Corona Vaccine ಬೂಸ್ಟರ್ ಡೋಸ್ ಗೆ ಸಿದ್ಧತೆ, ಈಗಾಗಲೇ 7 ಜನರ ಮೇಲೆ ಟ್ರಯಲ್ ಆರಂಭ
Corona Vaccine - ಕೊರೊನಾ ವೈರಸ್ ಗೆ ಬೂಸ್ಟರ್ ಡೋಸ್ ನೀಡಲು ಟ್ರಯಲ್ ಆರಂಭಗೊಂಡಿದೆ. ಚೆನ್ನೈನಲ್ಲಿ ಆರಂಭಗೊಂಡಿರುವ ಈ ಟ್ರಯಲ್ ನಲ್ಲಿ ಈಗಾಗಲೇ 7 ಜನರಿಗೆ ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಡೋಸ್ ನೀಡಲಾಗಿದೆ.
ನವದೆಹಲಿ: Booster Dose - ದೇಶಾದ್ಯಂತ ವೇಗವಾಗಿ ಬೆಳೆಯುತ್ತಿರುವ ಕೊರೊನಾವೈರಸ್ ಸೋಂಕನ್ನು ನಿವಾರಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ವ್ಯಾಕ್ಸಿನೇಷನ್ ಈ ಪ್ರಯತ್ನಗಳಲ್ಲಿ ಇದುವರೆಗಿನ ದೊಡ್ಡ ಹೆಜ್ಜೆಯಾಗಿದೆ. ವ್ಯಾಕ್ಸಿನೇಷನ್ (Vaccination) ಡ್ರೈವ್ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ವ್ಯಾಕ್ಸಿನೇಷನ್ ಅಭಿಯಾನಕ್ಕೆ ಮೇ 1 ರಿಂದ ಹೆಚ್ಚಿನ ವೇಗ ನೀಡಲಾಗುತ್ತಿದೆ. 18 ವರ್ಷ ವಯಸ್ಸಿನ ಜನರಿಗೆ ಕರೋನಾ ಲಸಿಕೆ ಸಹ ನೀಡಲಾಗುತ್ತಿದೆ. ಆದರೆ ಇದಕ್ಕೂ ಮುನ್ನ, ಒಂದು ಪ್ರಮುಖ ಸಂಶೋಧನೆ ನಡೆಸಲಾಗುತ್ತಿದೆ. ಈ ಸಂಶೋಧನೆಯಡಿಯಲ್ಲಿ, ಕರೋನಾ ವೈರಸ್ ಗೆ ಲಸಿಕೆಯ 'ಬೂಸ್ಟರ್ ಡೋಸ್' ನೀಡುವ ಕುರಿತು ಟ್ರಯಲ್ ನಡೆಯುತ್ತಿದೆ.
ಬೂಸ್ಟರ್ ಡೋಸ್ ನೀಡುವ ಉದ್ದೇಶವೇನು?
ಆಂಗ್ಲ ಮಾಧ್ಯಮದ ವೃತ್ತಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಸೋಮವಾರ 7 ಜನರಿಗೆ ಕೊರೊನಾ ವ್ಯಾಕ್ಸಿನ್ ಆಗಿರುವ ಕೊವ್ಯಾಕ್ಸಿನ್ (Covaxin) ನ ಮೂರನೇ ಪ್ರಮಾಣ ನೀಡಲಾಗಿದೆ. ಇದನ್ನೇ ಬೂಸ್ಟರ್ ಡೋಸ್ ಎಂದು ಕರೆಯಲಾಗುತ್ತಿದೆ. ಈ ಮೂರನೇ ಪ್ರಮಾಣವನ್ನು ನೀಡುವ ಮೂಲಕ ವ್ಯಕ್ತಿಯ ದೇಹದಲ್ಲಿ ದೀರ್ಘ ಕಾಲದವರೆಗೆ ರೋಗ ಪ್ರತಿರೋಧಕ ಅಭಿವೃದ್ಧಿಯಾಗುತ್ತಿದೆಯೋ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ-Corona ವಿರುದ್ಧ ಹೋರಾಟಕ್ಕಿಳಿದ ಭಾರತೀಯ ಸೇನೆ
ಟ್ರಯಲ್ ನಲ್ಲಿ 190 ಜನರು
ಚೆನ್ನೈನ ಎಸ್‌ಆರ್‌ಎಂ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಕೋವಾಕ್ಸಿನ್‌ನ ಮೂರನೇ ಡೋಸ್ ನೀಡಲಾದ 7 ಜನರಿಗೆ 6 ತಿಂಗಳ ಹಿಂದೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಈ ಸಂಶೋಧನೆಯ ಅಡಿ ಒಟ್ಟು 190 ಜನರಿಗೆ ಲಸಿಕೆ ನೀಡಲಾಗುತ್ತಿದೆ. ಈ ಸಂಶೋಧನೆಯ ಮುಖ್ಯ ಸಂಶೋಧಕ ಡಾ.ಸತ್ಯಜಿತ್ ಮೊಹಾಪಾತ್ರ ಹೇಳುವ ಪ್ರಕಾರ, ಮೂರನೇ ಪ್ರಮಾಣವನ್ನು ನೀಡಲಾಗಿರುವವರಲ್ಲಿ 18 ರಿಂದ 55 ವರ್ಷದೊಳಗಿನವರು ಸೇರಿದ್ದಾರೆ. ಮುಂದಿನ 6 ತಿಂಗಳವರೆಗೆ ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇಡಲಾಗುತ್ತಿದೆ. ಪ್ರತಿ ಒಂದು ತಿಂಗಳು, ಮೂರು ತಿಂಗಳು ಮತ್ತು 6 ತಿಂಗಳ ಅಂತರದಲ್ಲಿ ಅವರ ರಕ್ತದ ಪರೀಕ್ಷೆ ಮಾಡಲಾಗುತ್ತದೆ. ಇದರ ನಂತರ, ಅವರಲ್ಲಿ ರೋಗ ನಿರೋಧಕತೆಯನ್ನು ಪರೀಕ್ಷಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ- 'ರಾಷ್ಟ್ರೀಯ ವಿಪತ್ತಿನ ಪರಿಸ್ಥಿತಿಯಲ್ಲಿ ಮೂಕ ಪ್ರೇಕ್ಷಕನಾಗಲು ಸಾಧ್ಯವಿಲ್ಲ
DCGI ಅನುಮತಿ
ಏಪ್ರಿಲ್ 2 ರಂದು, DCGIನ ತಜ್ಞರ ಸಮಿತಿಯು Covid-19 Vaccine ಕ್ಲಿನಿಕಲ್ ಪ್ರಯೋಗದಲ್ಲಿ ಕೆಲವು ಸ್ವಯಂಸೇವಕರಿಗೆ Covaxin ಮೂರನೇ ಡೋಸ್ ನೀಡಲು ಭಾರತ್ ಬಯೋಟೆಕ್ಗೆ ಅನುಮೋದನೆ ನೀಡಿದೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-RBI Alert! ದೇಶಾದ್ಯಂತ ಹಣದುಬ್ಬರ ಹೆಚ್ಚಾಗಲಿದೆ, ಕಾರಣ ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.