Home Remedy to control uric acid : ಯೂರಿಕ್ ಆಸಿಡ್ ಹರಳುಗಳನ್ನು ಒಡೆಯಲು ಈ ಸಣ್ಣ ಸಣ್ಣ ಬೀಜಗಳು ಸಹಾಯ ಮಾಡುತ್ತದೆ.ಇದು ಹೈ ಯೂರಿಕ್ ಆಸಿಡ್ ಹೊಂದಿರುವ ರೋಗಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ.
High Uric Acid Level : ಯೂರಿಕ್ ಆಮ್ಲ ಪ್ಯೂರಿನ್ ಎಂಬ ಪದಾರ್ಥಗಳ ವಿಭಜನೆಯಿಂದ ರೂಪುಗೊಳ್ಳುತ್ತದೆ.ಕೆಲವು ಆಹಾರಗಳು ಪ್ಯೂರಿನ್‌ಗಳನ್ನು ಹೊಂದಿರುತ್ತವೆ. ಹೆಚ್ಚಿನ ಯೂರಿಕ್ ಆಸಿಡ್ ರಕ್ತದಲ್ಲಿ ಕರಗಿ ಮೂತ್ರಪಿಂಡಗಳನ್ನು ತಲುಪುತ್ತದೆ. ಹೀಗೆ ಮೂತ್ರದ ಮೂಲಕ ದೇಹದಿಂದ ಹೊರಹಾಕಲ್ಪಡುತ್ತದೆ.ಆದರೆ, ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾದರೆ ಅದನ್ನು ದೇಹದಿಂದ ಹೊರ ಹಾಕುವುದು ಸಾಧ್ಯವಾಗುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾದರೆ ಅದನ್ನು ದೇಹದಿಂದ ಹೊರ ಹಾಕುವುದು ಸಾಧ್ಯವಾಗುವುದಿಲ್ಲ.ಆಗ ಯೂರಿಕ್ ಆಸಿಡ್ ಹರಳುಗಳು ಕ್ರಮೇಣ ಕೀಲುಗಳು ಮತ್ತು ಮೂಳೆಗಳ ಸುತ್ತಲೂ ರೂಪುಗೊಳ್ಳಲು ಪ್ರಾರಂಭಿಸುತ್ತವೆ.
ಯೂರಿಕ್ ಆಸಿಡ್ ಹರಳುಗಳನ್ನು ಒಡೆಯಲು ಕರಿ ಜೀರಿಗೆ ಸಹಾಯ ಮಾಡುತ್ತದೆ.ಇದು ಹೈ ಯೂರಿಕ್ ಆಸಿಡ್ ಹೊಂದಿರುವ ರೋಗಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ.ಯೂರಿಕ್ ಆಸಿಡ್ ರೋಗಿಗಳಿಗೆ ಕರಿ ಜೀರಿಗೆ ಹೇಗೆ ಪ್ರಯೋಜನಕಾರಿ ಮತ್ತು ಅದನ್ನು ಹೇಗೆ ಸೇವಿಸಬೇಕು ನೋಡೋಣ.
ಕರಿಜೀರಿಗೆಯಲ್ಲಿ ಹೆಚ್ಚಿನ ಪ್ರಮಾಣದ ಬೀಟಾ-ಸೆಲೆನೈನ್ ಮತ್ತು ಎನ್-ಬ್ಯುಟೈಲ್ಫ್ತಾಲೈಡ್ ಎಂಬ ಸಂಯುಕ್ತಗಳಿವೆ. ಇದು ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದಲ್ಲದೆ,ಈ ಬೀಜಕ್ಕೆ ಮೂಳೆಗಳಲ್ಲಿ ಸಂಗ್ರಹವಾಗಿರುವ ನೈಟ್ರಿಕ್ ಆಕ್ಸೈಡ್ ಹರಳುಗಳ ರಚನೆಯನ್ನು ತಡೆಯುವ ಶಕ್ತಿಯಿದೆ.
ಯೂರಿಕ್ ಆಮ್ಲವನ್ನು ನಿಯಂತ್ರಿಸಲು, ಬೆಳಿಗ್ಗೆ ಕರಿಜೀರಿಗೆಯ ಚಹಾ ಮಾಡಿ ಸೇವಿಸಬಹುದು. ಇದಕ್ಕಾಗಿ,1ಲೋಟ ನೀರು ತೆಗೆದುಕೊಂಡು,ಅದರಲ್ಲಿ ಸುಮಾರು 1 ಚಮಚ ಕರಿಜೀರಿಗೆ ಬೀಜಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ.ನಂತರ, ಅದನ್ನು ಫಿಲ್ಟರ್ ಮಾಡಿ ಚಹಾದಂತೆ ಕುಡಿಯಿರಿ.ಬೇಕಾದರೆ ರುಚಿಗೆ ಜೇನುತುಪ್ಪವನ್ನು ಬೆರೆಸಬಹುದು.
ನೀವು ಸೇವಿಸುವ ಯಾವುದೇ ಆಹಾರಕ್ಕೂ ಕರಿಜೀರಿಗೆ ಪುಡಿಯನ್ನು ಸೇರಿಸಬಹುದು. ಕರಿಜೀರಿಗೆ ಸೇರಿಸಿದ್ದೀರಿ ಎಂದಾದರೆ ಆ ಆಹಾರಕ್ಕೆ ಸ್ವಲ್ಪ ಬೆಲ್ಲ ಸೇರಿಸಿಕೊಳ್ಳಿ. (ಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)