Coffee Side Effects: ಭಾರತದಲ್ಲಿ ಕಾಫಿ ಪ್ರಿಯರ ಕೊರತೆಯಿಲ್ಲ, ಅದು ಪರ್ವತಗಳ ಫಿಲ್ಟರ್ ಕಾಫಿಯಾಗಿರಲಿ ಅಥವಾ ಅಂಗಡಿಯಲ್ಲಿ ಸಿಗುವ ಕ್ಯಾಪಿಚಿನೋ ಆಗಿರಲಿ,  ನೀವು ಅದನ್ನು ಕುಡಿದ ತಕ್ಷಣ ನಿಮ್ಮ ದೇಹದಲ್ಲಿ ಅದ್ಭುತ ತಾಜಾತನವನ್ನು ಅನುಭವಿಸುತ್ತೀರಿ. ಈ ಅದ್ಭುತ ಪಾನೀಯದಲ್ಲಿ ಅನೇಕ ಪೋಷಕಾಂಶಗಳಿವೆ, ಅವು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಕೆಲವರು ಕಾಫಿಯನ್ನು ಅತಿಯಾಗಿ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಅದು ದೇಹಕ್ಕೆ ಹಾನಿಕಾರಕವೆಂದು ಸಾಬೀತುಪಡಿಸಬಹುದು. ಖ್ಯಾತ ಆಹಾರ ತಜ್ಞ ಡಾ.ಆಯುಷಿ ಯಾದವ್ ಅವರು ಕಾಫಿಯನ್ನು ಏಕೆ ಅತಿಯಾಗಿ ಸೇವಿಸಬಾರದು ಎಂಬುದನ್ನು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಆರೋಗ್ಯದ ಮೇಲೆ ಕಾಫಿ ಕುಡಿಯುವುದರಿಂದಾಗುವ ಪ್ರಭಾವಗಳು
1. ಬುದ್ಧಿಮಾಂದ್ಯತೆ ರೋಗ

ದಿನಕ್ಕೆ 5 ಅಥವಾ 6 ಕಪ್‌ಗಳಿಗಿಂತ ಹೆಚ್ಚು ಕಾಫಿ ಕುಡಿಯುವ ಜನರಲ್ಲಿ ಬುದ್ಧಿಮಾಂದ್ಯತೆಯ ಅಪಾಯ ಹೆಚ್ಚಾಗುತ್ತದೆ. ಇದು ಮಾನಸಿಕ ಕಾಯಿಲೆಯಾಗಿದ್ದು, ಇದರಲ್ಲಿ ರೋಗಿಯು ಮಾನಸಿಕವಾಗಿ ನಾರ್ಮಲ್ ಬಿಹೆವ್ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಇದರಿಂದ ಅಧಿಕ ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು ಮುಂತಾದ ಕಾಯಿಲೆಗಳು ಬರಬಹುದು.


2. ಜೀರ್ಣಕ್ರಿಯೆ ಸಮಸ್ಯೆ
ಕಾಫಿ ಕುಡಿಯುವುದರಿಂದ ನಮ್ಮ ಹೊಟ್ಟೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಏಕೆಂದರೆ ಇದರಿಂದ ದೇಹದಲ್ಲಿ ಗ್ಯಾಸ್ಟ್ರಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ, ಇದು ಕರುಳಿನ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ನೀವು ಹೆಚ್ಚು ಕಾಫಿ ಕುಡಿದರೆ ಅಜೀರ್ಣ ಸಮಸ್ಯೆ ಎದುರಾಗಬಹುದು.


3. ಅಧಿಕ ರಕ್ತದೊತ್ತಡ
ಕಾಫಿಯಲ್ಲಿ ಹೆಚ್ಚಿನ ಪ್ರಮಾಣದ ಕೆಫೀನ್ ಇರುತ್ತದೆ, ಇದು ರಕ್ತದೊತ್ತಡವನ್ನು ತ್ವರಿತವಾಗಿ ಹೆಚ್ಚಿಸುವ ಕೆಲಸ ಮಾಡುತ್ತದೆ. ಇದು ಹೃದಯಾಘಾತ, ಪಾರ್ಶ್ವವಾಯು ಮುಂತಾದ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ನೀವು ಹೃದ್ರೋಗ ಹೊಂದಿದ್ದರೆ ಅಥವಾ ಅಧಿಕ ಬಿಪಿಯ ದೂರು ಹೊಂದಿದ್ದರೆ, ನಂತರ ಕಡಿಮೆ ಪ್ರಮಾಣದಲ್ಲಿ ಕಾಫಿ ಕುಡಿಯಿರಿ.


ಇದನ್ನೂ ಓದಿ-Health Tips: ದೇಹದಿಂದ ವಿಷಕಾರಿ ಪದಾರ್ಥ ಹೊರಹಾಕಿ ತೂಕ ಇಳಿಕೆ ಮಾಡಿಕೊಳ್ಳಬೇಕೆ? ಈ ಟೀ ಟ್ರೈ ಮಾಡಿ!


4. ನಿದ್ರಾಹೀನತೆ ಸಮಸ್ಯೆ
ಕಾಫಿ ಕುಡಿಯುವುದರಿಂದ ನಾವು ಉಲ್ಲಾಸವನ್ನು ಅನುಭವಿಸುತ್ತೇವೆ ಮತ್ತು ನಿದ್ರೆ ಮತ್ತು ಆಯಾಸವು ಇದರಿಂದ ಮಾಯವಾಗುತ್ತದೆ. ಆದರೆ, ಮತ್ತೊಂದೆಡೆ ಇದರಿಂದ ನಿದ್ರಾಹೀನತೆ ಸಮಸ್ಯೆ ಹೆಚ್ಚಾಗುತ್ತದೆ, ಏಕೆಂದರೆ ಕಾಫಿಯನ್ನು ಅತಿಯಾಗಿ ಸೇವಿಸಿದರೆ ಕೆಫೀನ್ ನಿಂದಾಗಿ ಸರಿಯಾದ ಸಮಯಕ್ಕೆ ನಿದ್ದೆ ಬರುವುದಿಲ್ಲ ಮತ್ತು ಮಲಗುವ ಕ್ರಮವೂ ಸಂಪೂರ್ಣವಾಗಿ ಹಾಳಾಗುತ್ತದೆ.


ಇದನ್ನೂ ಓದಿ-Diabetes: ಕೆಲವೇ ದಿನಗಳಲ್ಲಿ ಮಧುಮೇಹ ನಿಯಂತ್ರಕ್ಕೆ ಬೆಳಗ್ಗೆ ಈ ಒಂದು ಕೆಲಸ ಮಾಡಿ ಸಾಕು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.