Weight loss food for dinner: ತೂಕ ಇಳಿಸಿಕೊಳ್ಳಲು ಆರೋಗ್ಯಕರ ಆಹಾರ ಅತ್ಯಗತ್ಯ. ಆರೋಗ್ಯಕರ ಆಹಾರ ಯಾವಾಗಲೂ ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ತೂಕ ನಷ್ಟದಲ್ಲಿ ನಾವು ಗಮನಹರಿಸಬೇಕಾದ ಪ್ರಮುಖ ಅಂಶಗಳಾಗಿವೆ. ಆದರೆ, ಅನೇಕರು ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ವ್ಯಾಯಾಮ ಮತ್ತು ದೇಹ ದಂಡನೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಆದರೆ ಆಹಾರ ಕ್ರಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಬಿಡುತ್ತಾರೆ. ನಿಜವಾಗಿಯೂ ತೂಕ ಇಳಿಸಿಕೊಳ್ಳಬೇಕಾದರೆ ಯಾವ ಹೊತ್ತಿನಲ್ಲಿ ಯಾವ ಆಹಾರ ಸೇವಿಸುತ್ತೇವೆ ಎನ್ನುವುದು ಬಹಳ ಮುಖ್ಯ. ಇನ್ನು ಹೊಟ್ಟೆಯ ಕೊಬ್ಬು ಇಳಿಸಿಕೊಳ್ಳಬೇಕು ಎಂದರೆ, ರಾತ್ರಿಯ ಊಟದಲ್ಲಿ ಕೆಲವೊಂದು ಆಹಾರಗಳನ್ನಷ್ಟೇ ಸೇವಿಸಬೇಕು. ಆಗ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ.
ಈ ತೂಕ ನಷ್ಟ ಭೋಜನ ಪಾಕವಿಧಾನಗಳು ನಿಮ್ಮ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆಗ ದೇಹವು ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ. ಕ್ಯಾಲೊರಿಗಳು ಬರ್ನ್ ಆದಾಗ ಹೊಟ್ಟೆಯ ಕೊಬ್ಬು ತಾನಾಗಿಯೇ ಕಡಿಮೆಯಾಗುತ್ತದೆ. ತೂಕ ನಷ್ಟಕ್ಕೆ, ಪ್ರಯತ್ನಿಸುವವರು ಮಲಗುವ ಸುಮಾರು 2 ರಿಂದ 3 ಗಂಟೆಗಳ ಮೊದಲು ರಾತ್ರಿಯ ಭೋಜನವನ್ನು ಮಾಡಿ ಮುಗಿಸಬೇಕಾಗುತ್ತದೆ. ಹೀಗಾದಾಗ ಜೀರ್ಣಾಂಗ ವ್ಯವಸ್ಥೆಯು ಆಹಾರವನ್ನು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳುತ್ತದೆ. ಇದರ ಜೊತೆಗೆ ರಾತ್ರಿ ಏನು ತಿನ್ನಬೇಕು ಎನ್ನುವುದು ಕೂಡಾ ಅಷ್ಟೇ ಮುಖ್ಯವಾಗಿರುತ್ತದೆ.
ಇದನ್ನೂ ಓದಿ : ಅಡುಗೆ ಮನೆಯಲ್ಲಿರುವ ಈ ಸಾಂಬಾರ ಪದಾರ್ಥ ಮಧುಮೇಹ ರೋಗಿಗಳಿಗೆ ಒಂದು ಸೂಪರ್ ಫುಡ್!
ಹುರಿದ ತರಕಾರಿಗಳು :
ಹುರಿದ ತರಕಾರಿಗಳು ಆರೋಗ್ಯಕರ ಮತ್ತು ಟೇಸ್ಟಿ ಆಯ್ಕೆಯಾಗಿವೆ. ಅದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ನಿಮ್ಮ ಆಯ್ಕೆಯ ಯಾವುದೇ ತರಕಾರಿಗಳನ್ನು ಹುರಿಯಬಹುದು. ಕ್ಯಾರೆಟ್, ಕೋಸುಗಡ್ಡೆ, ಅಣಬೆ, ಟೊಮೆಟೊ ಮತ್ತು ಗೆಣಸು ಇವುಗಳನ್ನು ತೂಕ ಕಡಿಮೆ ಮಾಡಲು ಪ್ರ್ರಯತ್ನಿಸುವವರು ಹೆಚ್ಚಾಗಿ ರೋಸ್ಟ್ ಮಾಡಿ ಸೇವಿಸುತ್ತಾರೆ.
ಓಟ್ಸ್ ಮತ್ತು ಗೋಧಿ ಕಡಿ ಉಪ್ಪಿಟ್ಟು :
ಓಟ್ಸ್ ಮತ್ತು ಗೋಧಿ ಕಡಿ ಉಪ್ಪಿಟ್ಟಿನಲ್ಲಿ ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಅಲ್ಲದೆ, ಅವು ಪ್ರೋಟೀನ್ನಲ್ಲಿ ಕೂಡಾ ಸಮೃದ್ಧವಾಗಿರುತ್ತವೆ. ಇದು ಸ್ನಾಯುಗಳ ನಿರ್ಮಾಣ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಇದನ್ನೂ ಓದಿ :20 ಸೆಕೆಂಡ್ನಂತೆ ಪ್ರತಿದಿನ 3 ಬಾರಿ ʼಲಿಪ್ಕಿಸ್ʼ ಮಾಡಿದ್ರೆ ಬೊಜ್ಜು ಕರಗುತ್ತೆ..! ಇದು ಸತ್ಯ
ಕೋಳಿ ಅಥವಾ ಮೀನು :
ಕೋಳಿ ಅಥವಾ ಮೀನಿನೊಂದಿಗೆ ಮಾಡುವ ಸಲಾಡ್ ಆರೋಗ್ಯಕರ ಮತ್ತು ಸಮತೋಲಿತ ಊಟವಾಗಿದೆ. ಕೋಳಿ ಅಥವಾ ಮೀನು ಪ್ರೋಟೀನ್ನ ಉತ್ತಮ ಮೂಲವಾಗಿದೆ. ಸಲಾಡ್ ಫೈಬರ್ನಲ್ಲಿ ಸಮೃದ್ಧವಾಗಿರುತ್ತದೆ.
ತೋಫು ಅಥವಾ ಸೋಯಾಬೀನ್ :
ತೋಫು ಮತ್ತು ಸೋಯಾಬೀನ್ ಪ್ರೋಟೀನ್ನ ಉತ್ತಮ ಮೂಲಗಳಾಗಿದ್ದು, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಅವು ಫೈಬರ್ ಮತ್ತು ಇತರ ಪೋಷಕಾಂಶಗಳಲ್ಲಿಯೂ ಸಮೃದ್ಧವಾಗಿವೆ.
ಇದನ್ನೂ ಓದಿ : ಹವಾಮಾನ ಬದಲಾಗುತ್ತಿದ್ದಂತೆಯೇ ನಿಂಬೆಹಣ್ಣು ಸೇವಿಸಿ ! ಈ ಸಮಸ್ಯೆಗಳು ಕಾಡುವುದಿಲ್ಲ
( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ