ನವದೆಹಲಿ : ಮಜ್ಜಿಗೆ (butter milk) ಬಗ್ಗೆ ನಿಮಗೆ ವಿಸ್ತ್ರತವಾಗಿ ಹೇಳಬೇಕಾಗಿ ಏನೂ ಇಲ್ಲ. ದೇಹ ದಣಿದು ಸುಸ್ತಾದಾಗ ಒಂದು ಲೋಟ ತಣ್ಣಗೆ ಮಜ್ಜಿಗೆ ಸಿಕ್ಕಿ ಬಿಟ್ಟರೆ ಅದೇ ಬ್ರಹ್ಮಾಂಡ. ಮಧ್ಯಾಹ್ನದ ಹೊತ್ತಿನಲ್ಲಿ ಊಟಕ್ಕೆ ನೀರು ಮಜ್ಜಿಗೆ ಉಪ್ಪಿನಕಾಯಿ ಇದ್ದು ಬಿಟ್ಟರೆ ಅದಕ್ಕಿಂತ ಸ್ವಾದಿಷ್ಟ ಭೋಜನ ಇನ್ನೊಂದಿಲ್ಲ. ಬಿಸಿಲಿನ ಹೊತ್ತಿನಲ್ಲಿ ದಾಹ ನಿವಾರಿಸಲು ಮಜ್ಜಿಗೆಗೆ ಪರ್ಯಾಯವಾಗಿ ಬೇರೆ ಡ್ರಿಂಕ್ಸ್ ಸಿಗುವುದಿಲ್ಲ.  ತಂಪು ಪಾನೀಯ, ಕೋಲ್ಡ್ ಡ್ರಿಂಕ್ಸ್ (Cold drinks) ಕುಡಿದರೆ ನಿಮಗೆ ಹಾಯಾಗಿದೆ ಅನ್ನಿಸಬಹುದು. ಆದರೆ, ಅದರಿಂದ ದಾಹ ಕಡಿಮೆ ಆಗುವುದಿಲ್ಲ. ಖಂಡಿತಾ ಇವು ಮಜ್ಜಿಗೆಗೆ ಪರ್ಯಾಯ ಅಲ್ಲ. 


COMMERCIAL BREAK
SCROLL TO CONTINUE READING

ನೀರು ಮಜ್ಜಿಗೆ (butter milk), ಒಗ್ಗರಣೆ ಹಾಕಿದ ಮಜ್ಜಿಗೆ, ಶುಂಠಿ - ಹಸಿ ಮೆಣಸು ಜಜ್ಜಿ ಅದರ ನೀರು ಸೇರಿಸಿದ ತಡ್ಕಾ  ಮಜ್ಜಿಗೆ ಸಿಕ್ಕಿ ಬಿಟ್ಟರೆ, ಕುಡಿದಷ್ಟೂ ಇನ್ನಷ್ಟೂ ಕುಡಿಯಬೇಕೆನಿಸುತ್ತದೆ.  ಮಜ್ಜಿಗೆ ನಮಗೆ ಸುಲಭದಲ್ಲಿ ಸಿಕ್ಕಿ ಬಿಡುತ್ತದೆ. ದರವೂ ಕಡಿಮೆ. ಆರೋಗ್ಯಕ್ಕೂ ಹಿತಕರ (Butter milk benefits for health).  ಮಾರುಕಟ್ಟೆಯಲ್ಲಿ ಸಿಗುವ ಕೋಲ್ಡ್ ಡ್ರಿಂಕ್ಸ್ ನಲ್ಲಿ (Cold drinks) ಸಕ್ಕರೆ ಸಿಕ್ಕಾಪಟ್ಟೆ ಇರುತ್ತದೆ. ಇದರಿಂದ ಸಾಕಷ್ಟು ರೋಗ ಹರಡುವ ಸಾಧ್ಯತೆ ಇರುತ್ತದೆ.  ಇದಕ್ಕೆಲ್ಲಾ ಒಳ್ಳೆಯ ಪರ್ಯಾಯ ಅಂದರೆ ಮಜ್ಜಿಗೆ ಎಂದು ಹೇಳುತ್ತಾರೆ ಬಲ್ಲವರು. 


ಇದನ್ನೂ ಓದಿ : Tips To Control Irritation In Children: ಮಕ್ಕಳಲ್ಲಿನ ಕಿರಿಕಿರಿ ತೊಡೆದುಹಾಕಲು ಬೈಬೇಡಿ, ಹೊಡೆಯಬೇಡಿ, ಈ ಸಿಂಪಲ್ ವಿಧಾನಗಳನ್ನು ಅನುಸರಿಸಿ


ಒಂದು  ಲೋಟ ಮಜ್ಜಿಗೆ ದಿನವೂ ಕುಡಿದರೆ, ತ್ವಚೆಗೆ ಕಾಂತಿ ಸಿಗುತ್ತದೆ. ಕೀಲು ನೋವು ನಿವಾರಣೆಯಾಗುತ್ತದೆ. ಜೀರ್ಣಕ್ರಿಯೆ (Didestion) ಸರಾಗವಾಗುತ್ತದೆ.  ಮಜ್ಜಿಗೆ ಕುಡಿದರೆ ಆಗುವ ಲಾಭ ಏನು ಎಂಬುದು ಇಲ್ಲಿ ಪಟ್ಟಿ ಮಾಡಿದ್ದೇವೆ.


ದಿನಕ್ಕೊಂದು ಲೋಟ ಮಜ್ಜಿಗೆ ಕುಡಿದರೆ ಆಗುವ ಲಾಭ ಇಷ್ಟು..!
1. ದೇಹದ ರೋಗ ನಿರೋಧಕ ಶಕ್ತಿ (immunity) ಹೆಚ್ಚಿಸುತ್ತದೆ
2. ಮಲಬದ್ದತೆ ನಿವಾರಿಸುತ್ತದೆ.
3. ಜೀರ್ಣ ಕ್ರಿಯೆಗೆ ನೆರವಾಗುತ್ತದೆ. 
4. ದೇಹಕ್ಕೆ ಬೇಕಾದ ವಿಟಮಿನ್ ಒದಗಿಸುತ್ತದೆ.
5. ತ್ವಚೆಯ ಕಾಂತಿ (Glowing skin) ಹೆಚ್ಚಿಸುತ್ತದೆ.
6. ಶರೀರವನ್ನು ತಂಪಾಗಿಡುತ್ತದೆ.
7, ಕೀಲು ನೋವಿದ್ದರೆ ನಿವಾರಣೆ ಮಾಡುತ್ತದೆ.
8. ಮುಖದ ಕಾಂತಿ ಹೆಚ್ಚಳ ಮಾಡುತ್ತದೆ.


ಇದನ್ನೂ ಓದಿ : Vomiting problem during travel: ಪ್ರಯಾಣದ ವೇಳೆ ವಾಂತಿ ಸಮಸ್ಯೆಯಿದ್ದರೆ ಜೊತೆಗಿರಲಿ ಈ ವಸ್ತುಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ