Cholesterol: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಉಗುರಿನಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ!

High Cholesterol: ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ಸಾಕಷ್ಟು ಹಾಳಾಗುತ್ತಿದ್ದು. ಇದು ಕೊಲೆಸ್ಟ್ರಾಲ್ ಸೇರಿದಂತೆ ಹೃದ್ರೋಗ ಪಾರ್ಶ್ವವಾಯುಗಳಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತಿದೆ. ದೇಹದಲ್ಲಿ, ಕೊಲೆಸ್ಟ್ರಾಲ್ ಹೆಚ್ಚಾದಾಗ, ನಿಮ್ಮ ಉಗುರುಗಳಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.  

Written by - Nitin Tabib | Last Updated : Apr 20, 2023, 06:33 PM IST
  • ಇದೇ ವೇಳೆ ಶರೀರದಲ್ಲಿ, ಕೊಲೆಸ್ಟ್ರಾಲ್ ಮಟ್ಟದಲ್ಲಿನ ಹೆಚ್ಚಳದಿಂದಾಗಿ,
  • ಬೊಜ್ಜು ಮತ್ತು ಅಧಿಕ ರಕ್ತದೊತ್ತಡದ ಅಪಾಯವು ಜನರಲ್ಲಿ ಹೆಚ್ಚಾಗುತ್ತದೆ.
  • ಕೊಲೆಸ್ಟ್ರಾಲ್ ಹೆಚ್ಚಾದಾಗ, ನಿಮ್ಮ ಉಗುರುಗಳಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ,
Cholesterol: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಉಗುರಿನಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ! title=
ಕೊಲೆಸ್ಟ್ರಾಲ್ ಹೆಚ್ಚಳದ ಸಂಕೇತಗಳು!

High Cholesterol Symptoms: ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ಸಾಕಷ್ಟು ಹಾಳಾಗುತ್ತಿದ್ದು. ಇದು ಕೊಲೆಸ್ಟ್ರಾಲ್ ಸೇರಿದಂತೆ ಹೃದ್ರೋಗ ಪಾರ್ಶ್ವವಾಯುಗಳಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತಿದೆ. ಇದೇ ವೇಳೆ ಶರೀರದಲ್ಲಿ, ಕೊಲೆಸ್ಟ್ರಾಲ್ ಮಟ್ಟದಲ್ಲಿನ ಹೆಚ್ಚಳದಿಂದಾಗಿ, ಬೊಜ್ಜು ಮತ್ತು ಅಧಿಕ ರಕ್ತದೊತ್ತಡದ ಅಪಾಯವು ಜನರಲ್ಲಿ ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾದಾಗ, ನಿಮ್ಮ ಉಗುರುಗಳಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಅವುಗಳನ್ನು ಮರೆತೂ ಕೂಡ ನಿರ್ಲಕ್ಷಿಸಬೇಡಿ.

ಕೊಲೆಸ್ಟ್ರಾಲ್ ಹೆಚ್ಚಾದಾಗ ಉಗುರುಗಳಲ್ಲಿ ಈ ಲಕ್ಷಣಗಳು ಕಂಡುಬರುತ್ತವೆ
ಉಗುರುಗಳ ಹಳದಿ

ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ನಮ್ಮ ಉಗುರುಗಳ ಬಣ್ಣ ಹಳದಿಯಾಗುತ್ತದೆ. ಇದು ದೇಹದಲ್ಲಿನ ಕಳಪೆ ರಕ್ತ ಪರಿಚಲನೆಯನ್ನು ಸೂಚಿಸುತ್ತದೆ. ಕಳಪೆ ರಕ್ತ ಪರಿಚಲನೆಯ ಕಾರಣ , ನಿಮ್ಮ ಉಗುರುಗಳ ಬಣ್ಣವು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ ಅಥವಾ ಉಗುರುಗಳಲ್ಲಿ ಬಿರುಕುಗಳು ಮೂಡಲು ಪ್ರಾರಂಭಿಸುತ್ತವೆ. ಅಷ್ಟೇ ಅಲ್ಲ, ಇದು ನಿಮ್ಮ ಉಗುರುಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ಕೈ ನೋವು
ದೇಹದಲ್ಲಿ ಪ್ಲೇಕ್ ಸಂಗ್ರಹವಾದಾಗ ಅದು ಅಪಧಮನಿಗಳನ್ನು ಮುಚ್ಚಿಹಾಕುತ್ತದೆ, ಇದನ್ನು ಅಪಧಮನಿಕಾಠಿಣ್ಯ ಎಂದು ಕರೆಯಲಾಗುತ್ತದೆ, ಕೊಲೆಸ್ಟ್ರಾಲ್ ದೇಹದಲ್ಲಿ ಸಂಗ್ರಹವಾಗುವುದರಿಂದ ಅದು ಕೈಗಳ ರಕ್ತನಾಳಗಳಲ್ಲಿ ಅಡೆತಡೆ ಉಂಟುಮಾಡಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ, ಕೈಯಲ್ಲಿ ನೋವು ಪ್ರಾರಂಭವಾಗುತ್ತದೆ.

ಇದನ್ನೂ ಓದಿ-Diabetes ಕಾಯಿಲೆ ಇರುವವರು ಈ ರೀತಿ ಟೀ-ಕಾಫಿ ಸೇವಿಸಿ, ಸಮಸ್ಯೆಗಳಿಂದ ದೂರ ಉಳಿಯುವಿರಿ!

ಕೈಯಲ್ಲಿ ಜುಮ್ಮೆನಿಸುವಿಕೆ
ದೇಹದ ಕೆಲವು ಭಾಗಗಳಲ್ಲಿ ರಕ್ತದ ಹರಿವಿನ ಅಡೆತಡೆಯಿಂದಾಗಿ ಕೈಯಲ್ಲಿ ಜುಮ್ಮೆನಿಸುವಿಕೆ ಅನುಭವ ಉಂಟಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಮತ್ತು ಸ್ಥೂಲಕಾಯತೆಯಿಂದಾಗಿ, ಸರಿಯಾದ ರಕ್ತದ ಹರಿವು ಸಾಧ್ಯವಾಗುವುದಿಲ್ಲ. ಇದರಿಂದ ಕೈಯಲ್ಲಿ ಜುಮ್ಮೆನಿಸುವಿಕೆ ಉಂಟಾಗುತ್ತದೆ. ಹೀಗಾಗಿ ಕೈಗಳಲ್ಲಿ ಜುಮ್ಮೆನ್ನುವಿಕೆ ಅನುಭವಕ್ಕೆ ಬಂದರೆ ನಿರ್ಲಕ್ಷಿಸಬಾರದು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ-Lady Finger For Weight Loss: 'ಲೇಡೀಸ್ ಫಿಗರ್' ನಿರ್ವಹಣೆಗೆ ಬಲು ಲಾಭಕಾರಿ ಈ 'ಲೇಡಿ ಫಿಂಗರ್'!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News