ಜೀರಿಗೆ ನೀರಿಗೆ ಈ ಬೀಜವನ್ನು ಸೇರಿಸಿ ಕುಡಿದರೆ ಜಿಡ್ಡು ಗಟ್ಟಿ ಕುಳಿತಿರುವ ಕೊಲೆಸ್ಟ್ರಾಲ್ ಕರಗುವುದು ಗ್ಯಾರಂಟಿ!ಔಷಧಿ, ವ್ಯಾಯಾಮ ಯಾವುದೂ ಬೇಡ !
Cumin Seeds Water for Bad Cholesterol:ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಮಾರಣಾಂತಿಕವಾಗಿಯೂ ಪರಿಣಮಿಸಬಹುದು.ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು, ಜೀರಿಗೆ ನೀರಿನೊಂದಿಗೆ ಈ ಬೀಜಗಳನ್ನು ಬೆರೆಸಬೇಕು.
Cumin Seeds Water for Bad Cholesterol : ಕೊಲೆಸ್ಟ್ರಾಲ್ ನಮ್ಮ ದೇಹದಲ್ಲಿರುವ ಮೇಣದಂತಹ ಜಿಗುಟಾದ ವಸ್ತುವಾಗಿದೆ.ಇದು ದೇಹದ ಅನೇಕ ಅಗತ್ಯ ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.ಆದರೆ,ರಕ್ತದಲ್ಲಿ ಇದರ ಪ್ರಮಾಣ ಹೆಚ್ಚಾದರೆ ದೇಹಕ್ಕೆ ಹಾನಿ ಉಂಟಾಗುತ್ತದೆ ಎನ್ನುವುದು ಕೂಡಾ ಅಷ್ಟೇ ಸತ್ಯ. ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಹೃದಯಾಘಾತ, ಪಾರ್ಶ್ವವಾಯು ಮುಂತಾದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹೀಗಾದಾಗ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು ಬಹಳ ಮುಖ್ಯ.ಕೊಲೆಸ್ಟ್ರಾಲ್ ನಮ್ಮ ರಕ್ತದಲ್ಲಿ ಲಿಪೊಪ್ರೋಟೀನ್‌ಗಳ ರೂಪದಲ್ಲಿ ಕಂಡುಬರುತ್ತದೆ. ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (LDL) ಅನ್ನು "ಕೆಟ್ಟ" ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಮಾರಣಾಂತಿಕವಾಗಿಯೂ ಪರಿಣಮಿಸಬಹುದು.
ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು, ಜೀರಿಗೆ ನೀರಿನೊಂದಿಗೆ ಚಿಯಾ ಬೀಜಗಳನ್ನು ಬೆರೆಸಿ ತಿನ್ನಬೇಕು.ಜೀರಿಗೆ ನೀರಿನೊಂದಿಗೆ ಚಿಯಾ ಬೀಜಗಳನ್ನು ಮಿಶ್ರಣ ಮಾಡುವುದರಿಂದ ಅದರ ಪ್ರಯೋಜನಗಳನ್ನು ದ್ವಿಗುಣವಾಗುವುದು. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಜೀರಿಗೆ ಮತ್ತು ಚಿಯಾ ಬೀಜಗಳ ನೀರು ಹೇಗೆ ಪ್ರಯೋಜನಕಾರಿ ಎನ್ನುವುದನ್ನು ನೋಡಬಹುದು.
ಇದನ್ನೂ ಓದಿ : ಈ ರೋಗಗಳು ಬುಡದಿಂದಲೇ ಗುಣವಾಗಬೇಕಾದರೆ ಹಣ್ಣಲ್ಲ, ಮಾವಿನಕಾಯಿ ತಿನ್ನಬೇಕು !
ಜೀರಿಗೆ ಮತ್ತು ಚಿಯಾ ಬೀಜ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ :
ಜೀರಿಗೆ ಮತ್ತು ಚಿಯಾ ಬೀಜಗಳ ನೀರನ್ನು ಕುಡಿಯುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು.ಈ ಎರಡರ ಮಿಶ್ರಣವು ಹೆಚ್ಚಿನ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.ಇದಕ್ಕಾಗಿ,1 ಚಮಚ ಜೀರಿಗೆ ಮತ್ತು ಚಿಯಾ ಬೀಜಗಳನ್ನು 1 ಗ್ಲಾಸ್ ನೀರಿನಲ್ಲಿ ರಾತ್ರಿಯಿಡೀ ಹಾಕಿ ನೆನೆಸಿಡಬೇಕು. ಬೆಳಿಗ್ಗೆ ಈ ನೀರನ್ನು ಚೆನ್ನಾಗಿ ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ಸೇರಿಸಿ ಕುಡಿಯಬೇಕು. ಹೀಗೆ ನಿಯಮಿತವಾಗಿ ಮಾಡುತ್ತಾ ಬಂದರೆ ಕೆಟ್ಟ ಕೊಲೆಸ್ಟ್ರಾಲ್ ಕರಗುವುದರಲ್ಲಿ ಸಂದೇಹವೇ ಇಲ್ಲ.
ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಜೀರಿಗೆ ಹೇಗೆ ಪ್ರಯೋಜನಕಾರಿ?
ದೇಹದಲ್ಲಿ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಜೀರಿಗೆ ತುಂಬಾ ಪ್ರಯೋಜನಕಾರಿ.ಜೀರಿಗೆಯಲ್ಲಿರುವ ಉತ್ಕರ್ಷಣ ನಿರೋಧಕಗಳು, ಕಬ್ಬಿಣ,ಕರಗುವ ಫೈಬರ್ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.ಇದಲ್ಲದೆ,ಇದು ಅಧಿಕ ರಕ್ತದೊತ್ತಡ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕೂಡಾ ಕಡಿಮೆ ಮಾಡುತ್ತದೆ. ನಿಯಮಿತವಾಗಿ ಜೀರಿಗೆ ಅಥವಾ ಜೀರಿಗೆಯಿಂದ ತಯಾರಿಸಿದ ಪಾನೀಯವನ್ನು ಸೇವಿಸಿದರೆ, ಹೃದಯದ ಆರೋಗ್ಯವನ್ನು ಕೂಡಾ ಕಾಪಾಡುತ್ತದೆ.
ಇದನ್ನೂ ಓದಿ : ಮೂಳೆಗಳಲ್ಲಿ ಸಂಗ್ರಹವಾಗಿರುವ ಯೂರಿಕ್ ಆಸಿಡ್ ಹರಳುಗಳನ್ನು ಒಡೆದು ಹಾಕುತ್ತದೆ ಈ ಕಪ್ಪು ಬೀಜ ! ಬೆಳಗ್ಗೆ ಎದ್ದ ತಕ್ಷಣ ಹೀಗೆ ಸೇವಿಸಿ.
ಕೊಲೆಸ್ಟ್ರಾಲ್‌ನಲ್ಲಿ ಚಿಯಾ ಬೀಜಗಳು ಹೇಗೆ ಪ್ರಯೋಜನಕಾರಿ? :
ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಚಿಯಾ ಬೀಜಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನಕಾರಿ.ಇದರಲ್ಲಿ ಕರಗುವ ಫೈಬರ್ ಸಮೃದ್ಧವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.ಇದರಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು.
ಜೀರಿಗೆ ಮತ್ತು ಚಿಯಾ ಬೀಜಗಳಿಂದ ಮಾಡಿದ ನೀರನ್ನು ಯಾವಾಗ ಸೇವಿಸಬೇಕು? :
ಜೀರಿಗೆ ಮತ್ತು ಚಿಯಾ ಬೀಜಗಳಿಂದ ತಯಾರಿಸಿದ ನೀರನ್ನು ಯಾವುದೇ ಸಮಯದಲ್ಲಿ ಬೇಕಾದರೂ ಕುಡಿಯಬಹುದು.ಆದರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಪರಿಣಾಮ ಸ್ವಲ್ಪ ಹೆಚ್ಚಿಗೆ ಇರುತ್ತದೆ. ಈ ನೀರನ್ನು ಸೇವಿಸಿದ ನಂತರ ಸುಮಾರು 30 ನಿಮಿಷದಿಂದ 1 ಗಂಟೆಯವರೆಗೆ ಏನನ್ನೂ ತಿನ್ನಬಾರದು ಎನ್ನುವುದು ಕೂಡಾ ನೆನಪಿರಲಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.