Food To Increase Blood: ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು ತಪ್ಪದೇ ಸೇವಿಸಿ ಈ ವಸ್ತುಗಳನ್ನು

ನಮ್ಮ ದೇಹದಲ್ಲಿ ರಕ್ತದ ಕೊರತೆಯಿದ್ದಾಗ, ತಲೆ ಸುತ್ತುವುದು, ಸುಸ್ತು, ಸರಿಯಾಗಿ ನಿದ್ದೆ ಬಾರದಿರುವುದು ಇತ್ಯಾದಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೇ  ಸೂಕ್ತವಾದ ಆಹಾರವನ್ನು ಸೇವಿಸಿದರೆ, ಕಬ್ಬಿಣದ ಕೊರತೆಯನ್ನು ನೀಗಿಸಬಹುದು. 

Written by - Ranjitha R K | Last Updated : Sep 6, 2021, 08:58 PM IST
  • ದೇಹವನ್ನು ಆರೋಗ್ಯವಾಗಿಡಲು ಸಾಕಷ್ಟು ಪೋಷಣೆಯ ಅಗತ್ಯವಿದೆ.
  • ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ ಐರನ್ ಕೊರತೆ ಉಂಟಾಗುತ್ತದೆ.
  • ಐರನ್ ಕೊರತೆ ನೀಗಿಸಲು ನೆರವಾಗುವ ಆಹಾರಗಳು
Food To Increase Blood: ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು ತಪ್ಪದೇ ಸೇವಿಸಿ ಈ ವಸ್ತುಗಳನ್ನು   title=
ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ ಐರನ್ ಕೊರತೆ ಉಂಟಾಗುತ್ತದೆ. (file photo)

ನವದೆಹಲಿ : Food To Increase Blood : ದೇಹವನ್ನು ಆರೋಗ್ಯವಾಗಿಡಲು ಸಾಕಷ್ಟು ಪೋಷಣೆಯ ಅಗತ್ಯವಿದೆ. ನಮ್ಮಲ್ಲಿ ಹೆಚ್ಚಿನವರು ಸಮಯದ ಕೊರತೆಯಿಂದಾಗಿ ಇನ್ಸ್ಟಂಟ್ ಆಹಾರವನ್ನು (Instant food) ತಿನ್ನಲು ಇಷ್ಟಪಡುತ್ತಾರೆ. ಆದರೆ ಸಮಯವನ್ನು ಉಳಿಸುವ ಮತ್ತು ಹೊಟ್ಟೆ ತುಂಬಿಸುವ ಭರದಲ್ಲಿ ಏನು ತಿನ್ನಬೇಕು ಏನು ತಿನ್ನಬಾರದು ಎನ್ನುವುದು ಕೂಡಾ ತಿಳಿದಿರಬೇಕು. ಸಮಯ ಉಳಿಸುವ ಭರದಲ್ಲಿ ಸಿಕ್ಕಿದ್ದನ್ನು ತಿಂದರೆ ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ ಐರನ್ ಕೊರತೆ (Iron deficiency) ಉಂಟಾಗುತ್ತದೆ. ಈ ಕಾರಣದಿಂದಾಗಿ ದೇಹವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಮ್ಮ ದೇಹದಲ್ಲಿ ರಕ್ತದ ಕೊರತೆಯಿದ್ದಾಗ, ತಲೆ ಸುತ್ತುವುದು, ಸುಸ್ತು, ಸರಿಯಾಗಿ ನಿದ್ದೆ ಬಾರದಿರುವುದು ಇತ್ಯಾದಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೇ  ಸೂಕ್ತವಾದ ಆಹಾರವನ್ನು ಸೇವಿಸಿದರೆ, ಕಬ್ಬಿಣದ ಕೊರತೆಯನ್ನು ನೀಗಿಸಬಹುದು. 

ಐರನ್ ಕೊರತೆ ನೀಗಿಸಲು ನೆರವಾಗುವ ಆಹಾರಗಳು : 
1. ಪಾಲಕ್ : ಪಾಲಕ್ (Palak) ಹಸಿರು ಎಲೆಗಳ ತರಕಾರಿ. ಇದರಲ್ಲಿ ಹಿಮೋಗ್ಲೋಬಿನ್ (himoglobin) ಸಮೃದ್ಧವಾಗಿರುತ್ತದೆ. ಮಾತ್ರವಲ್ಲ, ವಿಟಮಿನ್ ಬಿ 6, ಎ, ಸಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಫೈಬರ್ ಇತ್ಯಾದಿಗಳು ಸಹ ಇದರಲ್ಲಿ ಕಂಡುಬರುತ್ತವೆ. ಐರನ್ ಕೊರತೆಯನ್ನು ನೀಗಿಸಲು, ನೀವು ಪಾಲಕ್ ಅನ್ನು ಸಲಾಡ್, ಸೂಪ್, ಜ್ಯೂಸ್ ಅಥವಾ ಪಲ್ಯ, ಸಾಂಬಾರ್ ರೂಪದಲ್ಲಿ ನಿಮ್ಮ ಆಹಾರದಲ್ಲಿ ಬಳಸಬಹುದು. 

ಇದನ್ನೂ ಓದಿ : Health Tips: ಮೊಸರಿನಲ್ಲಿ ಒಣದ್ರಾಕ್ಷಿ ಬೆರೆಸಿ ತಿನ್ನುವುದರಿಂದ ಸಿಗುತ್ತೆ ಈ ಎಲ್ಲಾ ಪ್ರಯೋಜನ

2. ಬೀಟ್ರೂಟ್ : ಬೀಟ್ರೂಟ್ (Beetroot) ಅನ್ನು ಕಬ್ಬಿಣದ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ.  ಐರನ್ ಕೊರತೆಯನ್ನು ನೀಗಿಸಲು, ಬೀಟ್ ರೂಟ್ ಅನ್ನು ಸೂಪ್, ಸಲಾಡ್ (Salad) ಮತ್ತು ತರಕಾರಿ ರೂಪದಲ್ಲಿ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಬೀಟ್ರೂಟ್  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೂಡಾ ಸಹಕಾರಿಯಾಗಿದೆ. ಮಾತ್ರವಲ್ಲ, ಇದರ ಸೇವನೆ ಜೀರ್ಣಕ್ರಿಯೆ ಉತ್ತಮವಾಗಿಸುತ್ತದೆ. 

3. ನೆಲ್ಲಿಕಾಯಿ : ನೆಲ್ಲಿಕಾಯಿಯನ್ನು (Amla) ವಿಟಮಿನ್ ಸಿ ಯ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದರಲ್ಲಿ ಕಬ್ಬಿಣದ ಅಂಶ  ಸಮೃದ್ಧವಾಗಿರುತ್ತದೆ. ನೆಲ್ಲಿಕಾಯಿಯನ್ನು ಜ್ಯೂಸ್ (Gooseberry juice) , ಸಲಾಡ್, ಉಪ್ಪಿನಕಾಯಿ, ಚಟ್ನಿ ಮತ್ತು ಹಸಿಯಾಗಿಯೇ ತಿನ್ನಬಹುದು. ಆಮ್ಲಾ ಸೇವನೆಯಿಂದ ರೋಗನಿರೋಧಕ ಶಕ್ತಿಯನ್ನು (Immunity) ಬಲಪಡಿಸಬಹುದು. 

ಇದನ್ನೂ ಓದಿ : ಆಗಾಗ ಕಾಣಿಸಿಕೊಳ್ಳುವ ಹೊಟ್ಟೆಯ ಸಮಸ್ಯೆಗೆ ಈ ಮನೆ ಮದ್ದುಗಳನ್ನು ಬಳಸಿ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News