Coriander Leaves Benefits: ಮಲಬದ್ದತೆ ನಿವಾರಿಸಲು ಮಾತ್ರವಲ್ಲ ಈ ಸಮಸ್ಯೆಗಳಿಗೂ ರಾಮಬಾಣವಿದ್ದಂತೆ ಕೊತ್ತಂಬರಿ ಸೊಪ್ಪು

Coriander Leaves Benefits: ಕೊತ್ತಂಬರಿ ಸೊಪ್ಪನ್ನು ಮಲಬದ್ದತೆ ನಿವಾರಿಸಲು ದಿವ್ಯೌಷಧ ಎಂದು ಹೇಳಲಾಗುತ್ತದೆ. ಕೊತ್ತಂಬರಿಯಲ್ಲಿ ಫೈಬರ್, ವಿಟಮಿನ್ ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕಬ್ಬಿಣದಂತಹ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ಮಲಬದ್ದತೆ ನಿವಾರಿಸಲು ಮಾತ್ರವಲ್ಲ ಇನ್ನೂ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ ಔಷಧವಾಗಿ ಕಾರ್ಯನಿರ್ವಹಿಸುತ್ತದೆ. 

Written by - Yashaswini V | Last Updated : Jun 30, 2022, 09:41 AM IST
  • ನಿಮ್ಮ ದೈನಂದಿನ ಆಹಾರದ ರುಚಿಯನ್ನು ಹೆಚ್ಚಿಸಲು ಕೊತ್ತಂಬರಿ ಸೊಪ್ಪನ್ನು ಬಳಸಬಹುದು.
  • ಕೊತ್ತಂಬರಿ ಸೊಪ್ಪನ್ನು ಆಹಾರದಲ್ಲಿ ಸೇರಿಸುವುದರಿಂದ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.
  • ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುವಲ್ಲಿ ಕೊತ್ತಂಬರಿಯು ತುಂಬಾ ಪ್ರಯೋಜನಕಾರಿಯಾಗಿದೆ.
Coriander Leaves Benefits: ಮಲಬದ್ದತೆ ನಿವಾರಿಸಲು ಮಾತ್ರವಲ್ಲ ಈ ಸಮಸ್ಯೆಗಳಿಗೂ ರಾಮಬಾಣವಿದ್ದಂತೆ ಕೊತ್ತಂಬರಿ ಸೊಪ್ಪು  title=
Coriander benefits

ಕೊತ್ತಂಬರಿ ಸೊಪ್ಪಿನ ಪ್ರಯೋಜನಗಳು: ಭಾರತೀಯ ಖಾದ್ಯಗಳಲ್ಲಿ ಆಹಾರದ ಸ್ವಾದವನ್ನು ಹೆಚ್ಚಿಸಲು ಕೊತ್ತಂಬರಿ ಸೊಪ್ಪನ್ನು ಬಳಸಲಾಗುತ್ತದೆ. ಕೆಲವರು ಇದನ್ನು ತರಕಾರಿಯಲ್ಲಿ ಬಳಸುತ್ತಾರೆ ಮತ್ತು ಕೆಲವರು ಇದನ್ನು ಅಲಂಕರಿಸಲು ಬಳಸುತ್ತಾರೆ. ಕೊತ್ತಂಬರಿ ಸೊಪ್ಪಿನ ಬಳಕೆಯಿಂದ ಆಹಾರದ ರುಚಿ ಹೆಚ್ಚುವುದು ಮಾತ್ರವಲ್ಲ, ಹಲವು ಆರೋಗ್ಯ ಸಮಸ್ಯೆಗಳಿಗೂ ಇದು ಪ್ರಯೋಜನಕಾರಿ ಆಗಿದೆ. ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೊತ್ತಂಬರಿ ಸೊಪ್ಪನ್ನು ಸೇವಿಸುವಂತೆ ಸಲಹೆ ನೀಡಲಾಗುತ್ತದೆ. ಆದರೆ, ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಮಾತ್ರವಲ್ಲದೆ ಕೊತ್ತಂಬರಿ ಸೊಪ್ಪಿನಿಂದ ಈನ್ನೂ ಹಲವು ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ?

ಕೊತ್ತಂಬರಿ ಸೊಪ್ಪಿನ ಆರೋಗ್ಯ ಪ್ರಯೋಜನಗಳು:
ಬಿಪಿ- ಡಯಾಬಿಟಿಸ್ ನಿಯಂತ್ರಿಸುವಲ್ಲಿ ಪ್ರಯೋಜನಕಾರಿ:

ಅಧಿಕ ರಕ್ತದೊತ್ತಡ ಅಥವಾ ಟೈಪ್ 2 ಮಧುಮೇಹ ಇರುವವರಿಗೆ ಕೊತ್ತಂಬರಿ ಸೊಪ್ಪು ತುಂಬಾ ಪ್ರಯೋಜನಕಾರಿ ಮೂಲಿಕೆಯಾಗಿದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುವಲ್ಲಿ ಕೊತ್ತಂಬರಿಯು ತುಂಬಾ ಪ್ರಯೋಜನಕಾರಿಯಾಗಿದೆ. ಕೊತ್ತಂಬರಿ ಸೊಪ್ಪನ್ನು ತಿನ್ನುವುದರಿಂದ ಅನೇಕ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ, ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸೋಂಕಿನಲ್ಲಿ ಪ್ರಯೋಜನಕಾರಿ:
ಸಿಲಾಂಟ್ರೋ ಎಲೆಗಳು ಆಂಟಿಮೈಕ್ರೊಬಿಯಲ್ ಅಂಶಗಳನ್ನು ಒಳಗೊಂಡಿರುತ್ತವೆ, ಇದು ಸೋಂಕಿತ ಆಹಾರದಿಂದ ಉಂಟಾದ ಹೊಟ್ಟೆಯ ಸೋಂಕುಗಳು ಮತ್ತು ರೋಗಗಳಿಂದ ರಕ್ಷಿಸುವಲ್ಲಿ ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲ, ಹಸಿರು ಕೊತ್ತಂಬರಿಯು ಯುಟಿಐ ವಿರುದ್ಧ ರಕ್ಷಣೆ ನೀಡುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ- ಡಯಾಬಿಟೀಸ್ ರೋಗಿಗಳು ಈ ಚಹಾವನ್ನು ಕುಡಿದರೆ ಸದಾ ನಿಯಂತ್ರಣದಲ್ಲಿರುತ್ತದೆ ಬ್ಲಡ್ ಶುಗರ್

ಮೆದುಳಿಗೆ ಪ್ರಯೋಜನಕಾರಿ:-
ಕೊತ್ತಂಬರಿ ಸೊಪ್ಪಿನಲ್ಲಿ ಆ್ಯಂಟಿ-ಆಕ್ಸಿಡೆಂಟ್‌ಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಇದರ ಬಳಕೆಯಿಂದ ಮೆದುಳಿನ ಊತ, ಜ್ಞಾಪಕ ಶಕ್ತಿ ನಷ್ಟ, ಆತಂಕ ಇತ್ಯಾದಿಗಳ ಸಾಮಾನ್ಯ ಸಮಸ್ಯೆಗಳನ್ನೂ ಸಹ ಕಡಿಮೆ ಮಾಡಬಹುದು.

ಹೃದಯಕ್ಕೆ ಒಳ್ಳೆಯದು:-
ವಿಟಮಿನ್‌ಗಳು ಮತ್ತು ಪ್ರೊಟೀನ್‌ಗಳ ಜೊತೆಗೆ, ಕೊತ್ತಂಬರಿ ಎಲೆಗಳು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮ್ಯಾಂಗನೀಸ್‌ನಲ್ಲಿ ಸಮೃದ್ಧವಾಗಿವೆ, ಇದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೊತ್ತಂಬರಿ ಸೊಪ್ಪಿನ ನಿಯಮಿತ ಸೇವನೆಯು ಹೃದಯದ ತೊಂದರೆಗಳು ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.

ಒತ್ತಡವನ್ನು ನಿವಾರಿಸುತ್ತದೆ:-
ಕೊತ್ತಂಬರಿ ಸೊಪ್ಪಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೊತ್ತಂಬರಿ ಸೊಪ್ಪಿನ ಸೇವನೆಯು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಗಳು ತೋರಿಸಿವೆ. ಇದು ನೆನಪಿನ ಶಕ್ತಿ ಹೆಚ್ಚಿಸುವ ಪ್ರಯೋಜನವನ್ನೂ ಹೊಂದಿದೆ.

ಇದನ್ನೂ ಓದಿ- Desi Ghee Benefits: ಈ ಸಮಸ್ಯೆಗಳಿಂದ ದೂರವಿರಲು ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ದೇಸಿ ತುಪ್ಪ ಸೇವಸಿ

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:-
ಕೊತ್ತಂಬರಿ ಎಲೆಗಳು ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿವೆ, ಇದು ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಸಿರು ಕೊತ್ತಂಬರಿಯು ಚಯಾಪಚಯವನ್ನು ಹೆಚ್ಚಿಸುವಲ್ಲಿ ಮತ್ತು ಊತ ಮತ್ತು ಮಲಬದ್ಧತೆಯನ್ನು ದೂರವಿಡುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News