ನವದೆಹಲಿ : benefits of banana curd: ಕೆಲವೊಂದು ಆಹಾರ ವಸ್ತುಗಳನ್ನು ಒಟ್ಟಿಗೆ ಸೇವಿಸುವುದರಿಂದ ದೇಹಕ್ಕೆ ವಿಶೇಷ ಪ್ರಯೋಜನಗಳು ಸಿಗುತ್ತವೆ. ಅಂಥದ್ದೇ ಫುಡ್ ಕಾಂಬಿನೇಶನ್ (food combination) ಬಗ್ಗೆ ಇಂದು ನಾವು ಹೇಳಲಿದ್ದೇವೆ. ಅದೆಂದರೆ ಬಾಳೆಹಣ್ಣು ಮತ್ತು ಮೊಸರು . ಇವೆರಡನ್ನೂ ಜೊತೆಯಾಗಿ ತಿನ್ನುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಾಗುತ್ತವೆ.
ಬಾಳೆಹಣ್ಣು ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ಪೂರೈಸುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಮೊಸರು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ (Benefits of curd). ಇದರಲ್ಲಿರುವ ಉತ್ತಮ ಬ್ಯಾಕ್ಟೀರಿಯಾವು ಜೀರ್ಣಾಂಗ ವ್ಯವಸ್ಥೆಯನ್ನು (Digestion) ಉತ್ತಮಗೊಳಿಸುತ್ತದೆ. ಮತ್ತು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.
ಇದನ್ನೂ ಓದಿ : Face Scrub: ರಾತ್ರಿ ಉಳಿದ ಚಪಾತಿಯನ್ನು ಫೇಸ್ ಸ್ಕ್ರಬ್ ಆಗಿ ಬಳಸಿ
ಈ ಹೊತ್ತಲ್ಲಿ ತಿನ್ನಬೇಕು ಮೊಸರು-ಬಾಳೆಹಣ್ಣು :
ಆಹಾರ ತಜ್ಞರ ಪ್ರಕಾರ ಬಾಳೆಹಣ್ಣು (banana) ಮತ್ತು ಮೊಸರನ್ನು ಒಟ್ಟಿಗೆ ಸೇವಿಸುವುದರಿಂದ ದೇಹವನ್ನು ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಬಹುದು. ಉತ್ತಮ ಬ್ಯಾಕ್ಟೀರಿಯಾ, ಕ್ಯಾಲ್ಸಿಯಂ, ವಿಟಮಿನ್ ಮತ್ತು ಖನಿಜಗಳು ಮೊಸರಿನಲ್ಲಿ ಹೇರಳವಾಗಿ ಕಂಡುಬರುತ್ತವೆ. ಜೀವಸತ್ವಗಳು, ಕಬ್ಬಿಣಡ ಅಂಶ ಮತ್ತು ಫೈಬರ್ ಬಾಳೆಹಣ್ಣಿನಲ್ಲಿ ಕಂಡುಬರುತ್ತವೆ. ಇವು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ನಿಮ್ಮ ಉಪಾಹಾರದಲ್ಲಿ ಬಾಳೆಹಣ್ಣು ಮತ್ತು ಮೊಸರನ್ನು ಸೇರಿಸಿದರೆ ಇಡೀ ದಿನ ಎನರ್ಜಿಯಿಂದ ಕೂಡಿರುತ್ತದೆ.
ಮೊಸರು ಮತ್ತು ಬಾಳೆಹಣ್ಣನ್ನು ಒಟ್ಟಿಗೆ ತಿನ್ನುವುದರಿಂದ ಏನು ಪ್ರಯೋಜನ?
ಎನರ್ಜಿ :
ಕೆಲಸ ಮಾಡುವಾಗ ಬೇಗನೆ ದಣಿದಿದ್ದರೆ, ಬಾಳೆಹಣ್ಣು ಮೊಸರು ಸೇವಿಸಿದರೆ ಬಹಳಷ್ಟು ಪ್ರಯೋಜನಕಾರಿಯಾಗಿರಲಿದೆ. ಬೆಳಗಿನ ಉಪಾಹಾರದಲ್ಲಿ ಬಾಳೆಹಣ್ಣು ಮತ್ತು ಮೊಸರನ್ನು ತಿನ್ನುವುದರಿಂದ, ದಿನವಿಡೀ ಶಕ್ತಿಯು ದೇಹದಲ್ಲಿ (energy) ಉಳಿಯುತ್ತದೆ. ಆಯಾಸವಾಗುವುದಿಲ್ಲ. ದೌರ್ಬಲ್ಯದಿಂದ ಬಳಲುತ್ತಿರುವವರು ಅದನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
ಮಲಬದ್ಧತೆಯಿಂದ ಪರಿಹಾರ :
ಮಲಬದ್ಧತೆಯ (Constipation) ಸಮಸ್ಯೆಯಿಂದ ಬಳಲುತ್ತಿದ್ದರೆ, ಉಪಾಹಾರದಲ್ಲಿ ಬಾಳೆಹಣ್ಣು ಮತ್ತು ಮೊಸರನ್ನು ತಿನ್ನಬಹುದು. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮಲಬದ್ಧತೆಯ ಸಮಸ್ಯೆಯನ್ನು ತೆಗೆದುಹಾಕಲು ಬಾಳೆಹಣ್ಣು ಮತ್ತು ಒಣದ್ರಾಕ್ಷಿಗಳನ್ನು ಮೊಸರಿಗೆ ಸೇರಿಸಬಹುದು.
ಇದನ್ನೂ ಓದಿ : Eye Exercises: ಕಣ್ಣಿನ ದೃಷ್ಟಿ ಹೆಚ್ಚಿಸಲು ನಿತ್ಯ ಈ ವ್ಯಾಯಾಮ ಮಾಡಿ, ಕನ್ನಡಕದಿಂದ ಪರಿಹಾರ ಪಡೆಯಿರಿ
ತೂಕ ನಿಯಂತ್ರಣದಲ್ಲಿರುತ್ತದೆ :
ಬಾಳೆಹಣ್ಣನ್ನು ಮೊಸರಿನ ಜೊತೆ ತಿನ್ನುವುದರಿಂದ ದೇಹದ ಕೊಬ್ಬು ವೇಗವಾಗಿ ಕರಗುತ್ತದೆ. ಏಕೆಂದರೆ ಮೊಸರು ಮತ್ತು ಬಾಳೆಹಣ್ಣು ಎರಡರಲ್ಲೂ ನಾರಿನ ಪ್ರಮಾಣ ತುಂಬಾ ಹೆಚ್ಚಾಗಿದೆ. ಬೆಳಗಿನ ಉಪಾಹಾರದಲ್ಲಿ ಮೊಸರು ಮತ್ತು ಬಾಳೆಹಣ್ಣನ್ನು ತಿನ್ನುವುದರಿಂದ, ಬೇಗನೆ ಹಸಿವಾಗುವುದಿಲ್ಲ. ಇದು ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ ಮತ್ತು ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಮೂಳೆಗಳು ಸದೃಢವಾಗಿರುತ್ತದೆ :
ಬಾಳೆಹಣ್ಣಿನಲ್ಲಿರುವ ಫೈಬರ್ ಮೊಸರಿನ ಉತ್ತಮ ಬ್ಯಾಕ್ಟೀರಿಯಾವನ್ನು ಬೆಂಬಲಿಸುತ್ತದೆ. ಇದು ಆಹಾರದಲ್ಲಿರುವ ಕ್ಯಾಲ್ಸಿಯಂ ಅನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಬೆಳಗಿನ ಉಪಾಹಾರದಲ್ಲಿ ಮೊಸರು ಮತ್ತು ಬಾಳೆಹಣ್ಣನ್ನು ಸೇವಿಸುವುದರಿಂದ ಮೂಳೆಗಳನ್ನು ಬಲಪಡಿಸಬಹುದು.
ಇದನ್ನೂ ಓದಿ : ಅತಿಯಾದ ಮಾವು ಸೇವನೆ ಈ ಸಮಸ್ಯೆಗಳಿಗೆ ಕಾರಣವಾಗಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.