Omicron Variant: ಮಧುಮೇಹ ರೋಗಿಗಳು ಓಮಿಕ್ರಾನ್ ರೂಪಾಂತರದಿಂದ ಪಾರಾಗುವುದು ಹೇಗೆ?

Omicron Variant: ಮಧುಮೇಹ ಮತ್ತು ರಕ್ತದೊತ್ತಡ ರೋಗಿಗಳು ಕೋವಿಡ್ -19 ನಿಂದ ತಡೆಗಟ್ಟಲು ಕೆಲವು ಪ್ರಮುಖ ವಿಷಯಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಇದು ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.

Written by - Yashaswini V | Last Updated : Dec 28, 2021, 12:02 PM IST
  • ಮಧುಮೇಹಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ
  • ಸಕ್ಕರೆ ಮಟ್ಟವನ್ನು ಯಾವಾಗಲೂ ನಿಯಂತ್ರಣದಲ್ಲಿಡಿ
  • ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿ
Omicron Variant: ಮಧುಮೇಹ ರೋಗಿಗಳು ಓಮಿಕ್ರಾನ್ ರೂಪಾಂತರದಿಂದ ಪಾರಾಗುವುದು ಹೇಗೆ? title=
How diabetic patients can protect against new corona variant omicron

Omicron Variant: ಕರೋನವೈರಸ್ನ ಓಮಿಕ್ರಾನ್ ರೂಪಾಂತರದ (Omicron Variant) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಮಧುಮೇಹ ರೋಗಿಗಳು ಕೋವಿಡ್ -19 ತಡೆಗಟ್ಟಲು ಕೆಲವು ಪ್ರಮುಖ ವಿಷಯಗಳನ್ನು ಅನುಸರಿಸುವುದು ಮುಖ್ಯವಾಗಿದೆ. ತಜ್ಞರ ಪ್ರಕಾರ, ಮಧುಮೇಹ ರೋಗಿಗಳು ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ತೆಗೆದುಕೊಳ್ಳುವುದರಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು. ಇದು ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.

ಈ ವಸ್ತುಗಳು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ:
ತಜ್ಞರ ಪ್ರಕಾರ, ಕೋವಿಡ್ 19 ಲಸಿಕೆ (Covid-19 Vaccine) ನಿಮ್ಮ ಟಿ-ಸೆಲ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ, ಸಮಯಕ್ಕೆ ಪೌಷ್ಟಿಕಾಂಶಗಳನ್ನು ತಿನ್ನುವುದು ನಿಮ್ಮ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

ಇದನ್ನೂ ಓದಿ- Omicron Vs Delta: ಡೆಲ್ಟಾಗಿಂತ ಭಿನ್ನವಾಗಿರುವ ಓಮಿಕ್ರಾನ್‌ನ ನಾಲ್ಕು ಲಕ್ಷಣಗಳು

ಬೊಜ್ಜು ಸಮಸ್ಯೆಯಾಗಬಹುದು:
ಮಧುಮೇಹಿಗಳಲ್ಲಿ (Diabetic Patients) ಆಗಾಗ್ಗೆ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ, ಆದ್ದರಿಂದ ಅವರು ಆಹಾರ ಮತ್ತು ಜೀವನಶೈಲಿಗೆ ಸಂಬಂಧಿಸಿದ ಅಭ್ಯಾಸಗಳಿಗೆ ಗಮನ ಕೊಡುವುದು ಮತ್ತು ಯಾವಾಗಲೂ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ವೈದ್ಯರ ಸಲಹೆ ಮೇರೆಗೆ ಇನ್ಸುಲಿನ್ ತೆಗೆದುಕೊಂಡು ಲಸಿಕೆ ಹಾಕಿಸಿಕೊಳ್ಳಿ. ಮಧುಮೇಹಿಗಳು ತಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದು ಕೂಡ ಮುಖ್ಯ. 

ನಿಮಗೆ ಸ್ಥೂಲಕಾಯದ ಸಮಸ್ಯೆ ಇದ್ದರೆ, ದುರದೃಷ್ಟವಶಾತ್ ನಿಮಗೆ ಕೋವಿಡ್ ಸೋಂಕು ತಗುಲಿದರೆ ರೋಗವು ಗಂಭೀರ ಸ್ವರೂಪವನ್ನು ಪಡೆಯಬಹುದು. ಅಧಿಕ ತೂಕವು ಕೋವಿಡ್ ಅಪಾಯವನ್ನು ಹೆಚ್ಚಿಸುತ್ತದೆ. ಡಯಾಬಿಟಿಸ್ ಜೊತೆಗೆ ಬೊಜ್ಜಿನ ಸಮಸ್ಯೆ ಹೊಂದಿರುವುದು ನಿಮಗೆ ಅಪಾಯಕಾರಿ ಎಂದು ಸಾಬೀತು ಪಡಿಸಬಹುದು.

ಇದನ್ನೂ ಓದಿ- Omicron Symptoms: ಓಮಿಕ್ರಾನ್‌ನ ಮೊದಲ ರೋಗಲಕ್ಷಣವನ್ನು ಧ್ವನಿ ಮೂಲಕವೂ ಗುರುತಿಸಬಹುದು

ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ:
ಸಮತೋಲಿತ ಆಹಾರವು ಯಾವುದೇ ರೀತಿಯ ಸೋಂಕುಗಳು ಮತ್ತು ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ, ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು. ಆಹಾರದಲ್ಲಿ ನಟ್ಸ್, ಹಣ್ಣುಗಳು ಮತ್ತು ಸಲಾಡ್‌ಗಳನ್ನು ಸೇರಿಸಿ. ಆಂಟಿಆಕ್ಸಿಡೆಂಟ್‌ಗಳು (Antioxidants) ನಿಮ್ಮ ಡಿಎನ್‌ಎಯನ್ನು ಯಾವುದೇ ಹೊಸ ರೀತಿಯ ಹಾನಿಯಿಂದ ರಕ್ಷಿಸುತ್ತದೆ. ಇವುಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲವಾಗಿಡಲು ಸಹಕಾರಿ.

ಪ್ರತಿದಿನ ಒಂದು ಹಿಡಿ ನಟ್ಸ್  ಅಂದರೆ ಸುಮಾರು 30 ಗ್ರಾಂ ನಟ್ಸ್ ಸೇವಿಸುವುದರಿಂದ ಸೋಂಕು ಮತ್ತು ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ನೀವು ಇನ್ಹೇಲರ್, ಇನ್ಸುಲಿನ್ ಪಡೆಯುತ್ತಿದ್ದರೆ, ಸಮಯಕ್ಕೆ ಸರಿಯಾಗಿ ಅದನ್ನು ತೆಗೆದುಕೊಳ್ಳಿ. ನೀವು ಯಾವುದೇ  ರೀತಿಯ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿದ್ದರೆ, ನಿಯಮಿತವಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News