ದೇಶದಲ್ಲಿ ಕರೋನಾ ವೈರಸ್‌ನ ಎರಡನೇ ಅಲೆ ಅತ್ಯಂತ ವೇಗವಾಗಿ ಹರಡುತ್ತಿದೆ. ಕಳೆದ 24 ಗಂಟೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಸೋಂಕಿತ ರೋಗಿಗಳ ಸಂಖ್ಯೆಯಲ್ಲಿ ಹಠಾತ್ ಹೆಚ್ಚಳದಿಂದಾಗಿ, ಅನೇಕ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಸಹ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿ ಕಾರಣದಿಂದ ಗಂಭೀರ ರೋಗಿಗಳನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ರೋಗದ ಸೌಮ್ಯ ಅಥವಾ ಮಧ್ಯಮ ರೋಗಲಕ್ಷಣಗಳು ಕಂಡು ಬಂದಲ್ಲಿ ಅಂತಹ ರೋಗಿಗಳನ್ನು ಮನೆಯ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇವರು ಸ್ವಂತ ಮನೆಯಲ್ಲಿಯೇ ಇರುತ್ತಾರೆ ಆದರೆ ಮನೆಯ ಇತರ ಕುಟುಂಬ ಸದಸ್ಯರಿಂದ ಪ್ರತ್ಯೇಕವಾಗಿರುತ್ತಾರೆ ಶೇ. 80 ರಷ್ಟು ಜನ ಮನೆಯಲ್ಲಿ  ಪ್ರತ್ಯೇಕವಾಗಿರಿಸುವುದರಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ, ರೋಗಿಯ ಬೇಗ ಚೇತರಿಸಿಕೊಳ್ಳಲು ಅನುಸರಿಸಬೇಕಾದ ಪ್ರಮುಖ ನಿಯಮಗಳ(Important rules) ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.


ಇದನ್ನೂ ಓದಿ :Skin tanning ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ..! 


ರೋಗಿಗಳನ್ನು ಮನೆಯಲ್ಲಿ ಪ್ರತ್ಯೇಕಿಸಲು ಅಗತ್ಯ ನಿಯಮಗಳು:
ಕರೋನಾ ರೋಗಿಯನ್ನ ನಿಮ್ಮ ಮನೆಯಲ್ಲಿ ಗಾಳಿ ಬೆಳಕು ಬರುವ ಪ್ರತ್ಯೇಕ ಕೋಣೆಯಲ್ಲಿ ಇರಿಸಬೇಕು. ಇವರಿಗೆ ಪ್ರತ್ಯೇಕ ಶೌಚಾಲ (Separate room and toilet)ಯ ಇರಬೇಕು ಇದನ್ನು ಸೋಂಕಿತ ರೋಗಿ ಮಾತ್ರ ಬಳಸಬೇಕು. ಮನೆಯ ಉಳಿದ ಸದಸ್ಯರು ಯಾವುದೇ ಕಾರಕ್ಕೂ ಬಳಸಬೇಡಿ.


ಮನೆಯ ಪ್ರತ್ಯೇಕ ರೂಮ್ ನಲ್ಲಿರುವ ರೋಗಿಯು ತನ್ನ ಕೋಣೆಯ ಕಿಟಕಿಗಳನ್ನು ತೆರೆದಿಡಬೇಕು (Keep windows open)  ಇದರಿಂದ ಗಾಳಿ ಮತ್ತು ಸೂರ್ಯನ ಬೆಳಕು ಕೋಣೆಯ ಒಳಗಡೆ ಬರುವ ಹಾಗೆ.


ಇದನ್ನೂ ಓದಿ : Green Chillies Benefits: ಹಸಿ ಮೆಣಸಿನಕಾಯಿ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೋತಾ?


- ಯಾವಾಗಲೂ ಮಾಸ್ಕ ಹಾಕಿಕೊಂಡಿರಬೇಕು(Always wear mask) ಮತ್ತು ಪ್ರತಿ 6 ರಿಂದ 8 ಗಂಟೆಗಳಿಗೊಮ್ಮೆ ಅದನ್ನ  ಬದಲಾಯಿಸಬೇಕು. ಅಲ್ಲದೆ, ರೋಗಿಯ ಊಟದ ತಟ್ಟೆ, ಲೋಟ ಪಾತ್ರೆಗಳು, ಟವಲ್, ಬಟ್ಟೆ  ಇತ್ಯಾದಿಗಳನ್ನು ಸಂಪೂರ್ಣವಾಗಿ ಪ್ರತ್ಯೇಕವಾಗಿರಿಸಿಕೊಳ್ಳಿ ಮತ್ತು ಮನೆಯ ಯಾವುದೇ ಸದಸ್ಯರು ಅವುಗಳನ್ನು ಬಳಸಬಾರದು.


ಇದನ್ನೂ ಓದಿ : ಹಾಲಿನ ಜೊತೆ ತಪ್ಪಿಯೂ ಈ ಏಳು ತಪ್ಪು ಮಾಡಬೇಡಿ..!


-ಕೊರೊನಾ ರೋಗಿಯು ದಿನಕ್ಕೆ 2-3 ಬಾರಿ ಜ್ವರ ಪರೀಕ್ಷಿಸಿಕೊಳ್ಳಬೇಕು(Check for fever). ಜ್ವರವು 100 ಡಿಗ್ರಿ‌ಗಿಂತ ಹೆಚ್ಚಿರಬಾರದು ಎಂಬುವುದು ನೆನಪಿರಲಿ. ಅಲ್ಲದೆ, ಆಕ್ಸಿಮೀಟರ್ ಸಹಾಯದಿಂದ, ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಪರೀಕ್ಷಿಸುತ್ತಿರಿ. ಇದರ ಮಟ್ಟವು ಶೇಕಡಾ 94 ಕ್ಕಿಂತ ಕಡಿಮೆಯಿರಬಾರದು.


ಇದನ್ನೂ ಓದಿ : Remdesivir ಲಭ್ಯತೆ ಖಾತರಿಪಡಿಸಲು ಸರ್ಕಾರದ ಮಹತ್ವದ ನಿರ್ಣಯ


ಮನೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಜ್ವರ ಹೆಚ್ಚಾದರೆ, ನಿಮಗೆ ಉಸಿರಾಟದ ತೊಂದರೆ ಇದ್ದರೆ, ಆಮ್ಲಜನಕದ ಮಟ್ಟವು ಕಡಿಮೆಯಾಗಲು ಪ್ರಾರಂಭಿಸುತ್ತದೆ, ರೋಗಿಗೆ ಚಡಪಡಿಕೆ, ಹೆದರಿಕೆ, ತೀವ್ರ ತಲೆನೋವು ಮುಂತಾದ ಸಮಸ್ಯೆಗಳು ಕಂಡು ಬಂದಲ್ಲಿ ಆಗ ಅವರನ್ನು ತಕ್ಷಣ ಆಸ್ಪತ್ರೆಗೆ (Get admitted in hospital) ದಾಖಲಿಸಿ.


ಇದನ್ನೂ ಓದಿ : Sleeping Tips: ರಾತ್ರಿ ಮಲಗುವಾಗ ನೀವೂ ಈ ರೀತಿಯ ಒಳಉಡುಪು ಧರಿಸುತ್ತಿದ್ದರೆ ಎಚ್ಚರ!


ಕರೋನಾ ರೋಗಿ ಏನು ತಿನ್ನ ಬೇಕು ತಿನ್ನಬಾರದು:
ಕರೋನಾ ಸೋಂಕಿತ ರೋಗಿ ಹೆಚ್ಚು ಉಪ್ಪು, ಸಂಸ್ಕರಿಸಿದ ಆಹಾರ ಸೇವಿಸಬಾರದು. ಅದ್ರಲ್ಲೂ ಆಲೂಗೆಡ್ಡೆ ಚಿಪ್ಸ್ ಮೊದಲು ಸೇವಿಸಬೇಡಿ, ಯಾಕೆ ಅಂದ್ರೆ ಅದರಲ್ಲಿ ಹೆಚ್ಚು ಉಪ್ಪು ಇರುತ್ತದೆ. ಇವುಗಳಿಂದಾಗಿ ದೇಹದ ರೋಗನಿರೋಧಕ ಶಕ್ತಿ ಕಡಿಮೆ(Weak immune system) ಯಾಗುತ್ತದೆ. ಮಾಂಸವನ್ನು ಸೇವಿಸಬೇಡಿ. ಹೆಚ್ಚು ಹುರಿದ ಅಥವಾ ಮಸಾಲೆಯುಕ್ತ ಆಹಾರವನ್ನು ಸೇವಿಸಬೇಡಿ. ಕರೋನಾ ರೋಗಿಗಳಿಗೆ ಪ್ರೋಟೀನ್, ಕಬ್ಬಿಣ, ಸತು, ವಿಟಮಿನ್ ಡಿ ಮತ್ತು ವಿಟಮಿನ್ ಬಿ ಇರುವ ಆಹಾರಗಳನ್ನ ನೀಡಿ.


ಇದನ್ನೂ ಓದಿ : Black pepper: ಪ್ರತಿದಿನ ಕೇವಲ ಒಂದೆರಡು ಕರಿಮೆಣಸನ್ನು ಸೇವಿಸಿ, ಈ ರೋಗಗಳಿಂದ ದೂರವಿರಿ


ನೆನೆಸಿದ ಬಾದಾಮಿ, ಖರ್ಜುರ, ಗೋಡಂಬಿ, ಒಣದ್ರಾಕ್ಷಿ ಇತ್ಯಾದಿಗಳನ್ನು ದೈನಂದಿನ ಆಹಾರದಲ್ಲಿ ಸೇವಿಸಬೇಕು. ಮಸೂರನ್ನ, ಹಸಿರು ಸೊಪ್ಪು, ತರಕಾರಿ, ಹಣ್ಣುಗಳು, ಕಡಲೆಕಾಯಿ, ಅರಿಶಿನ ಹಾಲು, ಅವಲಕ್ಕಿ, ನಿಂಬೆ ಪಾನಕ, ತೆಂಗಿನ ನೀರು, ಸಾಗೋ, ಉಪ್ಪಿಟ್ಟು, ತುಪ್ಪ ಮುಂತಾದ ಪೌಷ್ಟಿಕ ಆಹಾರಗಳನ್ನ ಸೇವಿಸಬೇಕು. ಸ್ವಲ್ಪ ವ್ಯಾಯಾಮ ಮಾಡಿ ಇದರಿಂದ ನಿಮ್ಮ ಆರೋಗ್ಯ ಚಟುವಟಿಕೆಯಿಂದ ಇರುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.