Detecting cervical cancer at an early stage : ಗರ್ಭಕಂಠದ ಕ್ಯಾನ್ಸರ್ ಪ್ರತಿ ವರ್ಷ ಸಾವಿರಾರು ಮಹಿಳೆಯರ ಸಾವಿಗೆ ಕಾರಣವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಮಹಿಳೆಯರಲ್ಲಿ ನಾಲ್ಕನೇ ಅತ್ಯಂತ ಸಾಮಾನ್ಯ ಮತ್ತು ಮಾರಣಾಂತಿಕ ಕ್ಯಾನ್ಸರ್ ಎಂದು ಇದನ್ನು ವಿವರಿಸಿದೆ.  ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟಲು, ಅದರ ಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ಕಾಲಕಾಲಕ್ಕೆ ಅಗತ್ಯ ಪರೀಕ್ಷೆಗಳನ್ನು ನಡೆಸುವುದು ಬಹಳ ಅಗತ್ಯವಾಗಿರುತ್ತದೆ. ಪ್ಯಾಪ್ ಪರೀಕ್ಷೆಯು ( Pap Smear Test ) ಗರ್ಭಕಂಠದ ಕ್ಯಾನ್ಸರ್ ಅನ್ನು ಗುರುತಿಸುವ ಮೊದಲ ಪರೀಕ್ಷೆಯಾಗಿದೆ. ಇದರ ಸಹಾಯದಿಂದ ಅನೇಕ ಬಾರಿ ಈ ಮಾರಣಾಂತಿಕ ಕ್ಯಾನ್ಸರ್ ಅನ್ನು ಮೊದಲ ಹಂತದಲ್ಲಿಯೇ ಗುರುತಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಪ್ಯಾಪ್ ಪರೀಕ್ಷೆ ಎಂದರೇನು?
ಪ್ಯಾಪ್ ಪರೀಕ್ಷೆಯನ್ನು ಪ್ಯಾಪ್ ಸ್ಮೀಯರ್ ಪರೀಕ್ಷೆ  ( Pap Smear Test ) ಎಂದೂ ಕರೆಯುತ್ತಾರೆ. ಗರ್ಭಕಂಠದ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು ಇದು ರುಟೀನ್ ಸ್ಕ್ರೀನಿಂಗ್ ವಿಧಾನವಾಗಿದೆ. ಗರ್ಭಕಂಠದಲ್ಲಿ ಬೆಳೆಯುತ್ತಿರುವ ಕ್ಯಾನ್ಸರ್ ಕೋಶಗಳನ್ನು ಪತ್ತೆಹಚ್ಚಲು ಈ ಪರೀಕ್ಷೆಯನ್ನು ಮಾಡಲಾಗುತ್ತದೆ.  


ಇದನ್ನೂ ಓದಿ :  ಪೀರಿಯೇಡ್ಸ್ ನೋವು ಸೇರಿದಂತೆ ಮಹಿಳೆಯರ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲಿದೆ ಬಿಳಿ ಅರಶಿನ


ಪ್ಯಾಪ್ ಪರೀಕ್ಷೆಯನ್ನು ಹೇಗೆ ಮಾಡಲಾಗುತ್ತದೆ? :
ಈ ಪರೀಕ್ಷೆಯಲ್ಲಿ, ನಿಮ್ಮ ಗರ್ಭಕಂಠದಿಂದ ಜೀವಕೋಶಗಳನ್ನು ನಿಧಾನವಾಗಿ ಸ್ಕ್ರ್ಯಾಪ್ ಮಾಡಿ ತೆಗೆಯಲಾಗುತ್ತದೆ. ನಂತರ ಅವುಗಳಲ್ಲಿನ ಬದಲಾವಣೆಗಳನ್ನು ಪರೀಕ್ಷಿಸಲಾಗುತ್ತದೆ. ಈ ಪರೀಕ್ಷೆಯನ್ನು ವೈದ್ಯರ ಪ್ರಯೋಗಾಲಯದಲ್ಲಿ ಮಾಡಲಾಗುತ್ತದೆ. ಇದು ಸ್ವಲ್ಪ  ಮಟ್ಟದಲ್ಲಿ ಕಿರಿ ಕಿರಿ ಉಂಟು ಮಾಡಬಹುದು. ಆದರೆ ನಂತರ ಯಾವುದೇ ನೋವನ್ನು ಉಂಟುಮಾಡುವುದಿಲ್ಲ.


ಪ್ಯಾಪ್ ಪರೀಕ್ಷೆ ಮಾಡಿಸುವುದು ಎಷ್ಟು ಅಗತ್ಯ ? : 
ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, 25 ವರ್ಷಗಳ ನಂತರ ಪ್ರತಿ ಮಹಿಳೆ ಪ್ರತಿ 5 ವರ್ಷಗಳಿಗೊಮ್ಮೆ ಪ್ಯಾಪ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.ಇದರಿಂದ ಕ್ಯಾನ್ಸರ್‌ನಂತಹ ರೋಗಗಳನ್ನು ಸಕಾಲದಲ್ಲಿ ಪತ್ತೆ ಹಚ್ಚಬಹುದು. ಇದಲ್ಲದೆ, ಈ  ರುಟೀನ್ ಟೆಸ್ಟ್ ಲೈಂಗಿಕವಾಗಿ ಸಕ್ರಿಯವಾಗಿರುವ ಮಹಿಳೆಯರಿಗೆ ತುಂಬಾ ಸಹಾಯಕವಾಗಿದೆ ಎಂದು  ಹೇಳಲಾಗುತ್ತದೆ. 


ಇದನ್ನೂ ಓದಿ : Bad Cholesterol: ಈ ಕೆಂಪು ತರಕಾರಿಯ ಜೂಸ್ ರಕ್ತ ನಾಳಗಳಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕ್ಷಣಾರ್ಧದಲ್ಲಿ ಹೊರಹಾಕುತ್ತೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ