ಬೆಂಗಳೂರು : Cholesterol Reduce Tips : ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಬೇಕಾದರೆ ಜೀವನಶೈಲಿಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇಲ್ಲದಿದ್ದರೆ ಸಮಸ್ಯೆಗಳಾಗಬಹುದು. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯಾಘಾತದ ಅಪಾಯ ಕೂಡಾ ಹೆಚ್ಚುತ್ತದೆ.  ರಕ್ತದೊತ್ತಡವು ಅಧಿಕವಾಗಿರುತ್ತದೆ. ದೇಹದಲ್ಲಿ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಇರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.  ದೇಹದಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದು ತಪ್ಪಲ್ಲ. ಆದರೆ ಅದು ಉತ್ತಮ ಕೊಲೆಸ್ಟ್ರಾಲ್  ಆಗಿರಬೇಕು. ಕೆಟ್ಟ ಕೊಲೆಸ್ಟ್ರಾಲ್ ಅನೇಕ ಜನರ ರಕ್ತನಾಳಗಳಲ್ಲಿ ಸಂಗ್ರಹಗೊಳ್ಳುತ್ತದೆ. ಇದರಿಂದಾಗಿ ಅವರ ಅಪಧಮನಿಗಳಲ್ಲಿ ಬ್ಲಾಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾದಾಗ   ಹೃದಯಾಘಾತದ ಅಪಾಯ ಹೆಚ್ಚುತ್ತದೆ. 


COMMERCIAL BREAK
SCROLL TO CONTINUE READING

20 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ಅಂದರೆ LDL ಮಟ್ಟವು 100 mg/dL ಗಿಂತ ಕಡಿಮೆಯಿರಬೇಕು ಎಂದು ಅನೇಕ ವರದಿಗಳು ಹೇಳಿವೆ. 20 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಲ್ಲಿಯೂ  ಇದು 100 mg/dL ಗಿಂತ ಕಡಿಮೆಯಿರಬೇಕು.


ಇದನ್ನೂ ಓದಿ : Ajwain Plants: ದೊಡ್ಡಪತ್ರೆ ಎಲೆಗಳಲ್ಲಿರುವ ಪ್ರಯೋಜನಗಳನ್ನು ತಿಳಿದರೆ ಅದನ್ನು ತಪ್ಪದೇ ಸೇವಿಸುತ್ತೀರಿ


ಈ ವಸ್ತುಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ :
ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ನೆಲ್ಲಿಕಾಯಿ ಬಹಳ ಸಹಕಾರಿಯಾಗಿರುತ್ತದೆ. ನೆಲ್ಲಿಕಾಯಿಯನ್ನು ತಿಂದರೆ  ಕೊಲೆಸ್ಟ್ರಾಲ್ ಮಟ್ಟವು ಸಮತೋಲನಗೊಳ್ಳುತ್ತದೆ. ಕೊಲೆಸ್ಟ್ರಾಲ್ ಕಡಿಮೆಯಾಗಬೇಕಾದರೆ ಪ್ರತಿದಿನ ಒಂದು ನೆಲ್ಲಿಕಾಯಿಯನ್ನು ತಿನ್ನಬೇಕು. 


ಆಹಾರದಲ್ಲಿ ಜೀರಿಗೆ, ಕೊತ್ತಂಬರಿ ಮತ್ತು ಸೊಂಫನ್ನು  ಸೇರಿಸಿಕೊಳ್ಳಬಹುದು. ಇದರಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.


ಇದಲ್ಲದೆ, ಕೊಲೆಸ್ಟ್ರಾಲ್  ಕಡಿಮೆ ಮಾಡುವಲ್ಲಿ ಬೆಳ್ಳುಳ್ಳಿ ಕೂಡಾ ಸಹಕಾರಿ. ಬೆಳ್ಳುಳ್ಳಿ ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ. ಇದಲ್ಲದೆ, ಪ್ರತಿದಿನ ನಿಮ್ಮ ಆಹಾರದಲ್ಲಿ ನಿಂಬೆಯನ್ನು ಸೇರಿಸಬಹುದು. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ಕೂಡ ದೂರವಾಗುತ್ತದೆ. 


ಇದನ್ನೂ ಓದಿ : Disadvantages Of Lack Of Sleep: ಕಡಿಮೆ ನಿದ್ರೆ ಪ್ರಾಣಕ್ಕೆ ಕುತ್ತು ತರಬಹುದು..ಎಚ್ಚರ!


ಇದರೊಂದಿಗೆ ಪ್ರತಿದಿನವೂ ನಿಮ್ಮ ಆಹಾರದಲ್ಲಿ ಶುಂಠಿಯನ್ನು ಸೇರಿಸಿಕೊಳ್ಳಬಹುದು. ಇದರ ಸಹಾಯದಿಂದ ನಿಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಹೊರಬರುತ್ತದೆ. 


ಒಟ್ಟಾರೆಯಾಗಿ, ಮೇಲೆ ತಿಳಿಸಿದ ವಸ್ತುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಖಂಡಿತವಾಗಿಯೂ ಪ್ರಯೋಜನವನ್ನು ನೀಡುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ