ತೂಕ ಕಳೆದುಕೊಳ್ಳುವಾಗ ಬೆಳಗಿನ ಉಪಹಾರದಲ್ಲಿ ಇವುಗಳನ್ನು ಸೇವಿಸುವ ತಪ್ಪನ್ನು ಎಂದಿಗೂ ಮಾಡಬೇಡಿ

ಆಹಾರ ತಜ್ಞರ ಪ್ರಕಾರ, ತೂಕ ನಷ್ಟ ಮಾಡಲು ಬಯಸುವವರು ತಮ್ಮ ಮಾರ್ನಿಂಗ್ ಬ್ರೇಕ್ ಫಾಸ್ಟ್ನಲ್ಲಿ ಕೆಲವು ಆಹಾರಗಳನ್ನು ತಿನ್ನಬಾರದು. ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ.

ತೂಕ ನಷ್ಟ ಸಲಹೆಗಳು: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರ ಸಾಮಾನ್ಯ ಸಮಸ್ಯೆ ತೂಕ ಹೆಚ್ಚಳ. ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಜನರು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಾರೆ. ಹಲವು ಬಾರಿ ತಮ್ಮ ಆಹಾರವನ್ನೂ ತ್ಯಜಿಸುವವರೂ ಉಂಟು. ಆದರೆ, ಬೆಳಗಿನ ಉಪಹಾರದ ಸಮಯದಲ್ಲಿ ಅದು ಬೇಗನೆ ಕರಗುತ್ತದೆ ಎಂದು ಕೆಲವು ಆಹಾರಗಳನ್ನು ತಿನ್ನುವ ತಪ್ಪು ಮಾಡುತ್ತಾರೆ. ಇದು ತೂಕ ನಷ್ಟ ಪ್ರಕ್ರಿಯೆಯಲ್ಲಿ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ಆಹಾರ ತಜ್ಞರ ಪ್ರಕಾರ, ತೂಕ ನಷ್ಟ ಮಾಡಲು ಬಯಸುವವರು ತಮ್ಮ ಮಾರ್ನಿಂಗ್ ಬ್ರೇಕ್ ಫಾಸ್ಟ್ನಲ್ಲಿ ಕೆಲವು ಆಹಾರಗಳನ್ನು ತಿನ್ನಬಾರದು. ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಎಣ್ಣೆಯುಕ್ತ ಆಹಾರಗಳು: ಭಾರತದಲ್ಲಿ ಎಣ್ಣೆಯುಕ್ತ ಆಹಾರಗಳ ಪ್ರವೃತ್ತಿ ತುಂಬಾ ಹೆಚ್ಚಾಗಿದೆ, ಅದರಲ್ಲೂ ಹಬ್ಬಗಳ ಸಮಯದಲ್ಲಂತೂ ಬೇರೆ ದಿನಗಳಿಗಿಂತ ಹೆಚ್ಚು ಎಣ್ಣೆಯುಕ್ತ ಆಹಾರಗಳನ್ನು ತಯಾರಿಸಲಾಗುತ್ತದೆ. ಜನರು ಬೆಳಗಿನ ಉಪಾಹಾರದಲ್ಲಿ ಪೂರಿ-ಸಬ್ಜಿ ಅಥವಾ ಕಚೋರಿ ತಿನ್ನಲು ಇಷ್ಟಪಡುತ್ತಾರೆ. ಆದರೆ, ತೂಕ ನಷ್ಟಕ್ಕಾಗಿ ಪ್ರಯತ್ನಿಸುತ್ತಿರುವವರು ಬೆಳಗಿನ ಉಪಹಾರದಲ್ಲಿ ಈ ಆಹಾರಗಳನ್ನು ಸೇವಿಸುವುದರಿಂದ ಇದು ವ್ಯತಿರಿಕ್ತ ಪರಿಣಾಮ ಬೀರಬಹುದು.

2 /5

ಸಂಸ್ಕರಿಸಿದ ಆಹಾರ: ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಸಂಸ್ಕರಿಸಿದ ಆಹಾರವನ್ನು ತಿನ್ನುವ ಪ್ರವೃತ್ತಿಯು ಬಹಳಷ್ಟು ಹೆಚ್ಚಾಗಿದೆ, ಆದರೆ ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಈ ಆಹಾರಗಳು ಬೇಗ ಕೆಡಬಾರದು ಎಂದು ಅವುಗಳನ್ನು ತಯಾರಿಸುವಾಗ ಹಲವು ವಿಧಗಳನ್ನು ಅನುಸರಿಸಲಾಗುತ್ತದೆ. ಇದರಲ್ಲಿ ಕೆಲವು ರಾಸಾಯನಿಕಗಳನ್ನೂ ಸಹ ಬೆರೆಸಲಾಗಿರುತ್ತದೆ. ಹಾಗಾಗಿ,  ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಸಾಧ್ಯವಾದಷ್ಟು ತಪ್ಪಿಸಿ.

3 /5

ಪ್ಯಾಕ್ ಮಾಡಿದ ಹಣ್ಣಿನ ರಸ : ನಮ್ಮ ದಿನನಿತ್ಯದ ಆಹಾರದಲ್ಲಿ ಪ್ಯಾಕ್ಡ್ ಫ್ರೂಟ್ ಜ್ಯೂಸ್ ಕುಡಿಯುವ ಟ್ರೆಂಡ್ ತುಂಬಾ ಹೆಚ್ಚಾಗಿದೆ. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕವಾದ ಪ್ರಿಸರ್ವೇಟಿವ್‌ಗಳನ್ನು ಒಳಗೊಂಡಿರುವುದರಿಂದ ಬೆಳಗಿನ ಉಪಾಹಾರದಲ್ಲಿ ಇದನ್ನು ಕುಡಿಯಬೇಡಿ. ಬದಲಿಗೆ ಮನೆಯಲ್ಲಿ ತಾಜಾ ಹಣ್ಣಿನ ರಸವನ್ನು ತಯಾರಿಸಿ ಸೇವಿಸುವುದು ಉತ್ತಮ. 

4 /5

ಕೇಕ್ ಮತ್ತು ಕುಕೀಸ್: ಕೇಕ್ ಮತ್ತು ಕುಕೀಗಳು ನಿಮ್ಮ ನೆಚ್ಚಿನ ಆಹಾರ ಪದಾರ್ಥವಾಗಿರಬಹುದು. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದರಲ್ಲಿ ರಾಗಿ ಮತ್ತು ಸಕ್ಕರೆಯ ಬಳಕೆಯು ತೂಕ ಹೆಚ್ಚಾಗಲು ಕಾರಣವಾಗಿದೆ. ಆದ್ದರಿಂದ ಬೆಳಗಿನ ಉಪಾಹಾರದಲ್ಲಿ ಇವುಗಳನ್ನು ಸೇವಿಸಬೇಡಿ.

5 /5

ನೂಡಲ್ಸ್: ನೂಡಲ್ಸ್ ಅಂತಹ ತ್ವರಿತ ಆಹಾರವಾಗಿದ್ದು ಅದು ಅನೇಕ ಯುವಕರನ್ನು ಆಕರ್ಷಿಸುತ್ತದೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಅದು ನಿಮ್ಮ ತೂಕವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಬೆಳಗಿನ ಉಪಾಹಾರದಲ್ಲಿ ಇದನ್ನು ತಿನ್ನುವ ತಪ್ಪನ್ನು ಎಂದಿಗೂ ಮಾಡಬೇಡಿ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.