More sweating problem : ಯಾವುದೇ ಕೆಲಸ ಮಾಡದೇ ಅತಿಯಾಗಿ ಬೆವರುವುದು ಒಳ್ಳೆಯದಲ್ಲ. ಸ್ವಲ್ಪ ದೂರ ನಡೆದರೂ ಬೆವರು ಸುರಿಸುವವರು ನಮ್ಮ ನಡುವೆ ಇದ್ದಾರೆ. ಆದರೆ ಕೆಲವರಿಗೆ ಬೆವರು ಬರುವುದೇ ಇಲ್ಲ... ಹಾಗಿದ್ರೆ ಅತಿಯಾಗಿ ಬೇವರುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಯೋಣ ಬನ್ನಿ..


COMMERCIAL BREAK
SCROLL TO CONTINUE READING

ನೀವು ಹೆಚ್ಚು ಬೇವರುತ್ತೀರಾ..? ಹಾಗಿದ್ದರೆ, ಜಾಗರೂಕರಾಗಿರಿ, ಬಹುಶಃ ಇದು ದೊಡ್ಡ ಕಾಯಿಲೆಯ ಸಂಕೇತವಾಗಿರಬಹುದು. ಕೆಲವು ಜನರು ಸ್ವಭಾವತಃ ವಿಪರೀತವಾಗಿ ಬೆವರುತ್ತಾರೆ. ಈ ಸ್ಥಿತಿಯನ್ನು 'ಹೈಪರ್ಹೈಡ್ರೋಸಿಸ್' ಎಂದು ಕರೆಯಲಾಗುತ್ತದೆ. ಆದಾಗ್ಯೂ, ಇದು ಸಾಮಾನ್ಯವಾಗಿ ಯಾವುದೇ ಇತರ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ. ಆದರೆ ನೀವು ಅತಿಯಾಗಿ ಬೆವರಿದಾಗ, ನಿಮ್ಮ ದೇಹ ಡಿಹೈಡ್ರೇಟ್‌ ಆಗುತ್ತದೆ. ಇದರಿಂದಾಗಿ ಇತರ ದೈಹಿಕ ಸಮಸ್ಯೆಗಳು ಉಂಟಾಗುತ್ತವೆ.


ಇದನ್ನೂ ಓದಿ: Health Tips: ದಿನಕ್ಕೆ ಎಷ್ಟು ಬಾರಿ ಮೂತ್ರ ಮಾಡುವುದು ಸರಿ?


ಬೆವರುವುದು ಸಾಮಾನ್ಯವಾಗಿ ಆರೋಗ್ಯಕರ ದೇಹದ ಸಂಕೇತವಾಗಿದೆ. ಕೆಲಸ ಮಾಡಿದಾಗ ಇಲ್ಲವೆ ದೈಹಿಕ ಚಟುವಟಿಕೆ ನಡಸಿದಾಗ ಬೆವರು ಹರಿಯುತ್ತದೆ. ಆದರೆ ಕೆಲವರು ಏನನ್ನೂ ಮಾಡದೆ ಬೆವರುತ್ತಾರೆ. ಇದಕ್ಕೆ ಕಾರಣ ಅವರ ದೇಹದ ಉಷ್ಣತೆ. ಅದಕ್ಕಾಗಿ ದೇಹದ ಉಷ್ಣತೆ ಕಾಪಾಡಲು, ದೇಹದಿಂದ ವಿಷ ಮತ್ತು ಸೋಡಿಯಂ ಅನ್ನು ಹೊರಹಾಕಬೇಕು. 


ಅತಿಯಾದ ಬೆವರುವಿಕೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೃದಯ ಕವಾಟದ ಉರಿಯೂತ, ಮೂಳೆ ಸಂಬಂಧಿತ ಸೋಂಕು ಮತ್ತು ಎಚ್‌ಐವಿ ಸೋಂಕಿನಂತಹ ಅನೇಕ ರೀತಿಯ ಕಾಯಿಲೆಗಳಿರಬಹುದು, ಅಲ್ಲದೆ, ಹೃದ್ರೋಗದ ಸಂಕೇತವಾಗಿರಬಹುದು, ಕೆಲವೊಮ್ಮೆ ಒತ್ತಡವು ಅತಿಯಾದ ಬೆವರುವಿಕೆಗೆ ಕಾರಣವಾಗಿರುತ್ತದೆ.


ಇದನ್ನೂ ಓದಿ: ಈ ಮರದ ಸಿಪ್ಪೆಯ ಕಷಾಯ ಕುಡಿದರೆ ಸೊಂಟದ ಸುತ್ತಲಿನ ಬೊಜ್ಜು ವಾರದಲ್ಲಿ ಇಳಿಕೆಯಾಗುತ್ತೆ!


ಅತಿಯಾದ ಬೆವರುವಿಕೆ ಮದ್ದು : ಅತಿಯಾಗಿ ಬೆವರುವವರು ಮೊದಲು ತಮ್ಮ ಆಹಾರದ ಬಗ್ಗೆ ಗಮನ ಹರಿಸಬೇಕು. ಉಪ್ಪಿನ ಬಳಕೆಯನ್ನು ಕಡಿಮೆ ಮಾಡಬೇಕು. ಮದ್ಯಪಾನದಿಂದ ದೂರವಿರಬೇಕು. ಗರ್ಭಾವಸ್ಥೆಯಲ್ಲಿ ನೀವು ಅತಿಯಾದ ಬೆವರುವಿಕೆಯನ್ನು ಅನುಭವಿಸಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ನಿಮ್ಮ ಆಹಾರದಲ್ಲಿ ಜೀವಸತ್ವಗಳು ಸಮೃದ್ಧವಾಗಿರುವ ಪೌಷ್ಟಿಕಾಂಶದ ಆಹಾರವನ್ನು ಸೇರಿಸಿ.


ಅತಿಯಾಗಿ ಬೆವರುವ ಮಾಡಬೇಕಾದ ಮೊದಲ ಕೆಲಸವೆಂದರೆ ಸಾಕಷ್ಟು ನೀರು ಕುಡಿಯುವುದು. ಹತ್ತಿ ಬಟ್ಟೆಗಳನ್ನು ಧರಿಸಿ, ಬೆವರಿನ ವಾಸನೆಯನ್ನು ತಪ್ಪಿಸಿ. ಆಗಾಗ ನಿಂಬೆಯುಕ್ತ ನೀರನ್ನು ಕುಡಿಯುವುದು ಒಳ್ಳೆಯದು. ಪುರುಷರು ದಿನಕ್ಕೆ 3.7 ಲೀಟರ್ ಮತ್ತು ಮಹಿಳೆಯರು 2.7 ಲೀಟರ್ ನೀರು ಕುಡಿಯಬೇಕು. ಇದು ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಇದರಿಂದಾಗಿ ಬೆವರುವಿಕೆ ಕಡಿಮೆಯಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.