Disadvantages Of Lack Of Sleep: ವಿಶ್ವಾದ್ಯಂತ ಹೃದಯಾಘಾತದ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇನ್ನೊಂದೆಡೆ ಯುವ ಮತ್ತು ಆರೋಗ್ಯವಂತ ಜನರು ಕೂಡ ಈ ಕಾಯಿಲೆಗೆ ಗುರಿಯಾಗುತ್ತಿದ್ದಾರೆ. ಹೃದಯಾಘಾತ ಸಂಭವಿಸಲು ಹಲವು ಕಾರಣಗಳಿವೆ. ಅದರ ಹಿಂದೆ ಯಾವುದೇ ಒಂದು ನಿರ್ಧಿಷ್ಟ ಕಾರಣ ಇರುವುದಿಲ್ಲ, ಉದಾಹರಣೆಗೆ ತಪ್ಪು ಆಹಾರ ಪದ್ಧತಿ ಮತ್ತು ತಪ್ಪು ಜೀವನಶೈಲಿ ಇತ್ತ್ಯದಿಗಳು. ಆದರೆ ಕಡಿಮೆ ನಿದ್ರೆ ಅಥವಾ ರಾತ್ರಿ ವೇಳೆ ಹೆಚ್ಚು ಎಚ್ಚೆತ್ತುಕೊಂಡು ಇರುವುದರಿಂದ ಕೂಡ ಹೃದಯಾಘಾತ ಸಂಭವಿಸಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ನೀವು ಸಾಕಷ್ಟು ನಿದ್ರೆ ಮಾಡದಿದ್ದರೆ, ಅದು ಹೃದಯಾಘಾತಕ್ಕೆ ಕಾರಣವಾಗಬಹುದು ಎಂಬುದು ತಜ್ಞರ ಅಭಿಮತ. ಇಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ದಿನಕ್ಕೆ ಎಷ್ಟು ಗಂಟೆಗಳ ನಿದ್ದೆ ಮಾಡಬೇಕು ಮತ್ತು ನಿದ್ರೆಯ ಕೊರತೆಯಿಂದ ಹೃದಯ ಸಂಬಂಧಿ ಸಮಸ್ಯೆ ಹೇಗೆ ಎದುರಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ದಿನಕ್ಕೆ ಎಷ್ಟು ಗಂಟೆಗಳ ನಿದ್ದೆ ಅಗತ್ಯ?
ಒಬ್ಬ ವ್ಯಕ್ತಿಗೆ ಆಹಾರ ಎಷ್ಟು ಮುಖ್ಯವೋ ಅಷ್ಟೇ ನಿದ್ರೆಯೂ ಕೂಡ ಮುಖ್ಯ. ಆದರೆ ಹಲವು ಜನರು ಇದನ್ನು ಮರೆತು ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಮಾಡುವುದಿಲ್ಲ, ಇದರಿಂದ ಹಲವು ಕಾಯಿಲೆಗಳು ಅವರನ್ನು ಸುತ್ತುವರೆಯುತ್ತವೆ. 6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಉವವರಿಗೆ ಬೊಜ್ಜು, ಅಧಿಕ ಬಿಪಿ ಸಮಸ್ಯೆ, ಮಧುಮೇಹದಂತಹ ಕಾಯಿಲೆಗಳು ಎದುರಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ನೀವು ಪ್ರತಿ ದಿನ ಏಳು ಗಂಟೆಗಳಿಗಿಂತ ಹೆಚ್ಚು ಮತ್ತು 10 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದು ಉತ್ತಮ. ಅರ್ಥಾತ್ ನೀವು ಪ್ರತಿ ರಾತ್ರಿ 7-8 ಗಂಟೆಗಳ ನಿದ್ದೆ ತೆಗೆದುಕೊಳ್ಳಬೇಕು ಎಂದು ಹೇಳಬಹುದು.
ಇದನ್ನೂ ಓದಿ-Fatty Liver:ಫ್ಯಾಟಿ ಲೀವರ್ ನಿಂದ ಪ್ರಾಣಕ್ಕೆ ಸಂಚಕಾರ, ಈ ರೀತಿ ಪಾರಾಗಿ
ಕಡಿಮೆ ನಿದ್ರೆ ಮಾಡುವವರು ಹೃದಯಾಘಾತಕ್ಕೆ ಬಲಿಯಾಗುತ್ತಾರೆ
6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವವರು ಹೃದಯಾಘಾತದ ಅಪಾಯವನ್ನು ಹೊಂದಿರುತ್ತಾರೆ.ಏಕೆಂದರೆ ಹೃದಯದ ಆರೋಗ್ಯಕ್ಕೆ ನಿದ್ರೆ ತುಂಬಾ ಮುಖ್ಯ. ಕಡಿಮೆ ನಿದ್ರೆ ಮಾಡುವವರಿಗಿಂತ 8 ಗಂಟೆಗಳ ನಿದ್ದೆ ಮಾಡುವ ಜನರು ಆರೋಗ್ಯಕರ ಹೃದಯವನ್ನು ಹೊಂದಿರುತ್ತಾರೆ. ಆದ್ದರಿಂದ ನಿಮಗೂ ಕಡಿಮೆ ನಿದ್ದೆ ಮಾಡುವ ಅಭ್ಯಾಸವಿದ್ದರೆ ಇಂದೇ ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ.
ಇದನ್ನೂ ಓದಿ-Weight Loss Tips: ಬೊಜ್ಜು ಕಡಿಮೆ ಮಾಡಲು ಸಹಕಾರಿ ಸೂರ್ಯಕಾಂತಿ ಬೀಜಗಳು
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.