Health Tips: ದಿನಕ್ಕೆ ಎಷ್ಟು ಚಮಚ ಸಕ್ಕರೆ ಸೇವಿಸಬೇಕು..?

Side effects of sugar: ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಸಿಹಿ ತಿನ್ನಬೇಕು? ಯಾವುದೇ ಒಬ್ಬ ವ್ಯಕ್ತಿ ದಿನಕ್ಕೆ 6 ಚಮಚಕ್ಕಿಂತ ಹೆಚ್ಚು ಸಿಹಿತಿನಿಸು ತಿನ್ನಬಾರದು ಎಂದು WHO ಸಲಹೆ ನೀಡಿದೆ. ಸಕ್ಕರೆ ಕಡಿಮೆ ಮಾಡಿದರೆ ಬೊಜ್ಜು ಮತ್ತು ಮಧುಮೇಹದಂತಹ ಕಾಯಿಲೆಗಳಿಂದ ಸುರಕ್ಷಿತವಾಗಿರಬಹುದು.

ನವದೆಹಲಿ: ಸಕ್ಕರೆ ಆರೋಗ್ಯಕ್ಕೆ ಹಾನಿಕಾರಕ. ಆದರೆ ಪ್ರತಿಯೊಬ್ಬರಿಗೂ ಸಿಹಿ ತಿನ್ನುವ ಬಯಕೆ. ಹೀಗಾಗಿಯೇ ಪ್ರತಿದಿನ ಬೆಳಗ್ಗೆ ಸಕ್ಕರೆ ಹಾಕಿದ ಚಹಾ-ಕಾಫಿ ಸೇವಿಸುತ್ತೇವೆ. ಸಕ್ಕರೆಯಿಂದಲೇ ನಮ್ಮ ದಿನ ಪ್ರಾರಂಭವಾಗುತ್ತದೆ. ಹೀಗಾಗಿ ಒಬ್ಬ ವ್ಯಕ್ತಿ ಪ್ರತಿದಿನ ಎಷ್ಟು ಪ್ರಮಾಣದ ಸಕ್ಕರೆ ಸೇವಿಸಬೇಕು? ಅನ್ನೋ ಪ್ರಶ್ನೆ ಮೂಡಿದೆ. ಇದಕ್ಕೆ ಉತ್ತರ ನಾವು ಪ್ರತಿದಿನ ಎಷ್ಟು ದೈಹಿಕ ಚಟುವಟಿಕೆ ಮಾಡುತ್ತೇವೆ ಎಂಬುದರ ಮೇಲಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಸಕ್ಕರೆ ನಮ್ಮ ದೇಹ ಮತ್ತು ಆರೋಗ್ಯಕ್ಕೆ ಯಾವುದೇ ರೀತಿ ಪ್ರಯೋಜನಕಾರಿಯಲ್ಲ. ಇದರಲ್ಲಿ ಯಾವುದೇ ಉತ್ತಮ ಪೋಷಕಾಂಶಗಳಿಲ್ಲ. ಹೆಚ್ಚು ಸಕ್ಕರೆ ತಿನ್ನುವುದರಿಂದ ಅನೇಕ ರೋಗಗಳು ಬರಬಹುದು. ಅಗತ್ಯಕ್ಕೆ ತಕ್ಕಂತೆ ಸ್ವಲ್ಪ ಸಕ್ಕರೆ ತಿನ್ನಬಹುದು. ಆದರೆ ಸಾಧ್ಯವಾದಷ್ಟು ಅದರಿಂದ ದೂರವಿರುವುದೇ ಉತ್ತಮ.  

2 /5

ಭಾರತದಲ್ಲಿ ಬಹುತೇಕ ಜನರು ಸಿಹಿ ತಿನ್ನಲು ಇಷ್ಟಪಡುತ್ತಾರೆ. ಯಾವುದೇ ಹಬ್ಬ-ಸಮಾರಂಭಗಳಲ್ಲಿ ಸಿಹಿ ತಿನಿಸುಗಳು ಇರಲೇಬೇಕು. ಭಾರತೀಯರು ತಿನ್ನುವಷ್ಟು ಸಿಹಿತಿಂಡಿಗಳನ್ನು ಜಗತ್ತಿನಲ್ಲಿ ಯಾರೂ ತಿನ್ನುವುದಿಲ್ಲ. ಬಹುತೇಕ ಮನೆಗಳಲ್ಲಿ ಊಟದ ನಂತರ ಸಿಹಿ ತಿನ್ನುವ ಅಭ್ಯಾಸವಿರುತ್ತದೆ. ವರದಿಗಳ ಪ್ರಕಾರ, ಭಾರತದಲ್ಲಿ ಜನರು ಸಕ್ಕರೆಗೆ ವ್ಯಸನಿಯಾಗಿದ್ದು, ಇದು ಅಪಾಯಕಾರಿ ಮಟ್ಟದಲ್ಲಿದೆ ಎಂದು ಹೇಳಲಾಗಿದೆ.

3 /5

ಆಹಾರ ಪದಾರ್ಥಗಳಲ್ಲಿ ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಭಾರತದಲ್ಲಿ ಪ್ರತಿ ವರ್ಷ ಶೇ.80ರಷ್ಟು ಸಾವುಗಳು ಮಧುಮೇಹ, ಕ್ಯಾನ್ಸರ್ ಮತ್ತು ಹೃದ್ರೋಗದಿಂದ ಸಂಭವಿಸುತ್ತವೆ. ಈ ಎಲ್ಲಾ ರೋಗಗಳು ಸಕ್ಕರೆ ಸೇವನೆಗೆ ಸಂಬಂಧಿಸಿವೆ.

4 /5

ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಸಿಹಿ ತಿನ್ನಬೇಕು? ಯಾವುದೇ ಒಬ್ಬ ವ್ಯಕ್ತಿ ದಿನಕ್ಕೆ 6 ಚಮಚಕ್ಕಿಂತ ಹೆಚ್ಚು ಸಿಹಿತಿನಿಸು ತಿನ್ನಬಾರದು ಎಂದು WHO ಸಲಹೆ ನೀಡಿದೆ. ಸಕ್ಕರೆ ಕಡಿಮೆ ಮಾಡಿದರೆ ಬೊಜ್ಜು ಮತ್ತು ಮಧುಮೇಹದಂತಹ ಕಾಯಿಲೆಗಳಿಂದ ಸುರಕ್ಷಿತವಾಗಿರಬಹುದು. ಆರೋಗ್ಯದ ದೃಷ್ಟಿಯಿಂದ ನೈಸರ್ಗಿಕ ಸಕ್ಕರೆ ಒಳಗೊಂಡಿರುವ ಆಹಾರಗಳನ್ನೇ ಸೇವಿಸಬೇಕು.

5 /5

ಹೆಚ್ಚು ಸಕ್ಕರೆ ಸೇವಿಸಿದರೆ ಟೈಪ್ 1 ಮಧುಮೇಹಕ್ಕೆ ಒಳಗಾಗುವ ಅಪಾಯ ಹೆಚ್ಚು. ಹೆಚ್ಚು ಸಕ್ಕರೆ ತಿನ್ನುವುದರಿಂದ ಮೇದೋಜ್ಜೀರಕ ಗ್ರಂಥಿಯು ಹೆಚ್ಚು ಇನ್ಸುಲಿನ್ ಉತ್ಪಾದಿಸುತ್ತದೆ. ಇದರಿಂದ ದೇಹದ ಜೀವಕೋಶಗಳು ಇನ್ಸುಲಿನ್‍ಗೆ ನಿರೋಧಕವಾಗಿರುತ್ತವೆ. ಸಕ್ಕರೆ ಸೇವನೆ ಹೃದಯದ ತೊಂದರೆಗೂ ಕಾರಣವಾಗುತ್ತದೆ. ಅಧಿಕ ಪ್ರಮಾಣದ ಸಕ್ಕರೆಯಿಂದ ಬೊಜ್ಜು ಹೆಚ್ಚಾಗಲು ಪ್ರಾರಂಭಿಸುತ್ತದೆ. ಹೆಚ್ಚು ಸಕ್ಕರೆ ತಿನ್ನುವುದರಿಂದ ತಲೆನೋವು ಮತ್ತು ಒತ್ತಡವೂ ಉಂಟಾಗುತ್ತದೆ.