ನವದೆಹಲಿ : ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣಗಳು ಮತ್ತು ಒಮಿಕ್ರಾನ್ ಬಿಕ್ಕಟ್ಟಿನ ಮಧ್ಯೆ, ಕೇಂದ್ರ ಆರೋಗ್ಯ ಸಚಿವಾಲಯವು ಒಂದು ಔಷಧ ಮತ್ತು ಎರಡು ಹೊಸ ಕರೋನಾ ಲಸಿಕೆಗಳನ್ನು ಅನುಮೋದಿಸಿದೆ. CORBEVAX ಮತ್ತು COVOVAX ಲಸಿಕೆಗಳನ್ನು ಭಾರತದಲ್ಲಿ ಅನುಮೋದಿಸಲಾಗಿದೆ. ಇದಲ್ಲದೆ, ಕೇಂದ್ರ ಆರೋಗ್ಯ ಸಚಿವಾಲಯವು ಕರೋನಾ ಔಷಧಿ Molnupiravir ಅನ್ನು ಸಹ ಅನುಮೋದಿಸಿದೆ.


COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಟ್ವೀಟ್ ಮಾಡುವ ಮೂಲಕ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. COVID-19 ವಿರುದ್ಧದ ಹೋರಾಟವನ್ನು ಬಲಪಡಿಸುವ ಸಲುವಾಗಿ, CDSCO, ಆರೋಗ್ಯ ಸಚಿವಾಲಯವು CORBEVAX ಲಸಿಕೆ, COVOVAX ಮತ್ತು ಆಂಟಿ-ವೈರಲ್ ಡ್ರಗ್ Molnupiravirಗೆ  ತುರ್ತು ಬಳಕೆಗೆ ಅನುಮೋದನೆ ನೀಡಿದೆ. 


Omicron Variant: ಮಧುಮೇಹ ರೋಗಿಗಳು ಓಮಿಕ್ರಾನ್ ರೂಪಾಂತರದಿಂದ ಪಾರಾಗುವುದು ಹೇಗೆ?


CORBEVAX ಲಸಿಕೆಯು, ಕೋವಿಡ್ -19 ವಿರುದ್ಧ ಭಾರತ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಮೊದಲ RBD ಪ್ರೋಟೀನ್ ಸಬ್ ಯುನಿಟ್  ಲಸಿಕೆಯಾಗಿದೆ ಎಂದು, ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಇದನ್ನು ಹೈದರಾಬಾದ್ ಮೂಲದ  ಜೈವಿಕ-ಇ ಸಂಸ್ಥೆ ತಯಾರಿಸಿದೆ.  ಈಗ ಭಾರತದಲ್ಲಿ ಮೂರನೇ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರೂ ಟ್ವೀಟ್ ಮೂಲಕ ಹೇಳಿದ್ದಾರೆ. ಅಲ್ಲದೆ, ನ್ಯಾನೊಪರ್ಟಿಕಲ್ ಲಸಿಕೆ, COVOVAX ಅನ್ನು ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (Serum institute of india) ತಯಾರಿಸುತ್ತದೆ ಎಂದು ಹೇಳಿದ್ದಾರೆ. 


Narendra Modi) ಅವರೇ ಮುಂದಾಳತ್ವ ವಹಿಸಿದ್ದಾರೆ ಎಂದು ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ. ಈ ಎಲ್ಲಾ ಅನುಮೋದನೆಗಳು ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಜಾಗತಿಕ ಹೋರಾಟವನ್ನು ಬಲಪಡಿಸುತ್ತದೆ. ನಮ್ಮ ಫಾರ್ಮಾ ಉದ್ಯಮಗಳು ಇಡೀ ಪ್ರಪಂಚದ ಆಸ್ತಿಗಳಾಗಿವೆ. ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಃ ಎಂದಿದ್ದಾರೆ. 


Omicron Vs Delta: ಡೆಲ್ಟಾಗಿಂತ ಭಿನ್ನವಾಗಿರುವ ಓಮಿಕ್ರಾನ್‌ನ ನಾಲ್ಕು ಲಕ್ಷಣಗಳು


Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.Twitterನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
https://apple.co/3hEw2hyApple Link - 
https://bit.ly/3hDyh4GAndroid Link - 
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...