ನವದೆಹಲಿ : Amla Benefits For Diabetes : ನೆಲ್ಲಿಕಾಯಿ ವಿಟಮಿನ್ ಸಿಯ ಅತ್ಯುತ್ತಮ ಮೂಲವಾಗಿದೆ. ಇದನ್ನು   ಆಯುರ್ವೇದದಲ್ಲಿ (Ayurveda) ಔಷಧಿಯಾಗಿ ಬಳಸಲಾಗುತ್ತದೆ. ನೆಲ್ಲಿಕಾಯಿ ಸೇವನೆ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ (Benefits of gooseberry). ಇದರಲ್ಲಿರುವ ಗುಣಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಎ, ಬಿ ಕಾಂಪ್ಲೆಕ್ಸ್, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ಕಾರ್ಬೋಹೈಡ್ರೇಟ್ ಮತ್ತು ನಾರಿನ ಗುಣಗಳು ಹೇರಳವಾಗಿರುತ್ತವೆ. ಇದು ಚರ್ಮ, ಕಣ್ಣುಗಳ ಆರೋಗ್ಯಕ್ಕೂ  ಅತ್ಯಂತ ಸಹಕಾರಿ ಎನ್ನಲಾಗಿದೆ. ಇನ್ನು ಆಮ್ಲಾವನ್ನು ಐರನ್ ನ ಉತ್ತಮ ಮೂಲ ಎನ್ನಲಾಗಿದೆ. ಆದ್ದರಿಂದ ರಕ್ತಹೀನತೆಯಿಂದ ಬಳಲುತ್ತಿರುವ ಜನರು ಇದನ್ನು ಪ್ರತಿದಿನ ಸೇವಿಸಬೇಕು. 
   
ಆಮ್ಲಾ ತಿನ್ನುವುದರಿಂದಾಗುವ ಲಾಭಗಳು: 
1. ಮಧುಮೇಹ : ನೆಲ್ಲಿಕಾಯಿಯ ಸೇವನೆಯು ಮಧುಮೇಹಿಗಳಿಗೆ (Gooseberry for diabetes) ಭಾರೀ ಪ್ರಯೋಜನವನ್ನು ನೀಡುತ್ತದೆ. ನೆಲ್ಲಿಕಾಯಿಯಲ್ಲಿ ಕ್ರೋಮಿಯಂ ಅಂಶಗಳು ಕಂಡುಬರುತ್ತವೆ. ಇದು ಇನ್ಸುಲಿನ್ ಹಾರ್ಮೋನುಗಳನ್ನು ಬಲಪಡಿಸುತ್ತದೆ. ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Sugar level)ನಿಯಂತ್ರಿಸುತ್ತದೆ. ಜೇನುತುಪ್ಪದೊಂದಿಗೆ ಆಮ್ಲಾ ಸೇವಿಸುವುದರಿಂದ ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Food To Increase Blood: ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು ತಪ್ಪದೇ ಸೇವಿಸಿ ಈ ವಸ್ತುಗಳನ್ನು


2. ಜೀರ್ಣಕ್ರಿಯೆ : ಜೀರ್ಣಕ್ರಿಯೆ, ಗ್ಯಾಸ್ ಮತ್ತು ಮಲಬದ್ಧತೆ (Constipation) ಸಮಸ್ಯೆಗಳಿಗೆ ನೆಲ್ಲಿಕಾಯಿ ಪ್ರಯೋಜನಕಾರಿಯಾಗಿದೆ.  ಚಟ್ನಿ,  ಉಪ್ಪಿನಕಾಯಿ, ಜ್ಯೂಸ್ ಅಥವಾ ರೂಪದಲ್ಲಿ ಆಮ್ಲಾವನ್ನು ಬಳಸಲಾಗುತ್ತದೆ. ಇದು ಜೀರ್ಣಕ್ರಿಯೆಯ ಸಮಸ್ಯೆಯನ್ನು ಹೋಗಲಾಡಿಸಲು ನೆರವಾಗುತ್ತದೆ.  


3. ಹೃದಯ : ಆಮ್ಲಾವನ್ನು ಹೃದಯದ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಆಮ್ಲಾದಲ್ಲಿ ಇರುವ ಕ್ರೋಮಿಯಂ ಬೀಟಾ ಬ್ಲಾಕರ್ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮ ಹೃದಯವನ್ನು ಸದೃಢವಾಗಿಸುತ್ತದೆ.   ಮಾತ್ರವಲ್ಲ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಉತ್ತಮ ಕೊಲೆಸ್ಟ್ರಾಲ್ ಬಿಡುಗಡೆಯಾಗಲು ಸಹಾಯ ಮಾಡುತ್ತದೆ. 


4. ರೋಗನಿರೋಧಕ ಶಕ್ತಿ: ನೆಲ್ಲಿಕಾಯಿ ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಮ್ಲಾ ಜ್ಯೂಸ್ (Amla juice), ಉಪ್ಪಿನಕಾಯಿ ಮತ್ತು ಚಟ್ನಿ ರೂಪದಲ್ಲಿ ಬಳಸಬಹುದು.


ಇದನ್ನೂ ಓದಿ : Health Tips: ಮೊಸರಿನಲ್ಲಿ ಒಣದ್ರಾಕ್ಷಿ ಬೆರೆಸಿ ತಿನ್ನುವುದರಿಂದ ಸಿಗುತ್ತೆ ಈ ಎಲ್ಲಾ ಪ್ರಯೋಜನ


5. ಮೂಳೆಗಳ ಆರೋಗ್ಯಕ್ಕೆ : ನೆಲ್ಲಿಕಾಯಿ ಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತವೆ. ಏಕೆಂದರೆ ನೆಲ್ಲಿಕಾಯಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿರುತ್ತದೆ. ಮತ್ತು ಇದನ್ನು ಸೇವಿಸುವುದರಿಂದ ಆಸ್ಟಿಯೊಪೊರೋಸಿಸ್, ಸಂಧಿವಾತ ಮತ್ತು ಕೀಲು ನೋವಿನಿಂದಲೂ ಪರಿಹಾರವನ್ನು ಪಡೆಯಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.