Corona Vaccine: ಗರ್ಭವತಿ ಹಾಗೂ ಹಾಲುಣಿಸುವ ತಾಯಂದಿರರಿಗೆ ಲಸಿಕೆ ಬೇಡ: ಸರ್ಕಾರ
Corona Vaccine:ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 16 ರಂದು ರಾಷ್ಟ್ರವ್ಯಾಪಿ ಕೋವಿಡ್ -19 ಲಸಿಕೆ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ. ಈ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವಾಲಯವು ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಲಸಿಕೆ ಹಾಕದಂತೆ ಸಲಹೆ ನೀಡಿದೆ.
Corona Vaccine - ನವದೆಹಲಿ: ಕೊರೊನಾವೈರಸ್ ವಿರುದ್ಧ ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಅಭಿಯಾನವು ಜನವರಿ 16 ರಿಂದ ಪ್ರಾರಂಭವಾಗಲಿದೆ. ಈ ಹಿನ್ನೆಲೆ ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡುವುದಿಲ್ಲ ಎಂದು ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ. ಇದಲ್ಲದೆ, ಶಿಶುಗಳಿಗೆ ಹಾಲುಣಿಸುವ ಮಹಿಳೆಯರಿಗೂ ಲಸಿಕೆ ಹಾಕದಂತೆ ಸೂಚಿಸಲಾಗಿದೆ.
ಸರ್ಕಾರದ ಈ ನಿರ್ಧಾರಕ್ಕೆ ಕಾರಣವೇನು?
ಇದಕ್ಕೆ ಸಂಬಂಧಪಟ್ಟಂತೆ ಹೇಳಿಕೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, "ಮಕ್ಕಳು, ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಕೊವಿಡ್ -19 ಲಸಿಕೆಗಳನ್ನು ನೀಡಬೇಡಿ, ಏಕೆಂದರೆ ಅವರ ಮೇಲೆ ಕರೋನಾ ಲಸಿಕೆಯ ಯಾವುದೇ ಪ್ರಾಯೋಗಿಕ ಪರೀಕ್ಷೆಗಳು ನಡೆದಿಲ್ಲ" ಎಂದು ಸ್ಪಷ್ಟಪಡಿಸಿದೆ.
ಎಲ್ಲಾ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದ ಸರ್ಕಾರ
ಈ ಕುರಿತು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಪತ್ರ ರವಾನಿಸಿರುವ ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್ ಅಗ್ನಾನಿ "ಮಕ್ಕಳು, ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರ ಮೇಲೆ ಇದುವರೆಗೆ ಯಾವುದೇ ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆಸಲಾಗಿಲ್ಲ" ಎಂದು ಉಲ್ಲೇಖಿಸಿದ್ದಾರೆ. 'ಆದ್ದರಿಂದ ಗರ್ಭಿಣಿಯರು ಅಥವಾ ಗರ್ಭಿಣಿಯಾಗುವ ಬಗ್ಗೆ ಖಚಿತತೆ ಇಲ್ಲದ ಮಹಿಳೆಯರು ಈ ಬಾರಿ ಕೋವಿಡ್ -19 ಲಸಿಕೆ ಪಡೆಯಬಾರದು' ಎಂದು ಅವರು ತಮ್ಮ ಪತ್ರದಲ್ಲಿ ಸೂಚಿಸಿದ್ದಾರೆ.
ಇದನ್ನು ಓದಿ- Corona Vaccine Update: ಈ ರಾಜ್ಯಗಳಲ್ಲಿ ಕೊರೊನಾ ಲಸಿಕೆಯ ಉಚಿತ ವಿತರಣೆ
ಪ್ರಧಾನಿ ಮೋದಿಯಿಂದ ಚಾಲನೆ
ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 16 ರಂದು ರಾಷ್ಟ್ರವ್ಯಾಪಿ ಕೋವಿಡ್ -19 ಲಸಿಕೆ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನಿ ಕಾರ್ಯಾಲಯ, 'ಪಿಎಂ ನರೇಂದ್ರ ಮೋದಿ ಅವರು ಜನವರಿ 16 ರಂದು ಬೆಳಗ್ಗೆ 10.30 ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಷ್ಟ್ರವ್ಯಾಪಿ ಕೋವಿಡ್ -19 ವ್ಯಾಕ್ಸಿನೇಷನ್ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ. ಇದು ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನವಾಗಿರಲಿದೆ ಎಂದು ಕಾರ್ಯಾಲಯ ಹೇಳಿದೆ.
ಇದನ್ನು ಓದಿ- ದೆಹಲಿ ತಲುಪಿದ Covaxin ಮೊದಲ ಬ್ಯಾಚ್, ಲಸಿಕೆ ಹಾಕಿಸಿಕೊಳ್ಳುವಾಗ ಆಯ್ಕೆ ಸಿಗಲಿದೆಯೇ ?
ಈ ಎರಡು ವ್ಯಾಕ್ಸಿನ್ ಗಳ ತುರ್ತು ಬಳಕೆಗೆ ಅನುಮೋದನೆ ದೊರೆತಿದೆ
ಭಾರತೀಯ ಔಷದ ಮಹಾನಿರ್ದೇಶನಾಲಯ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೋವಿಶಿಲ್ದ್ ಹಾಗೂ ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಗಳ (CORONA VACCINE) ತುರ್ತು ಬಳಕೆಗೆ ಅನುಮೋದನೆ ನೀಡಿರುವುದು ಇಲ್ಲಿ ಉಲ್ಲೇಖನೀಯ.
ಇದನ್ನು ಓದಿ-ಇಮ್ಯೂನಿಟಿ ಹೆಚ್ಚಾಗಲು ನೀವೂ Vitamin C ಮಾತ್ರೆ ಸೇವಿಸುತ್ತೀರಾ? ಎಚ್ಚರ...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.