Disadvantages Of Eating Bread : ಇಂದಿನ ದಿನಗಳಲ್ಲಿ, ಜನರಿಗೆ ಎಲ್ಲವೂ ಸುಲಭವಾಗಿ ಸಿಗಬೇಕು. ಸುಲಭವಾಗಿ ತಯಾರಾಗಬೇಕು. ಇದಕ್ಕಾಗಿ ಬೆಳಗಿನ ಉಪಹಾರಕ್ಕೆ ಬ್ರೆಡ್ ಅನ್ನು ಆಯ್ಕೆ ಮಾಡಿಕೊಳುತ್ತಾರೆ. ಚಹಾದೊಂದಿಗೆ ಡಿಪ್ ಮಾಡಿ ತಿನ್ನಲು, ಅಥವಾ ಸ್ಯಾಂಡ್ ಮಾಡಿಕೊಂಡು ತಿನ್ನಲು ಬ್ರೆಡ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವೊಮ್ಮೆ ಸ್ನಾಕ್ ಟೈಮ್ ನಲ್ಲಿಯೂ ಬ್ರೆಡ್ ಬೋಂಡಾ, ಬ್ರೆಡ್ ರೋಲ್ ಹೀಗೆ ಬ್ರೆಡ್ ಅನ್ನು ಬಳಸುತ್ತಾರೆ.   ಆದರೆ ಬ್ರೆಡ್ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎನ್ನುವುದು ತಿಳಿದಿದೆಯೇ? ಇದರ ಸೇವನೆಯಿಂದ ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳು ವಕ್ಕರಿಸಿಕೊಳ್ಳುತ್ತವೆ. 


COMMERCIAL BREAK
SCROLL TO CONTINUE READING

ಬ್ರೆಡ್ ಸೇವನೆಯ ಅನಾನುಕೂಲಗಳು :  
ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುತ್ತದೆ :  
ನೀವು ಪ್ರತಿದಿನ ಬ್ರೆಡ್ ಸೇವಿಸುತ್ತಿದ್ದರೆ ಮಧುಮೇಹ ಬರುವ ಅಪಾಯವು ಬಹಳಷ್ಟು ಹೆಚ್ಚಾಗಿರುತ್ತದೆ. ಮಾತ್ರವಲ್ಲದೆ ಮಧುಮೇಹವು ಇನ್ನೂ ಅನೇಕ ರೋಗಗಳಿಗೆ ಕಾರಣವಾಗುತ್ತದೆ.  ಮತ್ತೊಂದೆಡೆ, ನೀವು ಮೊದಲೇ ಮಧುಮೇಹ ರೋಗಿಯಾಗಿದ್ದಾರೆ ಬ್ರೆಡ್ ಸೇವಿಸಲೇಬಾರದು. 


ಇದನ್ನೂ ಓದಿ : ಮಧುಮೇಹಿಗಳು ನಿರಾತಂಕವಾಗಿ ಮಾವಿನಹಣ್ಣು ತಿನ್ನಬಹುದು! ಆದರೆ ಅದಕ್ಕೊಂದು ಸಮಯವಿದೆ !


ಕಫದ ಸಮಸ್ಯೆ : 
ದಿನನಿತ್ಯ ಬ್ರೆಡ್ ತಿನ್ನುವವರ ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗಿರುತ್ತದೆ. ಅಷ್ಟೇ ಅಲ್ಲ, ಇದರಿಂದ ದೇಹವೂ ದುರ್ಬಲವಾಗುತ್ತದೆ. ಅದಕ್ಕಾಗಿಯೇ ಬ್ರೆಡ್ ಸೇವನೆಯನ್ನು ತಪ್ಪಿಸಬೇಕು.


ಹೊಟ್ಟೆ ತುಂಬುತ್ತದೆ ಆದರೆ ಪೋಷಣೆ ಸಿಗುವುದಿಲ್ಲ :
ಹಲವು ಬಾರಿ ಹಸಿಯುವ ವೇಳೆ ಕೈಗೆ ಸುಲಭವಾಗಿ ಸಿಗುತ್ತದೆ ಎನ್ನುವ ಕಾರಣಕ್ಕೆ ಬ್ರೆಡ್ ತಿನ್ನುತ್ತೀರಿ. ಆದರೆ ಹೀಗೆ ಮಾಡುವುದರಿಂದ ಹೊಟ್ಟೆ ಏನೋ ತುಂಬುತ್ತದೆ. ಆದರೆ ದೇಹಕ್ಕೆ ಅಗತ್ಯವಿರುವ ಪೋಷಕ ತತ್ವಗಳು ಮಾತ್ರ ಸಿಗುವುದಿಲ್ಲ. ಅದಕ್ಕಾಗಿಯೇ ನೀವು ಹಸಿದಿರುವಾಗ ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಅದರ ಬದಲು ಬ್ರೆಡ್ ಸೇವಿಸಿದರೆ, ಅಪೌಷ್ಟಿಕತೆಗೆ ಬಲಿಯಾಗಬೇಕಾಗಬಹುದು.


ಇದನ್ನೂ ಓದಿ : Diabetes Diet: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ತುಂಬಾ ಸಹಕಾರಿ ಈ ಆಯುರ್ವೇದ ಮೂಲಿಕೆ


ತೂಕ ಹೆಚ್ಚುತ್ತದೆ : 
ಬ್ರೆಡ್ ಸೇವನೆಯಿಂದ ತೂಕ ಹೆಚ್ಚುತ್ತದೆ. ಅದಕ್ಕಾಗಿಯೇ ನೀವು ಹೆಚ್ಚು ಬ್ರೆಡ್ ಸೇವಿಸಬಾರದು.  ಬ್ರೆಡ್ ಸುಲಭವಾಗಿ ಜೀರ್ಣವಾಗುವುದಿಲ್ಲ, ಹಾಗಾಗಿ ನಿಮ್ಮ ಜೀರ್ಣಕ್ರಿಯೆಗೂ ತೊಂದರೆ ಮಾಡುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗದೆ ಓದಾಗ ದೇಹ ತೂಕ ಹೆಚ್ಚಾಗುತ್ತದೆ. 


ಇದೊಂದು ಚಟವಾಗಿ ಮುಂದುವರೆಯುತ್ತದೆ : 
ಕೆಟ್ಟ ವಿಷಯಗಳು ಯಾವಾಗಲೂ ವ್ಯಸನವಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.  ಹೀಗೆ ಪ್ರತಿ ಬಾರಿ ಬ್ರೆಡ್ ತಿನ್ನುತ್ತಾ ಇದ್ದರೆ ಇದೊಂದು ಚಟವಾಗಿ ಬಿಡುತ್ತದೆ.  ಈ ಚಟ ನಿಮ್ಮ ಆರೋಗ್ಯಕ್ಕೆಖಂಡಿತಾ ಹಾನಿಕಾರಕ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.