Corona ವಿರುದ್ಧ ಹೋರಾಟಕ್ಕಿಳಿದ ಭಾರತೀಯ ಸೇನೆ

Army On Covid Situation - "ಸಮವಸ್ತ್ರದಲ್ಲಿರುವ ನಮ್ಮ ಪುರುಷ ಹಾಗೂ ಮಹಿಳೆಯರು ಅಡೆತಡೆಗಳನ್ನು ತೊಡೆದುಹಾಕುವ ಇಚ್ಚಾಶಕ್ತಿ ಮತ್ತು ಸಮರ್ಪಣೆ ಹೊಂದಿದ್ದಾರೆ. ಸಮಯದ ಜೊತೆಗೆ ಮೈಲುಗಳಷ್ಟು ಸಾಗಬೇಕಿದೆ ಹಾಗೂ ಪ್ರಯಾಣ ಇನ್ನೂ ದೂರವಿದೆ" ಎಂದು CDS ಬಿಪಿನ್ ರಾವತ್ ಹೇಳಿದ್ದಾರೆ.

Written by - Nitin Tabib | Last Updated : Apr 27, 2021, 06:50 PM IST

    ಸಮವಸ್ತ್ರದಲ್ಲಿರುವವರು ಅಡೆತಡೆ ತೊಡೆದು ಹಾಕುವ ಇಚ್ಚಾಶಕ್ತಿ ಹೊಂದಿದ್ದಾರೆ.

    ಇನ್ನೂ ಮೈಲುಗಳಷ್ಟು ಸಾಗಬೇಕಿದೆ.

    ಪ್ರಯಾಣ ತುಂಬಾ ದೂರದ ಪ್ರಯಾಣವಾಗಿದೆ ಎಂದ CDS.

Corona ವಿರುದ್ಧ ಹೋರಾಟಕ್ಕಿಳಿದ ಭಾರತೀಯ ಸೇನೆ title=
Indian Army On Covid Situation (Photo Courtesy: ANi)

ನವದೆಹಲಿ: Army On Covid Situation - ದೇಶದ ಸೈನಿಕರು ಕೊರೊನಾ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ ಎಂದು ದೇಶದ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ದೇಶದ ಸಶಸ್ತ್ರಪಡೆಗಳು ಎದ್ದು ನಿಲ್ಲುವ ಕಾಲ ಬಂದಿದೆ ಎಂದು ಅವರು ಹೇಳಿದ್ದಾರೆ. ಕೊವಿಡ್ ಸಾಂಕ್ರಾಮಿಕದ ಕಾಲದಲ್ಲಿ ನಾಗರಿಕ ಆಡಳಿತ ಮೂಲಕ ಮಾಡಲಾಗುವ ವ್ಯವಸ್ಥೆಯ ದಿಕ್ಕಿನಲ್ಲಿ ಸೇನಾ ಜವಾನರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ರಾವತ್ ಹೇಳಿದ್ದಾರೆ.

ಪ್ರಧಾನಿಗಳಿಂದ ಸಮೀಕ್ಷೆ
ಇದಕ್ಕೂ ಮೊದಲು ಸೋಮವಾರ ಕೊರೊನಾ ಮಹಾಮಾರಿಯ ನಿರ್ವಹಣೆಗೆ ಸಶಸ್ತ್ರ ಪಡೆಗಳಿಂದ ಮಾಡಲಾಗುತ್ತಿರುವ ಕೋವಿಡ-19 ಸಿದ್ಧತೆಗಳು ಹಾಗೂ ಅವುಗಳ ಅನುಷ್ಠಾನದ ಕುರಿತು ಪ್ರಧಾನಿ ನರೇಂದ್ರ ಮೋದಿ ಸಮೀಕ್ಷೆ ನಡೆಸಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದ ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್  (CDS General Bipin Rawat) ಕಳೆದ ಎರಡು ವರ್ಷಗಳಲ್ಲಿ ನಿವೃತ್ತರಾದ ಅಥವಾ ಅಕಾಲಿಕ ನಿವೃತ್ತಿಯನ್ನು ಪಡೆದ ಸಶಸ್ತ್ರ ಪಡೆಗಳ ಎಲ್ಲಾ ವೈದ್ಯಕೀಯ ಸಿಬ್ಬಂದಿಯನ್ನು ಕೋವಿಡ್ ಸೌಲಭ್ಯಗಳಲ್ಲಿ ತಮ್ಮ ಪ್ರಸ್ತುತ ವಾಸಸ್ಥಳದ ಬಳಿ ಕೆಲಸ ಮಾಡಲು ಕರೆಸಿಕೊಳ್ಳಲಾಗುತ್ತಿದೆ. ಈ ಹಿಂದೆ ನಿವೃತ್ತರಾದ ಇತರ ವೈದ್ಯಕೀಯ ಅಧಿಕಾರಿಗಳಿಗೆ ವೈದ್ಯಕೀಯ ತುರ್ತು ಸಹಾಯವಾಣಿ ಮೂಲಕ ತಮ್ಮ ಸೇವೆಗಳನ್ನು ಒದಗಿಸುವಂತೆ ಕೋರಲಾಗಿದೆ ಎಂದು ಹೇಳಿದ್ದರು.

ವೈದ್ಯಕೀಯ ಸಿಲಿಂಡರ್ ಗಳ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ
ಎಲ್ಲಾ ವೈದ್ಯಕೀಯ ಅಧಿಕಾರಿಗಳನ್ನು ಆಸ್ಪತ್ರೆಯಲ್ಲಿ ಸಿಬ್ಬಂದಿ ನೇಮಕಾತಿ, ಕಮಾಂಡ್ ಹೆಡ್ಕ್ವಾರ್ಟರ್ಸ್, ಕಾರ್ಪ್ಸ್ ಹೆಡ್ಕ್ವಾರ್ಟರ್ಸ್, ನೇವಲ್ ಮತ್ತು ಏರ್ ಫೋರ್ಸ್ ಏಕರೂಪದ ಪ್ರಧಾನ ಕಚೇರಿ ಮತ್ತು ವಿಭಾಗೀಯ ನೇಮಕಾತಿಗಳಲ್ಲಿ ನೇಮಕ ಮಾಡಲಾಗುತ್ತದೆ. ಅನೇಕ ಸಂಸ್ಥೆಗಳಲ್ಲಿ ಇರುವ ಆಮ್ಲಜನಕ ಸಿಲಿಂಡರ್‌ಗಳನ್ನು ಆಸ್ಪತ್ರೆಗಳಿಗೆ ನೀಡಲಾಗುವುದು ಎಂದು ಸಿಡಿಎಸ್ ಪ್ರಧಾನಿಗಳಿಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಸಂಖ್ಯೆಯ ವೈದ್ಯಕೀಯ ಸೌಲಭ್ಯಗಳನ್ನು ನಿರ್ಮಿಸಲಾಗುತ್ತಿದೆ ಮತ್ತು  ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ನಾಗರಿಕ ಸೇನೆಯ ವೈದ್ಯಕೀಯ ಮೂಲಸೌಕರ್ಯವನ್ನು ನಾಗರಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಸಿಡಿಎಸ್ ಪ್ರಧಾನಿಗಳಿಗೆ ತಿಳಿಸಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ಆಮ್ಲಜನಕ ಮತ್ತು ಇತರ ಅಗತ್ಯ ವಸ್ತುಗಳ ಸಾಗಣೆಗೆ ಭಾರತೀಯ ವಾಯುಪಡೆಯು ನಡೆಸುತ್ತಿರುವ ಕಾರ್ಯಾಚರಣೆಗಳನ್ನೂ  ಕೂಡ ಪ್ರಧಾನಿ ಮೋದಿ ಪರಿಶೀಲಿಸಿದ್ದಾರೆ. 

ಭಾರತೀಯ ಸೇನೆ ಬಹುದೊಡ್ಡ ಮಟ್ಟದಲ್ಲಿ ತನ್ನ ವೈದ್ಯರನ್ನು, ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ಸಿವಿಲ್ ಆಸ್ಪತ್ರೆಗಳಲ್ಲಿ ನಿಯೋಜಿಸುವ ಕಾರ್ಯ ಆರಂಭಿಸಿದೆ. ಮಾಜಿ ಸೈನಿಕರ ಚಿಕಿತ್ಸೆಗೂ ಕೂಡ ತಾತ್ಕಾಲಿಕ ಭರ್ತಿ ಪ್ರಕ್ರಿಯೆ ಆರಂಭಗೊಂಡಿದೆ. ಏಪ್ರಿಲ್ 23ರವರೆಗಿನ ಅಂಕಿ ಸಂಖ್ಯೆಗಳ ಪ್ರಕಾರ, ದೆಹಲಿಯ ಪಟೇಲ್ ಕೊವಿಡ್ ಆಸ್ಪತ್ರೆಯಲ್ಲಿ ಸೇನೆಯ 72, ಅಹ್ಮದಾಬಾದ್ ನಲ್ಲಿ 35  ಹಾಗೂ ಪಟ್ನಾದಲ್ಲಿ 35 ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ .

ಇದನ್ನೂ ಓದಿ- SC Asks For National Plan - 'ರಾಷ್ಟ್ರೀಯ ವಿಪತ್ತಿನ ಪರಿಸ್ಥಿತಿಯಲ್ಲಿ ಮೂಕ ಪ್ರೇಕ್ಷಕನಾಗಲು ಸಾಧ್ಯವಿಲ್ಲ

ಈ ಕುರಿತು ಮಾಹಿತಿ ನೀಡಿರುವ ಸೇನೆಯ ಅಧಿಕಾರಿಯೊಬ್ಬರು ಯುದ್ಧದಂತಹ ಪರಿಸ್ಥಿತಿಯಲ್ಲಿ ಭಾರತೀಯ ಸೇನೆ ವಾರ್ ಪ್ಲಾನ್ ಅಡಿ ಸಿವಿಲ್ ಆಸ್ಪತ್ರೆಗಳ ಸೇವೆ ಪಡೆಯುವ ರೀತಿ ಈ ಪರಿಸ್ಥಿತಿ ಇದ್ದು, ಈ ಬಾರಿ ಇದು ಸ್ವಲ್ಪ ರಿವರ್ಸ್ ಆಗಿದೆ  ಎಂದಿದ್ದಾರೆ. ನಾಗರಿಕರಿಗೆ ಸೇನಾ ಆಸ್ಪತ್ರೆಗಳ ನೆರವು ಪಡೆಯುವ ಸ್ಥಿತಿ ಬಂದೊದಗಿದೆ ಎಂದಿದ್ದಾರೆ. 

ಇದನ್ನೂ ಓದಿ- RBI Alert! ದೇಶಾದ್ಯಂತ ಹಣದುಬ್ಬರ ಹೆಚ್ಚಾಗಲಿದೆ, ಕಾರಣ ಇಲ್ಲಿದೆ

ಹೆಚ್ಚಾಗುತ್ತಿರುವ ಕೊರೊನಾ (Covid-19) ಪ್ರಕೋಪದ ಹಿನ್ನೆಲೆ ಮಹತ್ವದ ನಿರ್ಧಾರ ಕೈಗೊಂಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ , ಮಾಜಿ ಸೈನಿಕರು ಹಾಗೂ ಅವರ ಕುಟುಂಬ ಸದಸ್ಯರಿಗೆ ಚಿಕಿತ್ಸೆಗೆ ಸಂಬಂಧಿತ ಅವಶ್ಯಕತೆಗಳನ್ನು ಒದಗಿಸಲು ತಾತ್ಕಾಲಿಕ ಭರ್ತಿ ಪ್ರಕ್ರಿಯೆಗೆ ಅನುಮತಿ ನೀಡಿದ್ದಾರೆ. ದೇಶಾದ್ಯಂತ ಒಟ್ಟು 51 ECHS ಪಾಲಿಕ್ಲಿನಿಕ್ ಗಳಲ್ಲಿ ಓರ್ವ ಚಿಕಿತ್ಸಾ ಅಧಿಕಾರಿ, ನರ್ಸಿಂಗ್ ಸಹಾಯಕ, ಪ್ಹಾರ್ಮಾಸಿಸ್ಟ್, ಡ್ರೈವರ್ ಹಾಗೂ ಕಾವಲುಗಾರನ ಭರ್ತಿ ಮಾಡಲಾಗುವುದು. ಕಾಂಟ್ರಾಕ್ಟ್ ಆಧಾರದ ಮೇಲೆ ಇರುವ ಈ ಹೆಚ್ಚುವರಿ ಸಿಬ್ಬಂದಿ ಮೂರು ತಿಂಗಳ ಅವಧಿಗಾಗಿ ಸ್ಟೇಷನ್ ಹೆಡ್ಕ್ವಾಟರ್ ವತಿಯಿಂದ ಇಡಲಾಗುವುದು ಮತ್ತು ಅವರನ್ನು ರಾತ್ರಿ ಪಾಳಿಗೆ ನಿಯೋಜಿಸಲಾಗುವುದು. ಇದರ ಅಡಿ ಪ್ರತಿಯೊಬ್ಬ ವೈದ್ಯಕೀಯ ಅಧಿಕಾರಿಗೆ 75 ಸಾವಿರ, ನರ್ಸಿಂಗ್ ಅಸಿಸ್ಟೆಂಟ್ ಹಾಗೂ ಪ್ಹಾರ್ಮಾಸಿಸ್ಟ್ ಗಳಿಗೆ 28,100 ಹಾಗೂ ಡ್ರೈವರ್ ಗೆ 19,700 ರೂ. ಮಾಸಿಕ ವೇತನ ನೀಡಲಾಗುವುದು. ಈ ಪಾಲ್ಲಿಕ್ಲಿನಿಕ್ ಗಳಲ್ಲಿ ಅತಿ ಹೆಚ್ಚು ಅಂದರೆ 22 ECHSಗಳು ಸೇನೆಯ ಪಶ್ಚಿಮ ವಿಭಾಗಗಳಲ್ಲಿರಲಿದ್ದು, ಇವು ಹೈ ಪ್ರೆಶರ್ ECHS ಪಾಲಿಕ್ಲಿನಿಕ್ ಗಳಾಗಿವೆ ಮತ್ತು ಇವುಗಳಲ್ಲಿ ರೋಗಿಗಳ ಸಂಖ್ಯೆಯೂ ಕೂಡ ಹೆಚ್ಚಾಗಿರಲಿದೆ.

ಇದನ್ನೂ ಓದಿ- ಮೇ 2 ರ ಚುನಾವಣಾ ಫಲಿತಾಂಶದ ಸಂಭ್ರಮಾಚರಣೆಗೆ EC ನಿಷೇಧ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News