Corona Vaccine Update:ದೇಶದಲ್ಲಿ ಕರೋನಾ ಸೋಂಕಿನ ನಿರ್ವಹಣೆ ಮತ್ತು ನಿಯಂತ್ರಣವನ್ನು ಗಮನದಲ್ಲಿಟ್ಟುಕೊಂಡು ಜನವರಿ 16 ರಿಂದ ವ್ಯಾಕ್ಸಿನೇಷನ್ ಪ್ರಕ್ರಿಯೆ ಪ್ರಾರಂಭವಾಗಲಿದೆ. ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಯ ಡೋಸ್ ಗಳು ದೇಶಾದ್ಯಂತ ತಲುಪಿವೆ. ಏತನ್ಮಧ್ಯೆ, ವಿವಿಧ ರಾಜ್ಯಗಳ ಸರ್ಕಾರಗಳು ಲಸಿಕೆ ಶುಲ್ಕವನ್ನು ನಿರ್ಧರಿಸಿವೆ. ಮುಂಚೂಣಿಯಲ್ಲಿರುವವರಿಗೆ ಮತ್ತು ನಿರ್ಗತಿಕರಿಗೆ ಉಚಿತ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಭಾರತದಲ್ಲಿ ಪ್ರಯೋಗಿಸಿದ ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್‌ನ ಕೋವಿಶೀಲ್ಡ್ ಲಸಿಕೆ ಮತ್ತು ಭಾರತ್ ಬಯೋಟೆಕ್, ಐಸಿಎಂಆರ್ ಮತ್ತು ಎನ್‌ಐವಿ ಪುಣೆ ತಯಾರಿಸಿದ ಕೊವ್ಯಾಕ್ಸಿನ್ ಲಸಿಕೆಗಳನ್ನು ಕೇಂದ್ರ ಸರ್ಕಾರ ಖರೀದಿಸಿದೆ.
ಪಶ್ಚಿಮ ಬಂಗಾಳ - ರಾಜ್ಯದ ಎಲ್ಲ ನಾಗರಿಕರಿಗೆ ಉಚಿತ ಲಸಿಕೆಗಳನ್ನು ನೀಡಲು ಸರ್ಕಾರ ವ್ಯವಸ್ಥೆ ಮಾಡುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತ್ತೀಚೆಗೆ ಘೋಷಿಸಿದ್ದಾರೆ. 'ನಮ್ಮ ಸರ್ಕಾರ ಎಲ್ಲರಿಗೂ ಉಚಿತ ಲಸಿಕೆ ನೀಡಲಿದೆ ಎಂಬುದನ್ನು ಘೋಷಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ' ಎಂದು ಮಮತಾ ಈ ಸಂದರ್ಭದಲ್ಲಿ ಹೇಳಿದ್ದರು.
ಇದನ್ನು ಓದಿ- Covid-19 Vaccination Program: ಲಸಿಕಾಕರಣ ಕಾರ್ಯಕ್ರಮ ಸ್ವಯಂಪ್ರೆರಿತ ಎಂದ ಕೇಂದ್ರ ಆರೋಗ್ಯ ಸಚಿವಾಲಯ
ನವದೆಹಲಿ-ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರ ಕೂಡ ದೆಹಲಿಯಲ್ಲಿ ಲಸಿಕೆಗೆ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಜನವರಿ 16 ರಿಂದ ಪ್ರಾರಂಭವಾಗುವ ಕೋವಿಡ್ -19 ವಿರುದ್ಧ ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಅಭಿಯಾನಕ್ಕೆ (Vaccination) ಮುಂಚಿತವಾಗಿ ಭಾರತ್ ಬಯೋಟೆಕ್ ತಯಾರಿಸಿದ ಕೋವಾಕ್ಸಿನ್ ಲಸಿಕೆಯ 20,000 ಪ್ರಮಾಣವನ್ನು ದೆಹಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಪಂಜಾಬ್ -ಉಚಿತ ಲಸಿಕೆ ನೀಡುವ ಭರವಸೆಯಿಂದ ಕೇಂದ್ರ ಸರ್ಕಾರ ಹಿಂದೆ ಸರಿಯುತ್ತಿದ್ದರೂ ಕೂಡ ರಾಜ್ಯದ ಯಾವುದೇ ನಿರ್ಗತಿಕರಿಂದ ಕರೋನಾ ಲಸಿಕಗೆ ಶುಲ್ಕವನ್ನು ಪಡೆಯಲಾಗುವುದಿಲ್ಲ ಎಂದು ಪಂಜಾಬ್‌ನ ಕಾಂಗ್ರೆಸ್ ಸರ್ಕಾರದ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಸಿಧು ಹೇಳಿದ್ದಾರೆ. ಮೊಹಾಲಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಸಿಧು, ಕೋವಿಡ್ ಲಸಿಕೆಯ 20,450 ಬಾಟಲುಗಳು ರಾಜ್ಯಕ್ಕೆ ಬಂದಿವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ- ದೆಹಲಿ ತಲುಪಿದ Covaxin ಮೊದಲ ಬ್ಯಾಚ್, ಲಸಿಕೆ ಹಾಕಿಸಿಕೊಳ್ಳುವಾಗ ಆಯ್ಕೆ ಸಿಗಲಿದೆಯೇ ?
ಬಿಹಾರ-ಕಳೆದ ವರ್ಷ ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಎಲ್ಲರಿಗೂ ಕೂಡ ಲಸಿಕೆಯನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಬಿಜೆಪಿ ಘೋಷಿಸಿತ್ತು. ಚುನಾವಣೆಯ ಬಳಿಕ ನೂತನವಾಗಿ ಅಸ್ತಿತ್ವಕ್ಕೆ ಬಂದ ಸರ್ಕಾರ ನಡೆಸಿದ ಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಎಲ್ಲರಿಗೂ ಲಸಿಕೆ ಉಚಿತವಾಗಿ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ತಮಿಳುನಾಡು- ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆಯ ಸುಮಾರು 5, 36, 500 ಡೋಸ್ ಗಳು ಮಂಗಳವಾರ ತಮಿಳುನಾಡು ತಲುಪಿವೆ. ಇದಲ್ಲದೆ ಭಾರತ ಬಯೋಟೆಕ್ ನ 20 ಸಾವಿರ ಲಸಿಕೆಯ ಡೋಸ್ ಗಳು ಕೂಡ ತಮಿಳುನಾಡು ಸರ್ಕಾರದ ಬಳಿ ಇವೆ. ರಾಜ್ಯದ ಎಲ್ಲ ನಿರ್ಗತಿಕರಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಪಳನಿ ಸ್ವಾಮಿ ಘೋಷಿಸಿದ್ದಾರೆ.
ಇದನ್ನು ಓದಿ- Coronavaccine ಹಾಕಿಸಿಕೊಂಡ ಬಳಿಕ ಮಹಾಮಾರಿಯ ಅಪಾಯ ತಪ್ಪುತ್ತಾ....? ಉತ್ತರಕ್ಕಾಗಿ ಇಲ್ಲಿಗೆ ಭೇಟಿ ನೀಡಿ
ಮಧ್ಯಪ್ರದೇಶ - ಆರ್ಥಿಕವಾಗಿ ಹಿಂದುಳಿದ ರಾಜ್ಯದ ಎಲ್ಲ ನಾಗರಿಕರ ವ್ಯಾಕ್ಸಿನೆಶನ್ ಉಚಿತವಾಗಿ ನಡೆಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಘೋಷಿಸಿದ್ದಾರೆ.
ಕೇರಳ- ರಾಜ್ಯದಲ್ಲಿ ಎಲ್ಲರಿಗೂ ಕೂಡ ಕೊರೊನಾ ಲಸಿಕೆಯನ್ನು ಉಚಿತವಾಗಿ ವಿತರಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಹೇಳಿದ್ದರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂದರ್ಭಗಳಲ್ಲಿ ಅವರು ಈ ಘೋಷಣೆ ಮಾಡಿದ್ದರು.
ಇದನ್ನು ಓದಿ- Alarming Health Issues: ವರ್ಷ 2021ರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಈ 8 ಅಂಶಗಳ ನಿರ್ಲಕ್ಷ ಬೇಡ - WHO
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.