಹ ಅತ್ಯಗತ್ಯವಾದ ಪೋಷಕಾಂಶಗಳು ಇರುತ್ತವೆ. ಈ ಪೋಷಕಾಂಶಗಳು ತಾಯಿಯ ಯೋಗಕ್ಷೇಮದ ಜೊತೆಗೆ ಮಗುವಿನ ಬೆಳವಣಿಗೆಗೆ ಹೆಚ್ಚು ಪ್ರಯೋಜನಕಾರಿಯಾಗಿವೆ.


ಗ್ರೀಕ್ ಯೋಗರ್ಟ್: ಗ್ರೀಕ್ ಯೋಗರ್ಟ್ ಕ್ಯಾಲ್ಸಿಯಂ ಮತ್ತು ಪ್ರೊಟೀನ್ ನ ಕಣಜವಾಗಿದೆ. ಮೂಳೆಗಳನ್ನು ಗಟ್ಟಿಗೊಳಿಸಲು ಮತ್ತು ಮಗುವಿನ ಬೆಳವಣಿಗೆಗೆ ಬೆಂಬಲವಾಗಿದೆ. ಇದರಲ್ಲಿ ಪ್ರೊಬಯೋಟಿಕ್ಸ್ ಇದ್ದು, ತಾಯಿ ಮತ್ತು ಮಗುವಿನ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.


ದ್ವಿದಳ ಧಾನ್ಯಗಳು: ಲೆಂಟಿಲ್ಸ್, ಕಡಲೆ ಮತ್ತು ಬೀನ್ಸ್ ಪ್ರೊಟೀನ್, ಫೈಬರ್, ಕಬ್ಬಿಣ ಮತ್ತು ಇತರ ಅಗತ್ಯ ಪೋಷಕಾಂಶಗಳ ಅತ್ಯುತ್ತಮ ಮೂಲಗಳಾಗಿವೆ. ಅವುಗಳನ್ನು ಸುಲಭವಾಗಿ ಸೂಪ್ ಗಳು, ಸ್ಟ್ಯೂಗಳು, ಸಲಾಡ್ ಗಳು ಅಥವಾ ಆಹಾರವಾಗಿ ಬಳಸಬಹುದಾಗಿದೆ.


ನಟ್ಸ್ & ಸೀಡ್ ಗಳು: ಬಾದಾಮಿ, ವಾಲ್ ನಟ್ಸ್, ಚಿಯಾ ಬೀಜಗಳು ಮತ್ತು ಅಗಸೆ ಬೀಜಗಳಲ್ಲಿ ಆರೋಗ್ಯಕರವಾದ ಕೊಬ್ಬು, ಪ್ರೊಟೀನ್ ಮತ್ತು ಅಗತ್ಯವಾದ ಖನಿಜಗಳನ್ನು ಒದಗಿಸುವ ಪೌಷ್ಟಿಕತೆಯನ್ನು ಹೊಂದಿರುತ್ತವೆ. ಈ ಆಹಾರಗಳು ತಾಯಿಯ ಒಟ್ಟಾರೆ ಪೋಷಣೆಗೆ ಕೊಡುಗೆ ನೀಡುವುದಲ್ಲದೇ ಮಗುವಿಗೆ ಅಗತ್ಯವಿರುವ ಹಾಲು ಉತ್ಪತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.


ಈ ಆಹಾರ ಪದಾರ್ಥಗಳ ಜೊತೆಗೆ ಹಾಲುಣಿಸುವ ತಾಯಂದಿರು ನಿರ್ಜಲೀಕರಣವನ್ನು ದೂರ ಮಾಡಲು ದಿನವಿಡೀ ಸಾಕಷ್ಟು ನೀರನ್ನು ಕುಡಿಯಬೇಕು. ಇದರಿಂದ ಸ್ತನ್ಯಪಾನದ ದ್ರವದ ಅಗತ್ಯವನ್ನು ಹೆಚ್ಚಿಸಬಹುದು. ಪ್ರತಿಯೊಬ್ಬ ವ್ಯಕ್ತಿಯ ಪೌಷ್ಟಿಕಾಂಶದ ಅಗತ್ಯತೆಗಳು ಬದಲಾಗುತ್ತವೆ ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ ನಿಮ್ಮ ನಿರ್ದಿಷ್ಟ ಅಗತ್ಯತೆಗಳು ಮತ್ತು ಆಹಾರದ ನಿರ್ಬಂಧಗಳಿಗೆ ಸರಿ ಹೊಂದುವ ರೀತಿಯಲ್ಲಿ ಆಹಾರ ಕ್ರಮಗಳನ್ನು ಪರ್ಸನಲೈಸ್ ಮಾಡಿಕೊಳ್ಳಿ. ಇದಕ್ಕಾಗಿ ಆರೋಗ್ಯ ತಜ್ಞರು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸಿ ಅವರ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ. ಅತಿಯಾದ ಕೆಫೀನ್ ಮತ್ತು ಆಲ್ಕೋಹಾಲ್ ಸೇವನೆಯನ್ನು ನಿರ್ಬಂಧಿಸಿ. ಏಕೆಂದರೆ, ಈ ಹಾನಿಕಾರಕ ಪಾನೀಯಗಳ ಅಂಶಗಳು ಎದೆಹಾಲಿನಲ್ಲಿ ಸೇರಿಕೊಂಡು ಮಗುವಿನ ಮೇಲೆ ಪರಿಣಾಮ ಬೀರುತ್ತದೆ.


ಇದನ್ನೂ ಓದಿ: ʼಆಸ್ತಮಾʼ ಮತ್ತು ʼಶ್ವಾಸಕೋಶʼ ಸಮಸ್ಯೆಗಳಿಂದ ಬಳಲುತ್ತಿದ್ದೀರಾ..! ಈ ಆಹಾರಗಳನ್ನು ತಪ್ಪದೇ ಸೇವಿಸಿ


ಸ್ತನ್ಯಪಾನವು ನೈಸರ್ಗಿಕ ಮತ್ತು ಪ್ರಯೋಜನಕಾರಿಯಾಗಿದ್ದರೂ, ಹೊಸ ತಾಯಂದಿರಿಗೆ ಇದು ಕೆಲವೊಮ್ಮೆ ಸವಾಲಾಗಿ ಪರಿಣಮಿಸಬಹುದು. ಯಾವುದೇ ತೊಂದರೆಗಳನ್ನು ಅಥವಾ ಸಮಸ್ಯೆಗಳನ್ನು ನಿವಾರಿಸಿಕೊಂಡು ಯಶಸ್ವಿಯಾಗಿ ಮಗುವಿಗೆ ಹಾಲುಣಿಸುವುದನ್ನು ಅಭ್ಯಾಸ ಮಾಡಿಕೊಳ್ಳಲು ತಾಯಂದಿರು ಹಾಲುಣಿಸುವ ಬಗ್ಗೆ ಪರಿಣತಿ ಹೊಂದಿರುವ ತಜ್ಞರ ಸಲಹೆಗಳನ್ನು ಪಡೆದುಕೊಳ್ಳಬಹುದು ಅಥವಾ ಸ್ತನ್ಯಪಾನದ ವಿಚಾರದಲ್ಲಿ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕೆಂದು ಹೇಳಿಕೊಡುವ ತರಗತಿಗಳಿಗೆ ಹಾಜರಾಗಿ ಸಲಹೆಗಳನ್ನು ಪಡೆದುಕೊಳ್ಳಬಹುದು. ಒಂದು ವೇಳೆ ತಾಯಿಗೆ ಸ್ತನ್ಯಪಾನ ಮಾಡಲು ಸಾಧ್ಯವಾಗದಿದ್ದರೆ ಅಥವಾ ಬಯಸದಿದ್ದರೆ ಮಗುವಿಗೆ ಸಾಕಷ್ಟು ಪೌಷ್ಟಿಕಾಂಶವನ್ನು ನೀಡುವ ಪರ್ಯಾಯವಾದ ಸುರಕ್ಷಿತ ಪದ್ಧತಿಯನ್ನು ಅನುಸರಿಸಬೇಕು.


ಡಯಾಟಿಶಿಯನ್ ದೀಪ್ತಿ ಲೋಕೇಶಪ್ಪ, ಸೀನಿಯರ್ ಕನ್ಸಲ್ಟೆಂಟ್, ನ್ಯೂಟ್ರಿಶಿಯನಿಸ್ಟ್ & ಡಯಾಟಿಶಿಯನ್, ಮದರ್ ಹುಡ್ ಹಾಸ್ಪಿಟಲ್, ಇಂದಿರಾನಗರ, ಬೆಂಗಳೂರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ