Curry Leaves: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆ ಜಗಿದು ತಿಂದರೆ ಏನಾಗುತ್ತೆ ಗೊತ್ತಾ?
Benefits of Curry Leaves: ಆಹಾರಗಳ ರುಚಿ ಹೆಚ್ಚಿಸಲು ಕರಿಬೇವಿನ ಎಲೆಗಳನ್ನು ಬಳಲಾಗುತ್ತದೆ. ಆದರೆ ಈ ಎಲೆಗಳನ್ನು ಬೆಳಗ್ಗೆ ಬೇಗನೆ ಅಗಿಯುವುದು ತುಂಬಾ ಪ್ರಯೋಜನಕಾರಿ. ರಂಜಕ, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ, ಜೀವಸತ್ವಗಳು ಮತ್ತು ಮೆಗ್ನೀಸಿಯಮ್ನಂತಹ ಪೋಷಕಾಂಶಗಳು ಕರಿಬೇವಿನ ಎಲೆಗಳಲ್ಲಿ ಕಂಡುಬರುತ್ತವೆ.
ಕರಿಬೇವಿನ ಎಲೆ ತಿನ್ನುವ ಪ್ರಯೋಜನಗಳು: ಭಾರತೀಯ ಅಡುಗೆಮನೆಯಲ್ಲಿ ಕರಿಬೇವಿನ ಎಲೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಈ ಎಲೆಯನ್ನು ಬಳಸುತ್ತಾರೆ. ಯಾವುದೇ ಆಹಾರದ ರುಚಿಯನ್ನು ಕರಿಬೇವಿನ ಎಲೆಗಳಿಂದ ಸುಧಾರಿಸಬಹುದು. ಕರಿಬೇವಿನ ಎಲೆಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ.
ಕರಿಬೇವಿನ ಸೊಪ್ಪು ಆರೋಗ್ಯದ ನಿಧಿ: ರಂಜಕ, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ, ಜೀವಸತ್ವಗಳು ಮತ್ತು ಮೆಗ್ನೀಸಿಯಮ್ನಂತಹ ಪೋಷಕಾಂಶಗಳು ಕರಿಬೇವಿನ ಎಲೆಗಳಲ್ಲಿ ಕಂಡುಬರುತ್ತವೆ. ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ನೀವು ಪ್ರತಿದಿನ ಬೆಳಗ್ಗೆ 3 ರಿಂದ 4 ಹಸಿರು ಎಲೆಗಳನ್ನು ಅಗಿದು ಸೇವಿಸಿದರೆ ಅದು ನಿಮಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ತಿಳಿಯಿರಿ.
ಇದನ್ನೂ ಓದಿ: Health Tips: ಲವಂಗ ಟೀ ಸೇವನೆಯಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ
ಕರಿಬೇವಿನ ಎಲೆ ತಿನ್ನುವುದರ ಅದ್ಭುತ ಪ್ರಯೋಜನಗಳು
1. ಕಣ್ಣುಗಳಿಗೆ ಒಳ್ಳೆಯದು: ಕರಿಬೇವಿನ ಎಲೆಗಳನ್ನು ತಿನ್ನುವುದು ರಾತ್ರಿ ಕುರುಡುತನ ಅಥವಾ ಇತರ ಅನೇಕ ಕಣ್ಣಿನ ಸಂಬಂಧಿತ ಕಾಯಿಲೆಗಳ ಅಪಾಯವನ್ನು ತಡೆಯುತ್ತದೆ. ಏಕೆಂದರೆ ಇದರಲ್ಲಿ ಅಗತ್ಯವಾದ ಪೋಷಕಾಂಶವಾದ ವಿಟಮಿನ್ ‘ಎ’ ಕಂಡುಬರುತ್ತದೆ. ಇದು ದೃಷ್ಟಿ ಸುಧಾರಿಸಲು ಸಹಾಯಕವಾಗಿದೆ.
2. ಮಧುಮೇಹದಲ್ಲಿ ಸಹಾಯಕ: ಮಧುಮೇಹ ರೋಗಿಗಳಿಗೆ ಕರಿಬೇವಿನ ಎಲೆಗಳನ್ನು ಅಗಿಯಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹೈಪೊಗ್ಲಿಸಿಮಿಕ್ ಗುಣಲಕ್ಷಣಗಳನ್ನು ಹೊಂದಿರುತ್ತವೆ.
3. ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ: ಕರಿಬೇವಿನ ಎಲೆಗಳನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿಯಬೇಕು. ಏಕೆಂದರೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆ, ಆಮ್ಲೀಯತೆ, ಉಬ್ಬಳಿಕೆ ಸೇರಿದಂತೆ ಎಲ್ಲಾ ಹೊಟ್ಟೆಯ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
ಇದನ್ನೂ ಓದಿ: ಈ ಆಹಾರಗಳನ್ನು ಸೇವಿಸುವ ಮೂಲಕ ನಿಮ್ಮ ಪ್ಲೇಟ್ಲೆಟ್ಗಳ ಸಂಖ್ಯೆಯನ್ನು ಹೆಚ್ಚಿಸಿ...
4. ಸೋಂಕಿನಿಂದ ರಕ್ಷಣೆ: ಆಂಟಿಫಂಗಲ್ ಮತ್ತು ಆ್ಯಂಟಿಬಯೋಟಿಕ್ ಗುಣಗಳು ಕರಿಬೇವಿನ ಎಲೆಗಳಲ್ಲಿ ಕಂಡುಬರುತ್ತವೆ. ಇದು ಅನೇಕ ರೀತಿಯ ಸೋಂಕುಗಳನ್ನು ತಡೆಯುತ್ತದೆ ಮತ್ತು ರೋಗಗಳ ಅಪಾಯವನ್ನು ತಡೆಯುತ್ತದೆ.
5. ತೂಕ ಕಡಿಮೆಯಾಗುತ್ತದೆ: ಕರಿಬೇವಿನ ಎಲೆಗಳನ್ನು ಜಗಿಯುವುದರಿಂದ ತೂಕ ನಷ್ಟ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಇದರಲ್ಲಿ ಈಥೈಲ್ ಅಸಿಟೇಟ್, ಮಹಾನಿಂಬಿನ್ ಮತ್ತು ಡೈಕ್ಲೋರೋಮೆಥೇನ್ ನಂತಹ ಪೋಷಕಾಂಶಗಳು ಕಂಡುಬರುತ್ತವೆ.
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮನೆಮದ್ದು ಮತ್ತು ಸಲಹೆ ಪಾಲಿಸುವ ಮೊದಲು ಕಡ್ಡಾಯವಾಗಿ ವೈದ್ಯರ ಸಲಹೆ ಪಾಲಿಸಬೇಕು.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.