ಬೆಂಗಳೂರು : ನಮ್ಮ ಮನೆಯ ಅಡುಗೆಮನೆಯಲ್ಲಿ ಅನೇಕ ಮಸಾಲೆಗಳನ್ನು ಬಳಸಲಾಗುತ್ತದೆ. ಅವು ಆಹಾರದ ರುಚಿಯನ್ನು ಹೆಚ್ಚಿಸುತ್ತವೆ. ಆದರೆ ಈ ಮಸಾಲೆಗಳು ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲ ನಮ್ಮ ಆರೋಗ್ಯವನ್ನು ಕೂಡಾ ಕಾಪಾಡುತ್ತದೆ. ರುಚಿ ಮತ್ತು ಘಮಕ್ಕಾಗಿ ಬಳಸುವ ಈ ಮಸಾಲೆಗಳು ಅನೇಕ ರೋಗಗಳಿಗೆ ರಾಮಬಾಣ ಪರಿಹಾರವಾಗಿ ಕೆಲಸ ಮಾಡುತ್ತದೆ. ಇವುಗಳನ್ನು ನಾವು ಪ್ರತಿನಿತ್ಯ ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. 


COMMERCIAL BREAK
SCROLL TO CONTINUE READING

ಚಕ್ಕೆಯ ಆರೋಗ್ಯ ಪ್ರಯೋಜನಗಳು: 
ಚಕ್ಕೆ ಅಡುಗೆಯಲ್ಲಿ ಹೆಚ್ಚಾಗಿ ಬಳಸುವ ಮಸಾಲೆಗಳಲ್ಲಿ ಒಂದಾಗಿದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಕೆಲವೊಂದು ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಮನೆಗಳಲ್ಲಿ ಇದನ್ನು ಆಹಾರದ ರುಚಿಯನ್ನು ಹೆಚ್ಚಿಸಲು ಮಾತ್ರ ಬಳಸಲಾಗುತ್ತದೆ. ಆದರೆ ಈ ಮಸಾಲೆಯಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಚಕ್ಕೆಯ ಕೆಲವು ಆರೋಗ್ಯ ಪ್ರಯೋಜನಗಳನ್ನು  ಇಲ್ಲಿ ತಿಳಿದುಕೊಳ್ಳೋಣ.


ಇದನ್ನೂ ಓದಿ : ದುಂಡು ಹೊಟ್ಟೆ ಚಪ್ಪಟೆಯಾಗಬೇಕಾದರೆ ರಾತ್ರಿಯ ಭೋಜನದಲ್ಲಿ ಈ ನಾಲ್ಕು ಆಹಾರವನ್ನಷ್ಟೇ ತಿನ್ನಿ


ಮೈ ಕೈ ನೋವುಗೆ ಮನೆ ಮದ್ದು : 
ಚಕ್ಕೆಯಲ್ಲಿ ಆಂಟಿಆಕ್ಸಿಡೆಂಟ್‌ಗಳು ಅಧಿಕವಾಗಿದೆ. ದೇಹದ ಯಾವುದೇ ಭಾಗದಲ್ಲಿ ಊತ ಅಥವಾ ನೋವು ಕಾಣಿಸಿಕೊಂಡರೆ ಚಕ್ಕೆಯನ್ನು ಬಳಸಿದರೆ ನೋವು ಮಾಯವಾಗುತ್ತದೆ. 


ಮಧುಮೇಹದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ :
ಚಕ್ಕೆ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ತುಂಬಾ ಪರಿಣಾಮಕಾರಿ ಎನ್ನುವುದು ಅಧ್ಯಯನಗಳಿಂದ ಸಾಬೀತಾಗಿದೆ. ಚಕ್ಕೆ  ಬಳಸುವುದರಿಂದ, ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗಲು ಪ್ರಾರಂಭಿಸುತ್ತದೆ.


ತೂಕ ನಷ್ಟಕ್ಕೆ ಮನೆಮದ್ದು :
ದಾಲ್ಚಿನ್ನಿ ದೇಹದಲ್ಲಿ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ದೇಹದ ಕೊಲೆಸ್ಟ್ರಾಲ್ ಕಡಿಮೆಯಾದರೆ  ಬೊಜ್ಜು ಕೂಡಾ ಕರಗುತ್ತದೆ. 


ಇದನ್ನೂ ಓದಿ : ಅಡುಗೆ ಮನೆಯಲ್ಲಿರುವ ಈ ಸಾಂಬಾರ ಪದಾರ್ಥ ಮಧುಮೇಹ ರೋಗಿಗಳಿಗೆ ಒಂದು ಸೂಪರ್ ಫುಡ್!


ಕೆಮ್ಮಿಗೆ ಮನೆಮದ್ದು :
ಕೆಮ್ಮಿನ ಸಮಸ್ಯೆ ಇರುವವರಿಗೆ ಚಕ್ಕೆ ಸೇವನೆ ತುಂಬಾ ಪ್ರಯೋಜನಕಾರಿ. ಕೆಮ್ಮು ಇದ್ದರೆ ಚಕ್ಕೆ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸಬಹುದು. ಇದರಿಂದ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ.


ತಲೆನೋವಿಗೆ ಮನೆಮದ್ದು :
ತಲೆನೋವು ಸಮಸ್ಯೆ ಇರುವವರು ಚಕ್ಕೆ ಬಳಸಬಹುದು. ಇದಕ್ಕಾಗಿ ಚಕ್ಕೆ ಎಲೆಗಳ ಪೇಸ್ಟ್ ತಯಾರಿಸಿ ಈ ಪೇಸ್ಟ್ ಅನ್ನು ತಲೆಗೆ ಹಚ್ಚಿದರೆ ತಲೆನೋವು ನಿವಾರಣೆಯಾಗುತ್ತದೆ.


ಕ್ಯಾನ್ಸರ್ ತಡೆಗಟ್ಟುವಿಕೆಗೆ ಮನೆಮದ್ದು :
ಚಕ್ಕೆ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.  ಇದರ ದೈನಂದಿನ ಸೇವನೆಯು ಕ್ಯಾನ್ಸರ್ ತಡೆಯುವಲ್ಲಿ ಅದರಲ್ಲೂ ವಿಶೇಷವಾಗಿ ಹೊಟ್ಟೆಯ ಕ್ಯಾನ್ಸರ್ ನಲ್ಲಿ ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ : 20 ಸೆಕೆಂಡ್‌ನಂತೆ ಪ್ರತಿದಿನ 3 ಬಾರಿ ʼಲಿಪ್‌ಕಿಸ್‌ʼ ಮಾಡಿದ್ರೆ ಬೊಜ್ಜು ಕರಗುತ್ತೆ..! ಇದು ಸತ್ಯ


ತ್ವಚೆಯ ಆರೈಕೆಗೆ ಮನೆಮದ್ದು :
ಚಕ್ಕೆ ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಇದು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ. ಮೊಡವೆಗಳಿಗೆ ಪರಿಹಾರವಾಗಿ ಹಚ್ಚುವ ಚಕ್ಕೆ ಮಾಸ್ಕ್ ತಯಾರಿಸಲು ಮೂರು ಚಮಚ ಜೇನುತುಪ್ಪವನ್ನು ಒಂದು ಚಮಚ ದಾಲ್ಚಿನ್ನಿ ಪುಡಿಯೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ. 10 ನಿಮಿಷಗಳ ಕಾಲ ಬಿತ್ತು ಮುಖವನ್ನು ತೊಳೆಯಿರಿ. 


ರಕ್ತದೊತ್ತಡಕ್ಕೆ ಮನೆಮದ್ದು : 
ಚಕ್ಕೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು  ನಿಯಂತ್ರಿಸುತ್ತದೆ. ಈ ಮೂಲಕ ಹೃದಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ