Clove for Diabetes : ಮಧುಮೇಹವು ಆನುವಂಶಿಕ ಕಾರಣಗಳಿಂದ ಸಂಭವಿಸಬಹುದಾದ ಕಾಯಿಲೆಯಾಗಿದೆ. ಆದರೆ ಸಾಮಾನ್ಯವಾಗಿ ಇದು ನಮ್ಮ ಗೊಂದಲಮಯ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳಿಂದ ಉಂಟಾಗುತ್ತದೆ. ಭಾರತ ಮಾತ್ರವಲ್ಲ, ಪ್ರಪಂಚದಾದ್ಯಂತ ಅಸಂಖ್ಯಾತ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಮಧುಮೇಹವು ಇತರ ಅನೇಕ ರೋಗಗಳ ಅಪಾಯವನ್ನು ಕೂಡಾ ಹೆಚ್ಚಿಸುತ್ತದೆ. ಇದನ್ನು ನಿಯಂತ್ರಿಸುವಲ್ಲಿ ಇನ್ಸುಲಿನ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇನ್ಸುಲಿನ್ ಒಂದು ಹಾರ್ಮೋನ್ ಆಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.  


COMMERCIAL BREAK
SCROLL TO CONTINUE READING

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ತರುತ್ತದೆ  ಲವಂಗ :
ಮಧುಮೇಹ ರೋಗಿಗಳು ತಮ್ಮ ನಿತ್ಯದ ಆಹಾರದಲ್ಲಿ ಲವಂಗವನ್ನು ಸೇರಿಸಿಕೊಳ್ಳಬೇಕು. ಈ ಮಸಾಲೆಯನ್ನು ಸಾಮಾನ್ಯವಾಗಿ ಆಹಾರದ ರುಚಿ ಹೆಚ್ಚಿಸಲು ಬಳಸಲಾಗುತ್ತದೆ. ಅಲ್ಲದೆ ಎಲ್ಲರ ಮನೆಯ ಅಡುಗೆ ಕೋಣೆಯಲ್ಲಿ ಇದಕ್ಕೊಂದು ಜಾಗ ಇದ್ದೇ ಇರುತ್ತದೆ. ಲವಂಗ ಕೇವಲ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ,  ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಲವಂಗವು ಮಧುಮೇಹ ರೋಗಿಗಳ ಪಾಲಿಗೆ ವರದಾನವೇ ಸರಿ.   


ಇದನ್ನೂ ಓದಿ Benefits Of Ghee Coffee: ಬೆಳಗ್ಗೆ ಕಾಫಿಯಲ್ಲಿ ಈ ಕೊಲೆಸ್ಟ್ರಾಲ್ ಬೆರೆಸಿ ಸೇವಿಸುವುದರಿಂದ ಹಲವು ಲಾಭಗಳಿವೆ, ಇಲ್ಲಿದೆ ತಯಾರಿಸುವ ವಿಧಾನ


ಮಧುಮೇಹ ರೋಗಿಗಳಿಗೆ ಲವಂಗ ಹೇಗೆ ಪ್ರಯೋಜನಕಾರಿ? :
ಲವಂಗವು ಮಧುಮೇಹ-ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಅದಕ್ಕಾಗಿಯೇ ಲವಂಗ ಎಣ್ಣೆಯನ್ನು ಸೇವಿಸುವುದರಿಂದ ಇನ್ಸುಲಿನ್ ಮತ್ತು ಗ್ಲೂಕೋಸ್  ರೆಸ್ಪಾನ್ಸ್ ಮೆಕ್ಯಾನಿಸಂ ಹೆಚ್ಚಿಸುತ್ತದೆ. ಈ ಗರಂ ಮಸಾಲಾದಲ್ಲಿರುವ ಉತ್ಕರ್ಷಣ ನಿರೋಧಕಗಳು ಮೇದೋಜ್ಜೀರಕ ಗ್ರಂಥಿಯ ಕೆಲಸವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಮೇದೋಜ್ಜೀರಕ ಗ್ರಂಥಿಯು ನಮ್ಮ ದೇಹದ ಒಂದು ಪ್ರಮುಖ ಭಾಗವಾಗಿದ್ದು, ಅದರ ಮೂಲಕ ಇನ್ಸುಲಿನ್ ಉತ್ಪತ್ತಿಯಾಗುತ್ತದೆ. ಆದ್ದರಿಂದ, ಲವಂಗವನ್ನು ಪ್ರತಿದಿನ ಸೇವಿಸುವ ಮೂಲಕ ಮಧುಮೇಹ ರೋಗಿಗಳು, ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಬಹುದು. 


- ಇದಕ್ಕಾಗಿ ಒಂದು ಚಮಚ ಲವಂಗವನ್ನು ನುಣ್ಣಗೆ ರುಬ್ಬಿಕೊಳ್ಳಿ 
- ಈಗ ಈ ಪುಡಿಯನ್ನು ಒಂದು ಕಪ್ ನೀರಿಗೆ ಹಾಕಿ ಸುಮಾರು 10 ನಿಮಿಷಗಳ ಕಾಲ ಕುದಿಸಿ
- ಕುದಿಸಿದ ನಂತರ ಅರ್ಧ ಚಮಚ ಟೀ ಪುಡಿಯನ್ನು ಸೇರಿಸಿ ಮತ್ತು ಸ್ವಲ್ಪ ಸಮಯ ಬಿಡಿ
- ಈಗ ಈ ದ್ರವವನ್ನು ಫಿಲ್ಟರ್ ಮಾಡಿ , ಕುಡಿಯಿರಿ. 


ಇದನ್ನೂ ಓದಿ : ಮೊಟ್ಟೆಯನ್ನು ಈ ರೀತಿ ಬಳಸಿದರೆ ಕೆಲವೇ ದಿನಗಳಲ್ಲಿ ನಿಮ್ಮದಾಗಲಿದೆ ಉದ್ದನೆಯ ಕೇಶ ಕಾಂತಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.