ಮನೆಯಲ್ಲಿಯೇ ಇರುವ ಈ ವಸ್ತುಗಳನ್ನು ಬಳಸಿ ಪಡೆಯಬಹುದು ಜಿರಳೆ ಕಾಟದಿಂದ ಮುಕ್ತಿ
How to Get Rid of Cockroach: ಜಿರಳೆಗಳು ನಾನಾ ರೀತಿಯ ಕಾಯಿಲೆಗಳಿಗೆ ಕಾರಣವಾಗಿ ಬಿಡುತ್ತವೆ. ಜಿರಳೆಗಳನ್ನು ಹೋಗಲಾಡಿಸಲು ಸುಲಭವಾದ ಮನೆಮದ್ದುಗಳಿವೆ.
ಬೆಂಗಳೂರು : How to Get Rid of Cockroach: ಜಿರಳೆಗಳು ಬಾರದ ಅಡುಗೆ ಮನೆಯೇ ಇರಲಿಕ್ಕಿಲ್ಲ. ಬೇಡವೆಂದರೂ ಬರುವ ಈ ಜಿರಳೆಗಳನ್ನು ಮನೆಯಲ್ಲಿ ಕಂಡರೆ ಎಂಥವರಿಗೂ ಇರಿಸು ಮುರುಸಾಗುತ್ತದೆ. ಈ ಅನಪೇಕ್ಷಿತ ಅತಿಥಿಯನ್ನು ಮನೆಯಿಂದ ಹೊರಹಾಕಲು ಇಲ್ಲದ ಕಸರತ್ತು ನಡೆಸಲಾಗುತ್ತದೆ. ಮಾರುಕಟ್ಟೆಗಳಲ್ಲಿ ಲಭ್ಯವಿರುವ ಹಿಟ್, ಚಾಕ್, ಸ್ಪ್ರೇ ಗಳನ್ನೂ ಬಳಸಲಾಗುತ್ತದೆ. ಆದರೆ ಇದರಿಂದ ಶಾಶ್ವತ ಪರಿಹಾರ ಸಿಗುವುದೇ ಇಲ್ಲ.
ಜಿರಳೆಗಳನ್ನು ತೊಡೆದುಹಾಕಲು ಸುಲಭ ಮಾರ್ಗಗಳು :
ಕೆಲವೊಮ್ಮೆ ಮನೆಯಲ್ಲಿ ಎಲ್ಲಿ ನೋಡಿದರೂ ಜಿರಳೆಗಳೇ ಕಾಣುತ್ತಿರುತ್ತವೆ. ಹೀಗಾದಾಗ ತಕ್ಷಣ ಇದನ್ನು ನಿಯಂತ್ರಿಸಬೇಕು. ಇಲ್ಲವಾದಲ್ಲಿ ಅವುಗಳು ಅಪಾಯಕಾರಿಯಾಗಿ ಬಿಡುತ್ತವೆ. ಹೌದು, ಜಿರಳೆಗಳು ನಾನಾ ರೀತಿಯ ಕಾಯಿಲೆಗಳಿಗೆ ಕಾರಣವಾಗಿ ಬಿಡುತ್ತವೆ. ಜಿರಳೆಗಳನ್ನು ಹೋಗಲಾಡಿಸಲು ಸುಲಭವಾದ ಮನೆಮದ್ದುಗಳಿವೆ.
ಇದನ್ನೂ ಓದಿ : Coriander Leaves Benefits: ಮಲಬದ್ದತೆ ನಿವಾರಿಸಲು ಮಾತ್ರವಲ್ಲ ಈ ಸಮಸ್ಯೆಗಳಿಗೂ ರಾಮಬಾಣವಿದ್ದಂತೆ ಕೊತ್ತಂಬರಿ ಸೊಪ್ಪು
ಸೀಮೆಎಣ್ಣೆ ಎಣ್ಣೆ :
ಸೀಮೆಎಣ್ಣೆ ಪ್ರಬಲವಾದ ಘಾಟು ಹೊಂದಿರುತ್ತದೆ. ಈ ವಾಸನೆಯಿಂದಾಗಿ ಜಿರಳೆಗಳು ಹತ್ತಿರವೂ ಸುಳಿಯುವುದಿಲ್ಲ. ಹಾಗಾಗಿ ಮನೆ ಒರೆಸುವ ವೇಳೆ, ಒರೆಸಲು ಬಳಸುವ ನೀರಿಗೆ ಒಂದು ಹನಿ ಸೀಮೆ ಎಣ್ಣೆ ಹಾಕಿ. ಒರೆಸಲು ಕಷ್ಟವಾಗಿರುವ ಸ್ಥಳದಲ್ಲಿ ಈ ಎಣ್ಣೆಯನ್ನು ಸಿಂಪಡಿಸಿ. ಆದರೆ ಬೆಂಕಿಯ ಅಪಾಯವಿರುವ ಸ್ಥಳದಲ್ಲಿ ಸೀಮೆ ಎಣ್ಣೆ ಬಳಸಬೇಡಿ.
ಪಲಾವ್ ಎಲೆ :
ಪಲಾವ್ ಎಲೆಗಳನ್ನು ಸಾಮಾನ್ಯವಾಗಿ ಆಹಾರದ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಆದರೆ ಈ ಎಲೆಗಳನ್ನು ಜಿರಳೆಗಳನ್ನು ಓಡಿಸಲು ಕೂಡ ಬಳಸಬಹುದು. ಜಿರಳೆಗಳು ಈ ಮಸಾಲೆಯ ವಾಸನೆಯನ್ನು ಸಹಿಸುವುದಿಲ್ಲ. ಈ ಎಲೆಗಳನ್ನು ಪುಡಿಮಾಡಿ ಮತ್ತು ಜಿರಳೆಗಳು ಹೆಚ್ಚು ಬರುವ ಸ್ಥಳದಲ್ಲಿ ಹಾಕಿದರೆ ಜಿರಳೆ ಕಾಟದಿಂದ ಮುಕ್ತಿ ಸಿಗುತ್ತದೆ.
ಇದನ್ನೂ ಓದಿ : ಡಯಾಬಿಟೀಸ್ ರೋಗಿಗಳು ಈ ಚಹಾವನ್ನು ಕುಡಿದರೆ ಸದಾ ನಿಯಂತ್ರಣದಲ್ಲಿರುತ್ತದೆ ಬ್ಲಡ್ ಶುಗರ್
ಲವಂಗ :
ಲವಂಗವನ್ನು ಅತ್ಯುತ್ತಮ ಆಯುರ್ವೇದ ಔಷಧವೆಂದು ಪರಿಗಣಿಸಲಾಗುತ್ತದೆ. ಈ ಲವಂಗದ ಪರಿಮಳವನ್ನು ಸಹಿಸುವುದು ಜಿರಳೆಗಳಿಗೆ ಸಾಧ್ಯವಾಗುವುದಿಲ್ಲ. ಲವಂಗದ ಪರಿಮಳಕ್ಕೆ ಹೆದರಿಯೇ ಜಿರಳೆಗಳು ಬರುವುದಿಲ್ಲ.
ಮನೆಯನ್ನು ಸ್ವಚ್ಛವಾಗಿಡಿ :
ಜಿರಳೆಗಳು ಮುಖ್ಯವಾಗಿ ಕೊಳಕಿನಿಂದ ಬರುತ್ತವೆ. ನಿಯಮಿತವಾಗಿ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದರೆ, ಈ ಸಮಸ್ಯೆಯು ಶೀಘ್ರದಲ್ಲೇ ಬಗೆಹರಿಯುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.