ಆಲೂಗೆಡ್ಡೆ ಸಿಪ್ಪೆಯ ಈ ಪ್ರಯೋಜನಗಳನ್ನು ತಪ್ಪದೇ ತಿಳಿಯಿರಿ
Potato Peel Benefits: ಸಾಮಾನ್ಯವಾಗಿ ನಾವು ಯಾವುದೇ ಖಾದ್ಯ ತಯಾರಿಸುವಾಗ ಆಲೂಗಡ್ಡೆ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ, ನಿಮಗೆ ತಿಳಿದಿದೆಯೇ ಆಲೂಗಡ್ಡೆ ಸಿಪ್ಪೆಯನ್ನು ಬಿಸಾಡುವುದರಿಂದ ನಾವು ಹಲವು ಪ್ರಯೋಜನಗಳಿಂದ ವಂಚಿತರಾಗುತ್ತೇವೆ. ವಾಸ್ತವವಾಗಿ, ಆಲೂಗಡ್ಡೆ ಸಿಪ್ಪೆಯನ್ನು ಪೋಷಕಾಂಶಗಳ ಖಜಾನೆ ಎಂದು ಹೇಳಲಾಗುತ್ತದೆ.
ಆಲೂಗಡ್ಡೆ ಸಿಪ್ಪೆಯ ಪ್ರಯೋಜನಗಳು: ಬಹುತೇಕ ಮಂದಿಯ ಪ್ರಿಯ ತರಕಾರಿ ಎಂದರೆ ಆಲೂಗಡ್ಡೆ. ಹಾಗಾಗಿಯೇ, ಇದನ್ನು ತರಕಾರಿಗಳ ರಾಜ ಎಂದು ಹೇಳಲಾಗುತದೆ. ಆಲೂಗಡ್ಡೆಯಿಂದ ವಿಧವಿಧದ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಆದರೆ, ಆಲೂಗಡ್ಡೆ ಬಳಸುವಾಗ ನಾವು ಸಿಪ್ಪೆಯನ್ನು ಬಿಸಾದಿಬಿದುತ್ತೇವೆ. ಆದರೆ, ಆರೋಗ್ಯ ತಜ್ಞರ ಪ್ರಕಾರ ಆಲೂಗಡ್ಡೆ ಬಳಸುವಾಗ ಅದರ ಸಿಪ್ಪೆಯನ್ನು ಬಿಸಾಡುವುದರಿಂದ ನಾವು ಅದರಿಂದ ಸಿಗುವ ಪೋಷಕಾಂಶಗಳಿಂದ ವಂಚಿತರಾಗುತ್ತೇವೆ. ಏಕೆಂದರೆ, ಆಲೂಗಡ್ಡೆ ಸಿಪ್ಪೆಯಲ್ಲಿ ಮಾನವ ದೇಹಕ್ಕೆ ಪ್ರಯೋಜನಕಾರಿಯಾದ ಹಲವು ಅಂಶಗಳು ಅಡಗಿವೆ ಎಂದು ಹೇಳಲಾಗುತ್ತದೆ. ಆಲೂಗಡ್ಡೆ ಸಿಪ್ಪೆಯ ಪ್ರಯೋಜನಗಳೇನು ತಿಳಿಯೋಣ...
ಆಲೂಗಡ್ಡೆ ಸಿಪ್ಪೆಯನ್ನು ಪೋಷಕಾಂಶಗಳ ಖಜಾನೆ ಎಂದು ಪರಿಗಣಿಸಲಾಗುತ್ತದೆ. ಆಲೂಗಡ್ಡೆ ಸಿಪ್ಪೆಯಲ್ಲಿ ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿದೆ ಮತ್ತು ಕಬ್ಬಿಣದಿಂದಲೂ ಸಮೃದ್ಧವಾಗಿದೆ. ಇದಲ್ಲದೆ, ಆಲೂಗಡ್ಡೆ ಸಿಪ್ಪೆಯಲ್ಲಿ ವಿಟಮಿನ್ ಬಿ 3 ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿಯೇ, ಇದು ಮಾನವನ ದೇಹಕ್ಕೆ ಬಹಳ ಪ್ರಯೋಜನಕಾರಿ ಎನ್ನಲಾಗಿದೆ.
ಇದನ್ನೂ ಓದಿ- ತೂಕ ಕಳೆದುಕೊಳ್ಳುವಾಗ ಬೆಳಗಿನ ಉಪಹಾರದಲ್ಲಿ ಇವುಗಳನ್ನು ಸೇವಿಸುವ ತಪ್ಪನ್ನು ಎಂದಿಗೂ ಮಾಡಬೇಡಿ
ಆಲೂಗಡ್ಡೆ ಸಿಪ್ಪೆಯ ಪ್ರಯೋಜನಗಳು:
* ಹೃದಯದ ಆರೋಗ್ಯಕ್ಕೆ ಒಳ್ಳೆಯದು:
ಆಲೂಗಡ್ಡೆ ಸಿಪ್ಪೆಯು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಏಕೆಂದರೆ ಅದರಲ್ಲಿರುವ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಸಹಾಯದಿಂದ ರಕ್ತದೊತ್ತಡವನ್ನು ನಿಯಂತ್ರಿಸಲಾಗುತ್ತದೆ. ಹಾಗಾಗಿ, ಹೃದಯದ ಆರೋಗ್ಯಕ್ಕಾಗಿ ನೀವು ಆಲೂಗಡ್ಡೆ ಸೇವಿಸುವಾದ ಅದರ ಸಿಪ್ಪೆಯೊಂದಿಗೆ ಸೇವಿಸಿ.
* ಕ್ಯಾನ್ಸರ್ ತಡೆಗಟ್ಟಲು:
ಆಲೂಗಡ್ಡೆ ಸಿಪ್ಪೆಯಲ್ಲಿ ಫೈಟೊಕೆಮಿಕಲ್ಸ್ ಸಮೃದ್ಧವಾಗಿದೆ, ಅವು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಾಗಿವೆ. ಇದರೊಂದಿಗೆ, ಕ್ಲೋರೊಜೆನಿಕ್ ಆಮ್ಲವು ಈ ಸಿಪ್ಪೆಗಳಲ್ಲಿ ಕಂಡುಬರುತ್ತದೆ, ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ ಎಂದು ಹಲವು ಅಧ್ಯಯನಗಳಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ- ದಿನವಿಡೀ ಇಷ್ಟು ಮಾತ್ರ ಮೊಟ್ಟೆ ತಿನ್ನಬೇಕು, ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ
* ಮೂಳೆಗಳಿಗೆ ಪ್ರಯೋಜನಕಾರಿ:
ಆಲೂಗೆಡ್ಡೆ ಸಿಪ್ಪೆಯಲ್ಲಿ ಮೂಳೆಗಳನ್ನು ಬಲಗೊಳಿಸಲು ಅವಶ್ಯಕವಾದ ಕ್ಯಾಲ್ಸಿಯಂನಂತಹ ಅನೇಕ ಪ್ರಮುಖ ಖನಿಜಗಳಿವೆ. ಆದ್ದರಿಂದ ಇದು ನೈಸರ್ಗಿಕವಾಗಿ ಮೂಳೆಗಳನ್ನು ಬಲಪಡಿಸಲು ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.