ನವದೆಹಲಿ: Vaccination in India - ಭಾರತದ ಲಸಿಕಾಕರಣ ಅಭಿಯಾನಕ್ಕೆ (Vaccination In India) ರಷ್ಯಾ ವ್ಯಾಕ್ಸಿನ್ ಸ್ಪುಟ್ನಿಕ್ V ಈಗಾಗಲೇ ಎಂಟ್ರಿ ನೀಡಿದ್ದಾಗಿದೆ. ಈ ಹಿನ್ನೆಲೆ ಭಾರತದ ನಾಗರಿಕರಿಗೆ ಸಿಗುವ ಒಟ್ಟು ವ್ಯಾಕ್ಸಿನ್ ಗಳ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಶುಕ್ರವಾರ ಹೈದ್ರಾಬಾದ್ ಮೂಲದ ವ್ಯಕ್ತಿಯೋರ್ವರಿಗೆ ಈ ವ್ಯಾಕ್ಸಿನ್ ನ ಮೊದಲ ಪ್ರಮಾಣ ನೀಡಲಾಗಿದೆ. ಇದರ ಜೊತೆಗೆ ವ್ಯಾಕ್ಸಿನ್ ನ ಬೆಲೆ ಕೂಡ ಘೋಷಿಸಲಾಗಿದೆ. ಪ್ರಸ್ತುತ ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳನ್ನು ಬಳಸಲಾಗುತ್ತಿದೆ. ಹೀಗಿರುವಾಗ ಹೊಸ ವ್ಯಾಕ್ಸಿನ್ ನ ಎಂಟ್ರಿ ಬಳಿಕ ಯಾವ ವ್ಯಾಕ್ಸಿನ್ ಹಾಕಿಸಿದರೆ ಉತ್ತಮ, ಯಾವ ವ್ಯಾಕ್ಸಿನ್ ಪರಿಣಾಮಕಾರಿಯಾಗಿದೆ ಅಥವಾ ಅವುಗಳ ಸೈಡ್ ಇಫೆಕ್ಟ್ (Vaccine Side Effects) ಏನಾಗಿರಲಿದೆ ಎಂಬ ಪ್ರಶ್ನೆಗಳು ಏಳಲಾರಂಭಿಸಿವೆ.


COMMERCIAL BREAK
SCROLL TO CONTINUE READING

ಕೋವಿಶೀಲ್ಡ್
ಪುಣೆ ಮೂಲದ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದನೆಯಾಗುತ್ತಿರುವ ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯಾಗಿರುವ ಕೋವಿಶೀಲ್ಡ್ ಅನ್ನು ವಿಶ್ವದ 62 ದೇಶಗಳಲ್ಲಿ ಬಳಸಲಾಗುತ್ತಿದೆ. ಮಾಧ್ಯಮಗಳಲ್ಲಿ ಪ್ರಕಟಗೊಂಡ ಅಂಕಿ ಅಂಶಗಳ ಪ್ರಕಾರ ಈ ಲಸಿಕೆಯ ಜಾಗತಿಕ ಪರಿಣಾಮಕಾರಿ ದರ ಅಂದರೆ ಎಫಿಕೆಸಿ ಶೇ.70.4 ಎಂದು ತೋರಿಸುತ್ತಿವೆ. ಇತ್ತೀಚೆಗಷ್ಟೇ ಸರ್ಕಾರ ಈ ವ್ಯಾಕ್ಸಿನ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು, ಎರಡು ಡೋಸ್ ಗಳ ನಡುವಿನ ಅಂತರವನ್ನು ಹೆಚ್ಚಿಸಿದೆ. ಹೊಸ ಮಾಹಿತಿಯ ಪ್ರಕಾರ, ಈ ವ್ಯಾಕ್ಸಿನ್ ನ ಎರಡು ದೋಸೆ ಗಳ ನಡುವಿನ ಅಂತರವನ್ನು 14-16 ವಾರಗಳವರೆಗೆ ಹೆಚ್ಚಿಸಲಾಗಿದೆ.


ಕೊವಿಶಿಲ್ದ್ ಬಳಕೆಯ ನಂತರ ಜನರ ತೋಳು ಅಥವಾ ಶರೀರದಲ್ಲಿ ಜ್ವರ, ಆಯಾಸ ಮತ್ತು ಸ್ನಾಯುಬಿಗಿತದಂತಹ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುತ್ತಿವೆ. ಇದಲ್ಲದೆ ಹಲವು ದೇಶಗಳಲ್ಲಿ ಜನರು ರಕ್ತಹೆಪ್ಪುಗಟ್ಟುವಿಕೆಯಂತಹ ದೂರುಗಳನ್ನೂ ನೀಡಿದ ಕಾರಣ ಇದನ್ನು ತಾತ್ಕಾಲಿಕ ನಿಷೇಧಿಸಲಾಗಿತ್ತು. ಆದರೆ, ಹಲವು ಅಧ್ಯಯನಗಳು ಹಾಗೂ ತಜ್ಞರು ಈ ಲಸಿಕೆಯನ್ನು ಸುರಕ್ಷಿತ ಎಂದು ಹೇಳಿದ್ದಾರೆ. 


ಕೊವ್ಯಾಕ್ಸಿನ್
ಹೈದ್ರಾಬಾದ್ ಮೂಲದ ಔಷಧ ತಯಾರಕ ಕಂಪನಿಯಲ್ಲಿ ಅಭಿವೃದ್ದಿಯಾಗಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಭಾರತ್ ಬಯೋಟೆಕ್, ICMR ಹಾಗೂ ಶಾನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಾಜಿ ಜೊತೆಗೆ ಸೇರಿ ತಯಾರಿಸಿದೆ. ಮಾಧ್ಯಮಗಳಲ್ಲಿ ಜಾರಿಯಾಗಿರುವ ಅಂಕಿ-ಅಂಶಗಳ ಪ್ರಕಾರ ಈ ವ್ಯಾಕ್ಸಿನ್ ನ ಎಫಿಕೆಸಿ ರೇಟ್  ಶೇ.81ರಷ್ಟಿದೆ. ಇದಲ್ಲದೆ ಹಲವು ತಜ್ಯರು ಕೊವ್ಯಾಕ್ಸಿನ್ ಅನ್ನು ಕೊರೊನಾ ವೈರಸ್ ನ ವಿವಿಧ ರೂಪಾಂತರಿಗಳ ಮೇಲೆ ಪರಿಣಾಮಕಾರಿ ಯಾಗಿದೆ ಎಂದಿದ್ದಾರೆ.  ಕೊವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ಬಾವು , ನೋವು, ಜ್ವರ, ಚಳಿಯಾದಂತೆ ಭಾಸವಾಗುವುದು, ವಾಂತಿ, ಶೀತ, ತಲೆನೋವು ಮತ್ತು ದದ್ದುಗಳಂತಹ ಅಡ್ಡಪರಿಣಾಮಗಳು ಬೆಳಕಿಗೆ ಬಂದಿವೆ.


ಇದನ್ನೂ ಓದಿ-ಕರೋನಾ ಲಸಿಕೆ ಹಾಕಿಸಿಕೊಂಡರೆ 7 ಕೋಟಿ ರೂ ಗೆಲ್ಲುವ ಅವಕಾಶ..!


ಈ ವ್ಯಾಕ್ಸಿನ್ ಮೂಲಕ ತನ್ನಷ್ಟಕ್ಕೆ ತಾನೇ ಗುಣಾಕಾರವಾಗದ ಪ್ಯಾಥೋಜನ್ ಗಳನ್ನು ಶರೀರಕ್ಕೆ ಇಂಜೆಕ್ಟ್ ಮಾಡಲಾಗುತ್ತದೆ. ಫಾರ್ಮಾಲಿನ್ ನಂತಹ ರಾಸಾಯನಿಕದ ಸಹಾಯದಿಂದ ಈ ವ್ಯಾಕ್ಸಿನ್ ಇಮ್ಯೂನ್ ಸಿಸ್ಟಂಗೆ ಕೊರೊನಾ ವೈರಸ್ ವಿರುದ್ಧ ಹೋರಾಡುವ ಆಂಟಿಬಾಡಿಗಳನ್ನು ತಯಾರಿಸಲು ಹೇಳಿಕೊಡುತ್ತದೆ. ಇದರಲ್ಲಿ ನಿಷ್ಕ್ರೀಯಗೊಂಡ ವೈರಸ್ ಅನ್ನು ತುಂಬಾ ಕಡಿಮೆ ಪ್ರಮಾಣದಲ್ಲಿ ಅಲ್ಯೂಮಿನಿಯಮ್ ಆಧಾರಿತ ಕಂಪೌಂಡ್ ನೊಂದಿಗೆ ಬೆರಸಲಾಗಿದೆ. ಇದನ್ನು ಎಡ್ಜ್ಯೂವೆಂಟ್ ಎಂದು ಕರೆಯಲಾಗುತ್ತದೆ. ವೈರಸ್ ನೊಂದಿಗೆ ಪ್ರತಿಕ್ರಿಯಿಸಲು ಇದು ಇಮ್ಯೂನ್ ಸಿಸ್ಟಂ ಅನ್ನು ಪ್ರೇರೇಪಿಸುತ್ತದೆ.


ಇದನ್ನೂ ಓದಿ- Sputnik V Price In India: ರಷ್ಯಾ ಕೊರೊನಾ ಲಸಿಕೆ Sputnik V ಬೆಲೆ ಘೋಷಣೆ


ಸ್ಪುಟ್ನಿಕ್ V (Sputnik-V) ಲಸಿಕೆ ಕೊರೊನಾ ವಿರುದ್ಧ ವಿಶ್ವದಲ್ಲಿ ಆರಂಭವಾಗಿರುವ ವ್ಯಾಕ್ಸಿನ್ ತಯಾರಿಕಾ ಅಭಿಯಾನದಲ್ಲಿ ಅನುಮೋದನೆ ಪಡೆದ ಮೊದಲ ಲಸಿಕೆಯಾಗಿದೆ. ಮಾಧ್ಯಮಗಳ ವರದಿಗಳ ಪ್ರಕಾರ, ಈ ವ್ಯಾಕ್ಸಿನ್ ಶೇ.91.6 ರಷ್ಟು ಪರಿಣಾಮಕಾರಿಯಾಗಿದೆ. ಈ ವ್ಯಾಕ್ಸಿನ್ ದೇಹದಲ್ಲಿ ಆಂಟಿಬಾಡಿಗಳ ಉತ್ಪತ್ತಿಯನ್ನು ಉತ್ತೇಜಿಸುತ್ತದೆ. ಫೆಬ್ರವರಿ 2021ರಲ್ಲಿ ಪ್ರಕಟಗೊಂಡ ಲ್ಯಾನ್ಸೆಟ್ ಅಧ್ಯಯನಾ ವರದಿಯ ಪ್ರಕಾರ, ಈ ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ಜನರಿಗೆ ತಲೆ ನೋವು, ಫ್ಲೂ, ಆಯಾಸಗಳಂತಹ ಅಡ್ಡಪರಿನಾಮಗ್ಲಿವೆ ಎನ್ನಲಾಗಿದೆ..  ಪ್ರಸ್ತುತ ಈ ವ್ಯಾಕ್ಸಿನ್ ಗೆ ಸಂಬಂಧಿಸಿದಂತೆ ಯಾವುದೇ ಗಂಭೀರ ಪ್ರಕರಣಗಳು ವರದಿಯಾಗಿಲ್ಲ.


ಇದನ್ನೂ ಓದಿ- R Ashok : ಮೇ 24 ರ ನಂತರ ಲಾಕ್​ಡೌನ್​ ಮುಂದುವರೆಯುವ ಸುಳಿವು ನೀಡಿದ ಕಂದಾಯ ಸಚಿವ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.