Tips To Control Irritation In Children: ಮಕ್ಕಳಲ್ಲಿನ ಕಿರಿಕಿರಿ ತೊಡೆದುಹಾಕಲು ಬೈಬೇಡಿ, ಹೊಡೆಯಬೇಡಿ, ಈ ಸಿಂಪಲ್ ವಿಧಾನಗಳನ್ನು ಅನುಸರಿಸಿ

Tips To Control Irritation In Children: ಮಕ್ಕಳಲ್ಲಿನ ಕಿರಿಕಿರಿ  ಮತ್ತು ಅವರ ಕೋಪ ಸ್ವಭಾವವನ್ನು ನಿರ್ಲಕ್ಷಿಸಬಾರದು. ಮಕ್ಕಳ ಈ ಅಭ್ಯಾಸವು ಸಮಯದೊಂದಿಗೆ ತಾನಾಗಿಯೇ ಹೋಗುತ್ತದೆ ಎಂದು ಅನೇಕ ಪೋಷಕರು ಭಾವಿಸುತ್ತಾರೆ, ಆದರೆ ಹಲವು ಸಮೀಕ್ಷೆಗಳ ಪ್ರಕಾರ, ಈ ಅಭ್ಯಾಸವು ನಂತರದ ದಿನಗಳಲ್ಲಿ ಮಕ್ಕಳಲ್ಲಿ ಬೆಳವಣಿಗೆಯಾಗುವ ಸಾಧ್ಯತೆ ಇರುತ್ತದೆ. ಇನ್ನೊಂದೆಡೆ ಅವರ ಈ ಅಭ್ಯಾಸ ಕೆಲವೊಮ್ಮೆ ಅವರ ವ್ಯಕ್ತಿತ್ವದ ಒಂದು ಭಾಗವಾಗುತ್ತದೆ. ಇಂತಹ ಪರಿಸ್ಥಿತಿ, ನೀವು ಸಣ್ಣ ಮಕ್ಕಳ ಪೋಷಕರಾಗಿದ್ದರೆ, ನೀವು ಕೆಲವು ವಿಷಯಗಳಿಗೆ ಗಮನ ಕೊಡಬೇಕು.

Written by - Nitin Tabib | Last Updated : Jun 27, 2021, 08:08 PM IST
  • ಮಗುವಿನ ಕೆಟ್ಟ ಅಭ್ಯಾಸಗಳನ್ನು ಪೋಷಕರು ನಿರ್ಲಕ್ಷಿಸಬಾರದು.
  • ಅದಕ್ಕೆ ಕಾರಣಗಳನ್ನು ತಿಳಿಯಲು ಪೋಷಕರು ಪ್ರಯತ್ನಿಸಬೇಕು.
  • ಹೆತ್ತವರ ಗಮನ ಸೆಳೆಯಲು, ಮಗು ಸಣ್ಣ ಸಣ್ಣ ವಿಷಯಗಳ ಬಗ್ಗೆಯೂ ಕೋಪಿಸಿಕೊಳ್ಳಲು ಆರಂಭಿಸುತ್ತದೆ.
Tips To Control Irritation In Children: ಮಕ್ಕಳಲ್ಲಿನ ಕಿರಿಕಿರಿ ತೊಡೆದುಹಾಕಲು ಬೈಬೇಡಿ, ಹೊಡೆಯಬೇಡಿ, ಈ ಸಿಂಪಲ್ ವಿಧಾನಗಳನ್ನು ಅನುಸರಿಸಿ title=
Tips To Control Irritation In Children

Tips To Control Irritation In Children: ಮಕ್ಕಳಲ್ಲಿನ ಕಿರಿಕಿರಿ  ಮತ್ತು ಅವರ ಕೋಪ ಸ್ವಭಾವವನ್ನು ನಿರ್ಲಕ್ಷಿಸಬಾರದು. ಮಕ್ಕಳ ಈ ಅಭ್ಯಾಸವು ಸಮಯದೊಂದಿಗೆ ತಾನಾಗಿಯೇ ಹೋಗುತ್ತದೆ ಎಂದು ಅನೇಕ ಪೋಷಕರು ಭಾವಿಸುತ್ತಾರೆ, ಆದರೆ ಹಲವು ಸಮೀಕ್ಷೆಗಳ ಪ್ರಕಾರ, ಈ ಅಭ್ಯಾಸವು ನಂತರದ ದಿನಗಳಲ್ಲಿ ಮಕ್ಕಳಲ್ಲಿ ಬೆಳವಣಿಗೆಯಾಗುವ ಸಾಧ್ಯತೆ ಇರುತ್ತದೆ. ಇನ್ನೊಂದೆಡೆ ಅವರ ಈ ಅಭ್ಯಾಸ ಕೆಲವೊಮ್ಮೆ ಅವರ ವ್ಯಕ್ತಿತ್ವದ ಒಂದು ಭಾಗವಾಗುತ್ತದೆ. ಇಂತಹ ಪರಿಸ್ಥಿತಿ, ನೀವು ಸಣ್ಣ ಮಕ್ಕಳ ಪೋಷಕರಾಗಿದ್ದರೆ, ನೀವು ಕೆಲವು ವಿಷಯಗಳಿಗೆ ಗಮನ ಕೊಡಬೇಕು.

ಮಗುವಿನ ಕೆಟ್ಟ ಅಭ್ಯಾಸಗಳನ್ನು ಪೋಷಕರು ನಿರ್ಲಕ್ಷಿಸಬಾರದು. ಅದಕ್ಕೆ ಕಾರಣಗಳನ್ನು ತಿಳಿಯಲು ಪೋಷಕರು ಪ್ರಯತ್ನಿಸಬೇಕು ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ. ಆಟವಾಡಲು ಸಾಧ್ಯವಾಗದ ಕಾರಣ ಅಥವಾ ಶಾಲೆಯಲ್ಲಿ ಯಾವುದೇ ವಿಷಯವನ್ನು ಅರ್ಥ ಮಾಡಿಕೊಳ್ಳಲು ಆಗದ ಕಾರಣ  ಅಥವಾ ಸ್ನೇಹಿತರಲ್ಲಿ ಜಗಳ ಮತ್ತು ಅಸಮಾಧಾನದಿಂದಾಗಿ ಮಗು ಕಿರಿಕಿರಿಯಿಂದ (Irritation In Children) ವರ್ತಿಸುವ ಸಾಧ್ಯತೆಯಿದೆ. ಹೆತ್ತವರ ಗಮನ ಸೆಳೆಯಲು, ಮಗು ಸಣ್ಣ  ಸಣ್ಣ ವಿಷಯಗಳ ಬಗ್ಗೆಯೂ ಕೋಪಿಸಿಕೊಳ್ಳಲು ಆರಂಭಿಸುತ್ತದೆ.

ನಮ್ಮ ವ್ಯವಹಾರ ಹೇಗಿರಬೇಕು? (Tips)
>> ಮಕ್ಕಳನ್ನು ಆಟೋಟದಲ್ಲಿ ಹಾಗೂ ಬಾಹ್ಯ ಚಟುವಟಿಕೆಗಳಲ್ಲಿ ತೊಡಗಿಸುವುದು ತುಂಬಾ ಆವಶ್ಯಕವಾಗಿದೆ. ಇದಕ್ಕಾಗಿ ನೀವು ಮಕ್ಕಳನ್ನು ನೃತ್ಯ ಹಾಗೂ ಕಲಾ ವರ್ಗಕ್ಕೆ ಕಳುಹಿಸಬಹುದು. ಕಾಲಕಾಲಕ್ಕೆ ಹೊರಗಿನ ಆಟಗಳನ್ನು ಆಡಲು ಅವರನ್ನು ಕರೆದೊಯ್ಯುವುದು ಸಹ ಒಳ್ಳೆಯ ಅಭ್ಯಾಸ. ಇದು ಮಗುವಿನಲ್ಲಿನ ಹೆಚ್ಚುವರಿ ದೈಹಿಕ ಶಕ್ತಿಯನ್ನು ಖರ್ಚು ಮಾಡುತ್ತದೆ ಮತ್ತು ಸ್ವಯಂ ಅಭಿವ್ಯಕ್ತಿ ಹಾಗೂ ಸಾಮಾಜಿಕ ನಡುವಳಿಕೆಯ ಬಗ್ಗೆ ತಿಳುವಳಿಕೆಯನ್ನು ಸಹ ಅವರಲ್ಲಿ ಬೆಳೆಸುತ್ತದೆ.

ಇದನ್ನೂ ಓದಿ- Vomiting problem during travel: ಪ್ರಯಾಣದ ವೇಳೆ ವಾಂತಿ ಸಮಸ್ಯೆಯಿದ್ದರೆ ಜೊತೆಗಿರಲಿ ಈ ವಸ್ತುಗಳು

>> ಮಗುವಿನ ಪ್ರತಿಯೊಂದು ಚಲನೆಯ ಮೇಲೆ ನಿಗಾ ಇಡುವುದು ತುಂಬಾ ಮುಖ್ಯ. ಮಗುವಿನ ಶಾಲಾ ಶಿಕ್ಷಕರನ್ನು ನಿಯಮಿತವಾಗಿ ಭೇಟಿಯಾಗುತ್ತಲೇ ಇರಿ. ಇದು ಮಗುವಿನ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಕಾರಣವನ್ನು ತಿಳಿಸಿ ಮಗುವನ್ನು ಮುಂದಿನ ಸೀಟಿನಲ್ಲಿ ಇರಿಸಲು ನೀವು ಶಿಕ್ಷಕರಿಗೆ ವಿನಂತಿಸಬಹುದು. ಕಪ್ಪು ಹಲಗೆಯಲ್ಲಿ ಏನನ್ನಾದರೂ ಬರೆಯುವ ಅಥವಾ ಇತರ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸುವ ಕೆಲಸದಲ್ಲಿ ಮಗುವನ್ನು ನಿರತರಾಗಿರಿಸಿದರೆ, ಅವರ ಹೈಪರ್ಆಯ್ಕ್ಟಿವಿಟಿಯನ್ನು (Hyperactive Children) ನಿಯಂತ್ರಿಸಬಹುದು.

ಇದನ್ನೂ ಓದಿ-Face Glowing : ಮಳೆಗಾಲದಲ್ಲಿ ಮುಖದ ಕಾಂತಿ ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ 

>> ಮಗು ಹೈಪರ್ಆಕ್ಟಿವ್ ಆಗಿದ್ದರೆ, ಮಗುವಿನ ಮನಸ್ಸಿನ ಸ್ಥಿತಿಯನ್ನು ವಿಶ್ಲೇಷಿಸಲು ಮನೋವೈದ್ಯರನ್ನು ಸಂಪರ್ಕಿಸಿ. ಹೈಪರ್ಆಕ್ಟಿವ್ ಮಕ್ಕಳ ಲಕ್ಷಣಗಳು ಎಡಿಎಚ್‌ಡಿ (Attention Defecit Hyperactivity Disorder) ಗೆ ಹೋಲುತ್ತವೆ. ADHDಯ ಸಮಸ್ಯೆ 3-7% ಶಾಲೆಗೆ ಹೋಗುವ ಮಕ್ಕಳಲ್ಲಿ ಕಂಡುಬರುತ್ತದೆ. ಇದು ಮಗುವಿನ ಸ್ವಾಭಿಮಾನವನ್ನು ಮಾತ್ರವಲ್ಲ, ಸುತ್ತಮುತ್ತಲಿನ ಜನರೊಂದಿಗಿನ ಅವರ ಸಂಬಂಧದ ಮೇಲೂ ಸಹ ಪರಿಣಾಮ ಬೀರುತ್ತದೆ. ಎಡಿಎಚ್‌ಡಿ ಮೆದುಳಿನ ಜೈವಿಕ ಕಾಯಿಲೆಯಾಗಿದ್ದು, ಇದನ್ನು ಔಷಧಿಗಳನ್ನು ನೀಡುವ ಮೂಲಕ ಸರಿಪಡಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಮಗುವಿಗೆ ವಿಶೇಷವಾಗಿ ಶಿಕ್ಷಣ ಮತ್ತು ಚಿಕಿತ್ಸೆಯನ್ನು ನೀಡಲಾಗುತ್ತದೆ, ಇದರಿಂದಾಗಿ ಮಗುವು ತನ್ನ ಕೋಪ ಮತ್ತು ಹೈಪರ್ಆಯ್ಕ್ಟಿವಿಟಿಯನ್ನು ನಿಯಂತ್ರಿಸಲು ಕಲಿಯಬಹುದು.

ಇದನ್ನೂ ಓದಿ- ಸೊಳ್ಳೆ ಕಚ್ಚಿದ ಜಾಗಕ್ಕೆ ತಕ್ಷಣ ಈ ವಸ್ತುಗಳನ್ನು ಹಚ್ಚಿದರೆ ಸಿಗಲಿದೆ ತುರಿಕೆ, ನೋವಿನಿಂದ ಮುಕ್ತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News