ದೊಡ್ಡಪತ್ರೆ ಎಲೆಗಳ ಪ್ರಯೋಜನಗಳು: ಆಯುರ್ವೇದದಲ್ಲಿ ಗಿಡಮೂಲಿಕೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಎಲ್ಲಾ ಗಿಡ ಮೂಲಿಕೆಗಳು ಸಹ ಒಂದಿಲ್ಲೊಂದು ಪ್ರಯೋಜನವನ್ನು ಹೊಂದಿರುತ್ತವೆ. ಅಂತಹ ಎಲೆಗಳಲ್ಲಿಯೇ ಒಂದು ಈ ದೊಡ್ಡಪತ್ರೆ ಎಲೆ. ಇದನ್ನು ಸಾಮಾನ್ಯವಾಗಿ ಅಜ್ವೈನ್ ಎಲೆಗಳು, ದೊಡ್ಡಿಪತ್ರೆ ಎಲೆಗಳು, ಸೆಲರಿ ಸಸ್ಯ ಎಂತಲೂ ಕರೆಯಲಾಗುತ್ತದೆ. ಈ ಎಲೆಗಳು ವಾತ-ಪಿತ್ತದಲ್ಲಿ ಪರಿಹಾರ ನೀಡುವುದಲ್ಲದೆ ಕೆಮ್ಮು ಮತ್ತು ಶೀತ, ಶ್ವಾಸಕೋಶ, ಮೂತ್ರದ ಸಮಸ್ಯೆ, ಅಲರ್ಜಿ, ತೂಕ ಹೆಚ್ಚಳದಿಂದಲ್ಲೂ ಪರಿಹಾರ ನೀಡುತ್ತದೆ ಎಂದು ಹೇಳಲಾಗುತ್ತದೆ. ದೊಡ್ಡಪತ್ರೆ ಎಲೆಗಳಲ್ಲಿರುವ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯೋಣ...
ದೊಡ್ಡಪತ್ರೆ /ಅಜ್ವೈನ್ ಎಲೆಗಳ ಪ್ರಯೋಜನಗಳು:
ಅಜ್ವೈನ್ ಸಸ್ಯವು ತುಂಬಾ ಪ್ರಯೋಜನಕಾರಿಯಾಗಿದೆ. ಚಳಿಗಾಲದಲ್ಲಿ ಇದು ನಮಗೆ ವಿಶೇಷವಾಗಿ ಉಪಯುಕ್ತವಾಗಿದೆ. ಸೆಲರಿ ಸಸ್ಯವು ನೋಡಲು ಆಕರ್ಷಕವಾಗಿರುವುದು ಮಾತ್ರವಲ್ಲ, ಇದರ ಎಲೆಗಳನ್ನು ಅನೇಕ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ಇದನ್ನು ಅನೇಕ ದೇಶೀಯ ಔಷಧಿಗಳಲ್ಲಿಯೂ ಸಹ ಬಳಸುತ್ತಾರೆ.
ವಾತದ ಸಮಸ್ಯೆ ಇರುವವರಿಗೆ ಪ್ರಯೋಜನಕಾರಿ:
ನಮ್ಮ ಆಹಾರದಲ್ಲಿನ ಬದಲಾವಣೆ ಬಿಡುವಿಲ್ಲದ ಜೀವನ ಶೈಲಿಯಿಂದಾಗಿ ಹಲವರು ವಾತದ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಅಂತಹವರಿಗೆ ದೊಡ್ಡಪತ್ರೆ ಎಲೆಗಳ ನೀರು ಅಂದರೆ ಅಜ್ವೈನ್ ನೀರು ತುಂಬಬ ಪ್ರಯೋಜನಕಾರಿ ಆಗಿದೆ.
ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಕಾರಿ:
ಅಲರ್ಜಿ ಸಮಸ್ಯೆ ಇರುವವರು ಅಜ್ವೈನ್ ಎಲೆಗಳ ರಸವನ್ನು ಹಚ್ಚುವುದರಿಂದ ಇದರ ಖಾದ್ಯಗಳನ್ನು ಸೇವಿಸುವುದರಿಂದ ಪ್ರಯೋಜನ ಪಡೆಯಬಹುದು.
ಇದನ್ನೂ ಓದಿ- Weight Loss Tips: ಬೊಜ್ಜು ಕಡಿಮೆ ಮಾಡಲು ಸಹಕಾರಿ ಸೂರ್ಯಕಾಂತಿ ಬೀಜಗಳು
ಮೂತ್ರದ ಸಮಸ್ಯೆಗಳಲ್ಲಿ ಪ್ರಯೋಜನ:
ದೊಡ್ಡಪತ್ರೆ ಎಲೆಗಳಲ್ಲಿ ಸೋಡಿಯಂ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಅನ್ನು ಸಮತೋಲಿತ ಪ್ರಮಾಣದಲ್ಲಿ ಕಂಡು ಬರುತ್ತದೆ. ಈ ಕಾರಣದಿಂದಾಗಿ, ಮೂತ್ರದ ತೊಂದರೆಗಳು ಪ್ರಯೋಜನಕಾರಿಯಾಗಬಹುದು. ಅದೇ ಸಮಯದಲ್ಲಿ, ಜೀರ್ಣಾಂಗ ವ್ಯವಸ್ಥೆ ಮತ್ತು ಮೆದುಳಿನಲ್ಲಿನ ಸೋಂಕುಗಳನ್ನು ತೆಗೆದುಹಾಕುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತದೆ.
ತೂಕ ನಷ್ಟಕ್ಕೆ:
ಆರೋಗ್ಯಕರ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳುವ ಒಂದು ಖಚಿತವಾದ ಮಾರ್ಗವೆಂದರೆ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುವುದು. ಆಹಾರವು ಸರಿಯಾಗಿ ಜೀರ್ಣವಾದಾಗ ಅನಗತ್ಯ ತೂಕ ಹೆಚ್ಚಾಗುವ ಸಾಧ್ಯತೆಗಳು ಕಡಿಮೆ. ಅಜ್ವೈನ್ ನೀರು ಆರೋಗ್ಯಕರವಾಗಿ ತೂಕ ಇಳಿಸಲು ತುಂಬಾ ಪ್ರಯೋಜನಕಾರಿ ಆಗಿದೆ.
ಶ್ವಾಸಕೋಶಕ್ಕೆ ಪ್ರಯೋಜನಕಾರಿ:
ವಯಸ್ಸಾದ ವಿರೋಧಿ ಗುಣಗಳು ಸಹ ಇದರಲ್ಲಿ ಕಂಡುಬರುತ್ತವೆ. ದೊಡ್ಡಿಪತ್ರೆ ಎಲೆಗಳಿಂದ ಚಹಾ ತಯಾರಿಸಿ ಕುಡಿಯುವುದರಿಂದ ಅಜೀರ್ಣ ಮತ್ತು ಹೊಟ್ಟೆಗೆ ಸಂಬಂಧಿಸಿದ ಗ್ಯಾಸ್ ಸಮಸ್ಯೆ ನಿವಾರಣೆಯಾಗುವುದಲ್ಲದೆ, ಇದರ ಬಳಕೆಯಿಂದ ಶ್ವಾಸಕೋಶವೂ ಸ್ವಚ್ಛವಾಗುತ್ತದೆ.
ಇದನ್ನೂ ಓದಿ- Disadvantages Of Lack Of Sleep: ಕಡಿಮೆ ನಿದ್ರೆ ಪ್ರಾಣಕ್ಕೆ ಕುತ್ತು ತರಬಹುದು..ಎಚ್ಚರ!
ಕೆಮ್ಮು ಮತ್ತು ಶೀತ ನಿವಾರಣೆಗೆ:
ಅಜ್ವೈನ್ ಎಲೆಗಳು ಶಕ್ತಿಯುತವಾದ ಉತ್ಕರ್ಷಣ ನಿರೋಧಕ, ಪ್ರತಿಜೀವಕ, ಕ್ಯಾನ್ಸರ್ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಶೀತ ಮತ್ತು ಕೆಮ್ಮನ್ನು ತೆಗೆದುಹಾಕುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ. ಶೀತ ಅಥವಾ ಕೆಮ್ಮಿನ ಸಮಸ್ಯೆಯ ಸಂದರ್ಭದಲ್ಲಿ ಇದರ ಕಷಾಯವು ತುಂಬಾ ಪರಿಣಾಮಕಾರಿಯಾಗಿದೆ. ನಿಮಗೆ ಅಗತ್ಯ ಎಂದೆನಿಸಿದರೆ ಅದರ ರುಚಿ ಹೆಚ್ಚಿಸಲು ಕಷಾಯದಲ್ಲಿ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಸೇವಿಸಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.