ನವದೆಹಲಿ : Avoid Curd In Monsoon: ಮೊಸರು ಸೇವನೆ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ (Benefits of curd). ಮೊಸರಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳು ಕಂಡುಬರುತ್ತವೆ. ಜೀರ್ಣಕ್ರಿಯೆಗೆ ಇದು ಸಹಕಾರಿಯಾಗಿದೆ.  ಇದರೊಂದಿಗೆ ಮೊಸರಿನಲ್ಲಿ ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಇದರಿಂದಾಗಿ ಮೂಳೆಗಳು ಬಲಗೊಳ್ಳುತ್ತವೆ. ಆದರೆ, ಮೊಸರು ತಿನ್ನುವುದು ಕೆಲವೊಮ್ಮೆ ಹಾನಿಕಾರಕವಾಗಿ ಪರಿಣಮಿಸಬಹುದು.. ಮಳೆಗಾಲದಲ್ಲಿ ಮೊಸರು ತಿನ್ನುವುದು ನಿಮ್ಮ ಆರೋಗ್ಯಕ್ಕೆ (Side effects of curd in mansoon) ತುಂಬಾ ಹಾನಿಕಾರಕವಾಗಬಹುದು. 


COMMERCIAL BREAK
SCROLL TO CONTINUE READING

ಆಯುರ್ವೇದದಲ್ಲೂ (Ayurveda) ಇದನ್ನು ಉಲ್ಲೇಖಿಸಲಾಗಿದೆ. ಆಯುರ್ವೇದದ ಪ್ರಕಾರ, ಮಳೆಗಾಲದಲ್ಲಿ ಮೊಸರು ತಿನ್ನುವುದು ಅಪಾಯಕಾರಿಯಾಗಿರುತ್ತದೆ.  ಮಳೆಗಾಲದಲ್ಲಿ ದೇಹದಲ್ಲಿನ ರೋಮ ರಂಧ್ರಗಳು ಮುಚ್ಚಲ್ಪಟ್ಟಿರುತ್ತವೆ. ಮೊಸರು ಸೇವಿಸಿದರೆ ಅದು ಆರೋಗ್ಯದ ಮೇಲೆ ನೇರ ಪರಿಣಾಮ (Benefits of curd) ಬೀರುತ್ತದೆ. 


ಇದನ್ನೂ ಓದಿ : Rice Water And Aloevera: ಅಲೋವೆರಾ, ಅಕ್ಕಿ ನೀರನ್ನು ಈ ರೀತಿ ಬಳಸಿ ಸುಂದರ ತ್ವಚೆ ನಿಮ್ಮದಾಗಿಸಿ


ಮಳೆಗಾಲದಲ್ಲಿ ಮೊಸರು (Curd in Mansoon) ತಿಂದ ನಂತರ ಗಂಟಲು ನೋವು ಅಥವಾ ಗಂಟಲಿನಲ್ಲಿ ಕಿರಿ ಕಿರಿ ಉಂಟಾದ ಅನುಭವವಾದರೆ ಈ ಋತುವಿನಲ್ಲಿ ಮೊಸರು (Curd) ನಿಮ್ಮ ದೇಹಕ್ಕೆ ಒಗ್ಗುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಮಳೆಗಾಲದಲ್ಲಿ ಮೊಸರು ಸೇವಿಸಿದಾಗ ಬಹಳ ಮಂದಿಗೆ ಗಂಟಲಿನಲ್ಲಿ ಕಫ ಸಿಕ್ಕಿ ಹಾಕಿಕೊಂಡಂತೆ ಅನುಭವವಾಗುತ್ತಿರುತ್ತದೆ. ಹೀಗಾದಾಗ ಮೊಸರು ತಿನ್ನುವುದನ್ನು ತಕ್ಷಣ ನಿಲ್ಲಿಸಿಬಿಡಿ. ದೇಹ ನೀಡುವ ಈ ಸಂಕೇತವನ್ನು ನಿರ್ಲಕ್ಷಿಸಿ, ನೀವು ಮೊಸರು ಸೇವಿಸುವುದನ್ನು ಮುಂದುವರಿಸಿದರೆ, ನಂತರ ನೀವು ದೇಹದಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳಬಹುದು. , ಜೀರ್ಣಕ್ರಿಯೆಯಲ್ಲಿ (Digestion) ತೊಂದರೆ ಅಥವಾ ಜ್ವರ ಮುಂತಾದ ಸಮಸ್ಯೆಯನ್ನು ಎದುರಿಸಬೇಕಾಗಬಹುದು. 


ಮಳೆಗಾಲದಲ್ಲಿ ಮೊಸರು ತಿನ್ನುವುದರಿಂದಾಗುವ ಅನಾನುಕೂಲಗಳು :
-ಕೀಲು ನೋವು ಸಮಸ್ಯೆ
-ನೋಯುತ್ತಿರುವ ಗಂಟಲು ಸಮಸ್ಯೆ
-ಜೀರ್ಣಕಾರಿ ತೊಂದರೆಗಳು
-ಗಂಟಲಿನಲ್ಲಿ ಕಫ
-ದೀರ್ಘಕಾಲದ ಕೀಲು ನೋವು


ಇದನ್ನೂ ಓದಿ : Hair Care Tips: ಅಕಾಲಿಕ ಬಿಳಿ ಕೂದಲಿನ ಸಮಸ್ಯೆ ನಿವಾರಣೆಗೆ ಈ ಟಿಪ್ಸ್ ಅನುಸರಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.