ನವದೆಹಲಿ: Cheapest Corona Vaccine - ಮೊದಲು ಕೊರೊನಾ ವೈರಸ್ ಪ್ರಕೋಪ (Covid-19 Pandemic) ಹಾಗೂ ಬಳಿಕ ಆಕ್ಸಿಜನ್ (Oxygen), ಔಷಧಿ ಹಾಗೂ ವ್ಯಾಕ್ಸಿನ್ ಗಳ ಕೊರತೆ ಇಡೀ ದೇಶವನ್ನೇ ಸತಾಯಿಸುತ್ತಿವೆ. ಇವಲ್ಲವುಗಳ ನಡುವೆ ನೆಮ್ಮದಿಯ ಸುದ್ದಿಯೊಂದು ಪ್ರಕಟವಾಗಿದೆ. ಭಾರತದಲ್ಲಿ ಇದುವರೆಗೆ ಅತ್ಯಂತ ಅಗ್ಗದ ಕೊರೊನಾ ವ್ಯಾಕ್ಸಿನ್ ಎಂದೇ ಹೇಳಲಾಗುವ ಕೊರೊನಾ ವ್ಯಾಕ್ಸಿನ್ ವೊಂದು ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. ಭಾರತೀಯ ಕಂಪನಿ ಬಯೋಲಾಜಿಕಲ್-ಇ ಕಂಪನಿಯ ಕೊರ್ಬೆವ್ಯಾಕ್ಸ್ (Corbevax) ಅನ್ನು ಅಭಿವೃದ್ಧಿಗೊಳಿಸಿದೆ. ಪ್ರಸ್ತುತ ಈ ವ್ಯಾಕ್ಸಿನ್ ನ ಮೂರನೇ ಹಂತದ ಟ್ರಯಲ್ ನಡೆಯುತ್ತಿದೆ.


COMMERCIAL BREAK
SCROLL TO CONTINUE READING

Cheapest Corona Vaccine - ಮೂರನೇ ಹಂತದ ಟ್ರಯಲ್ ನ (Corbevax Third Phase Trail) ಅಂತಿಮ ಫಲಿತಾಂಶಗಳು ಪ್ರಕಟವಾದ ಬಳಿಕ ಈ ವ್ಯಾಕ್ಸಿನ್ ನ ತುರ್ತು ಬಳಕೆಗೆ ಅನುಮತಿ ಕೋರಲಾಗುವುದು. ಒಂದು ವೇಳೆ ಈ ವ್ಯಾಕ್ಸಿನ್ ಗೆ ಅನುಮತಿ ದೊರೆತರ ಈ ವ್ಯಾಕ್ಸಿನ್ (Corona Vaccine) ನ ಒಟ್ಟು ಎರಡು ಪ್ರಮಾಣಗಳು ಕೇವಲ ರೂ.500 ಇರಲಿದೆ ಎನ್ನಲಾಗುತ್ತಿದೆ. ವ್ಯಾಕ್ಸಿನ್ ನ ಈ ಬೆಲೆ ರೂ.400 ಕ್ಕಿಂತಲೂ ಕಡಿಮೆಯಾಗುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಈ ಕುರಿತು ಹೇಳಿಕೆ ನೀಡಿರುವ ಬಯಾಲಾಜಿಕಲ್ ಇ ಕಂಪನಿಯ (Biologigal-E Ltd) ಮುಖ್ಯ ನಿರ್ದೇಶಕಿ ಮಹಿಮಾ ದತ್ಲಾ (Mahima Datla), ವ್ಯಾಕ್ಸಿನ್ ಬೆಲೆಯ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವುದು ಇನ್ನೂ ಬಾಕಿ ಇದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ-Sputnik V ಲಸಿಕೆ ತಯಾರಿಸಲು ಪ್ರಾಥಮಿಕ ಅನುಮೋದನೆ ಪಡೆದ Serum Institute


ಭಾರತದಲ್ಲಿ ವ್ಯಾಕ್ಸಿನ್ ಬೆಲೆಗಳು (Cheapest Corona Vaccine)
ಭಾರತದಲ್ಲಿ ಪ್ರಸ್ತುತ ನಾಗರಿಕರಿಗೆ ಒಟ್ಟು ಮೂರು ವಿಧಧ ವ್ಯಾಕ್ಸಿನ್ ಗಳನ್ನು ಹಾಕಲಾಗುತ್ತಿದೆ. ಸಿರಮ್ ಇನ್ಸ್ಟಿಟ್ಯೂಟ್ ವ್ಯಾಕ್ಸಿನ್ ಆಗಿರುವ ಕೋವಿಶೀಲ್ಡ್ (Covishield) ಅನ್ನು ರಾಜ್ಯಸರ್ಕಾರಗಳಿಗೆ ರೂ.300 ಹಾಗೂ ಖಾಸಗಿ ಆಸ್ಪತ್ರೆಗಳಿಗೆ ರೂ.600 ಪ್ರತಿ ಡೋಸ್ ಬೆಲೆ ನಿಗದಿಪಡಿಸಲಾಗಿದೆ. ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ (Covaxin) ನ ಬೆಲೆ 600 ರೂ. ಹಾಗೂ 1200 ರೂ. ನಿಗದಿಪದಿಸಲಾಗಿದ್ದರೆ, ರಷ್ಯಾ ವ್ಯಾಕ್ಸಿನ್ ಆಗಿರುವ Sputnik V ಬೆಲೆಯನ್ನು ಪ್ರತಿ ಡೋಸ್ ಗೆ ರೂ.995 ನಿಗದಿಪಡಿಸಲಾಗಿದ್ದು, ಇದು ರಾಜ್ಯ ಸರ್ಕಾರಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿರಲಿದೆ.


ಇದನ್ನೂ ಓದಿ- ಏನಿದು New Covid-19? ವಿಯೆಟ್ನಾಂನಲ್ಲಿ ಪತ್ತೆಯಾಗಿರುವ ವೈರಸ್ ಬಗ್ಗೆ ನಿಮಗೆಷ್ಟು ಗೊತ್ತು?


30 ಕೋಟಿ ವ್ಯಾಕ್ಸಿನ್ ಗಳಿಗಾಗಿ ಕೇಂದ್ರ ಸರ್ಕಾರದ ಡೀಲ್ 
ಬಯಾಲಾಜಿಕಲ್-ಇ ವ್ಯಾಕ್ಸಿನ್ ನ ಮೂರನೇ ಹಂತದ ಫಲಿತಾಂಶಗಳು ಪ್ರಕಟಗೊಳ್ಳುವುದು ಇನ್ನೂ ಬಾಕಿ ಇದೆ. ಆದರೆ, ಭಾರತ ಸರ್ಕಾರ (Government Of India) ಹೈದ್ರಾಬಾದ್ (Hyderabad)ಮೂಲಕ ಈ ಕಂಪನಿಯ ಜೊತೆಗೆ ಈಗಾಗಲೇ 30 ಕೋಟಿ ವ್ಯಾಕ್ಸಿನ್ ಗಳಿಗಾಗಿ ಡೀಲ್ ಮಾಡಿಕೊಂಡಿದೆ ಎನ್ನಲಾಗಿದೆ. ಆದರೆ, ಯಾವುದೇ ವ್ಯಾಕ್ಸಿನ್ (Covid-19 Vaccine) ಗಾಗಿ ಮೂರನೇ ಹಂತದ ಟ್ರಯಲ್ ತುಂಬಾ ಮಹತ್ವದ್ದಾಗಿರುತ್ತದೆ. ಈ ಹಂತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಾಲಂಟೀರ್ ಗಳಿಗೆ ವಿವಿಧ ನಗರಗಳು ಹಾಗೂ ವಿವಿಧ ದೇಶಗಳಲ್ಲಿ ವ್ಯಾಕ್ಸಿನ್ ಹಾಕಲಾಗುತ್ತದೆ.


ಇದನ್ನೂ ಓದಿ-Covid-19 Vaccine: 'ಭಾರತದಲ್ಲಿ ಮಕ್ಕಳಿಗೂ ಕೂಡ Pfizer Corona Vaccine ಹಾಕಲಾಗುವುದು'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ