ಕರೋನಾ ಲಸಿಕೆ ಹಾಕಿಸಿಕೊಂಡರೆ 7 ಕೋಟಿ ರೂ ಗೆಲ್ಲುವ ಅವಕಾಶ..!

ಕರೋನಾ ಲಸಿಕೆ ಹಾಕಿಸುವಂತೆ ಜನರನ್ನು ಪ್ರೇರೇಪಿಸಲು, ವಿಶ್ವದಾದ್ಯಂತದ ಸರ್ಕಾರಗಳು ಜನರಿಗೆ ವಿಭಿನ್ನ ಆಫರ್ ಗಳನ್ನ ನೀಡುತ್ತಿವೆ. ಓಹಿಯೋ ರಾಜ್ಯ ಗವರ್ನರ್ ಮೈಕ್ ಡಿವೈನ್ ಲಸಿಕೆ ಹಾಕಿಸಿಕೊಂಡವರಿಗೆ 7.35 ಕೋಟಿ ರೂ.ಗಳ ಲಾಟರಿ ಆರಂಭಿಸಿದೆ. 

Written by - Ranjitha R K | Last Updated : May 14, 2021, 04:48 PM IST
  • ಇಡೀ ವಿಶ್ವಕ್ಕೆ ತಲೆನೋವಾದ ಕರೋನಾ ವೈರಸ್
  • ಕರೋನಾ ವಿರುದ್ಧ ಹಾಕಿಸಿಕೊಳ್ಳಲೇ ಬೇಕು ಲಸಿಕೆ
  • ಲಸಿಕೆ ಹಾಕಿಸುವವರಿಗೆ ವಿಶೇಷ ಆಫರ್
ಕರೋನಾ ಲಸಿಕೆ ಹಾಕಿಸಿಕೊಂಡರೆ 7 ಕೋಟಿ ರೂ ಗೆಲ್ಲುವ ಅವಕಾಶ..! title=
ಲಸಿಕೆ ಹಾಕಿಸುವವರಿಗೆ ವಿಶೇಷ ಆಫರ್ (file photo)

ಓಹಿಯೋ : ಕರೋನಾ ವೈರಸ್ ಇಡೀ ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿದೆ. ಸದ್ಯಕ್ಕೆ ಕರೋನಾ ವೈರಸ್ ವಿರುದ್ಧ ಇರುವ ಬಹು ದೊಡ್ಡ ಅಸ್ತ್ರ ಎಂದರೆ ಲಸಿಕೆ (Corona Vaccine).  ವಿಶ್ವದಾದ್ಯಂತ ಎಲ್ಲಾ ಸರ್ಕಾರಗಳು ಲಸಿಕೆ ಹಾಕಿಸಿಕೊಳ್ಳುವಂತೆ, ಜನರನ್ನು ಪ್ರೇರೇಪಿಸುತ್ತಿವೆ. ಇದೀಗ ಅಮೆರಿಕಾದ ಓಹಿಯಾದಲ್ಲಿ (Ohio) ಕರೋನಾ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೆಪಿಸಲು ಜನರ ಮುಂದೆ ಆಫರ್ ವೊಂದನ್ನು ಇಡಲಾಗಿದೆ. 

ಲಸಿಕೆ ಹಾಕಿಸಿಕೊಂಡ ನಂತರ 7.35 ಕೋಟಿ ರೂ ಗೆಲ್ಲುವ ಅವಕಾಶ : 
ಮೈಕ್ ಡಿವೈನ್ (Mike DeWine) ಅವರ ಯೋಜನೆಯ ಪ್ರಕಾರ, ಕರೋನಾ ಲಸಿಕೆ (Corona Vaccine) ಹಾಕಿಸಿಕೊಂಡವರಿಗಾಗಿ ಲಾಟರಿಯನ್ನು ಇಡಲಾಗಿದೆ. ಈ ಲಾಟರಿ ಮೊತ್ತ  7.35 ಕೋಟಿ ರೂ.  ಲಸಿಕೆ ಹಾಕಿಸಿಕೊಂಡ ನಂತರ ಎಲ್ಲರೂ ಈ ಲಾಟರಿ  (lottery) ಜಾಕ್‌ಪಾಟ್‌ನಲ್ಲಿ ಭಾಗವಹಿಸಬಹುದು.

ಇದನ್ನೂ ಓದಿ : ನೇಪಾಳದಲ್ಲಿ ಅಚ್ಚರಿ.! ರಾಜೀನಾಮೆ ಸಲ್ಲಿಸಿದ ಮೂರೇ ದಿನಗಳಲ್ಲಿ ಕೆಪಿ ಶರ್ಮಾ ಓಲಿ ಮತ್ತೆ ಪ್ರಧಾನಿ

5 ವಿಜೇತರಿಗೆ ಸಿಗಲಿದೆ ಜಾಕ್‌ಪಾಟ್ : 
ಈ ಬಗ್ಗೆ ಟ್ವೀಟ್ ಮಾಡಿರುವ ಮೈಕ್ ಡಿವೈನ್ ಲಾಟರಿ ಜಾಕ್ ಪಾಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಲಾಟರಿ ಯೋಜನೆಯಲ್ಲಿ ಪಾಲ್ಗೊಳ್ಳಬೇಕಾದರೆ ಒಂದು ಡೋಸ್ ಆದರೂ ಲಸಿಕೆ (Vaccine) ಹಾಕಿಸಿಕೊಂಡಿರಬೇಕು. ಮೇ 26 ರಿಂದ ಪ್ರತಿ ಬುಧವಾರ ಈ ಲಾಟರಿಯ  (lottery) ಡ್ರಾ ನಡೆಯಲಿದೆ. ಮುಂದಿನ 5 ವಾರಗಳವರೆಗೆ ಡ್ರಾ ನಡೆಯಲಿದೆ . ಅಂದರೆ ಪ್ರತಿ ವಾರಕ್ಕೆ ಒಬ್ಬರಂತೆ ಐದು ಜನ ಇದರಲ್ಲಿ ಜಾಕ್ ಪಾಟ್ ಗೆಲ್ಲಲಿದ್ದಾರೆ. 

ಲಾಟರಿಯಲ್ಲಿ ಭಾಗವಹಿಸಬೇಕಾದರೆ ಕೆಲ ಷರತ್ತುಗಳಿವೆ :
ಈ ಲಾಟರಿ ಯೋಜನೆಯಲ್ಲಿ ಭಾಗವಹಿಸಬೇಕಾದರೆ 18 ವರ್ಷ ತುಂಬಿರಬೇಕು. ಮತ್ತು ಓಹಿಯಾ  (Ohio) ನಗರ ನಿವಾಸಿಗಳು ಮಾತ್ರ ಈ ಯೋಜನೆಯಲ್ಲಿ ಭಾಗವಹಿಸಬೇಕಾಗಿದೆ. ಲಾಟರಿಯ ಒಂದು ದಿನ ಮೊದಲೇ ಲಸಿಕೆ ಹಾಕಿಸಿಕೊಂಡಿರಬೇಕು. 

ಇದನ್ನೂ ಓದಿ : Mask: ಅಮೇರಿಕನ್ನರಿಗೆ ಬಿಗ್ ರಿಲೀಫ್, Corona vaccine ಪಡೆದವರು ಈ ನಿಯಮ ಪಾಲಿಸುವ ಅಗತ್ಯವಿಲ್ಲ

ಲಸಿಕೆ ಹಾಕಿದ ಮೇಲೆ ಮಾಸ್ಕ್ ಧರಿಸುವಂತಿಲ್ಲ : 
ಯುಎಸ್ ನಲ್ಲಿ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡ ನಂತರ ಮಾಸ್ಕ್ (Mask) ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಂತಾದ ಮಾರ್ಗಸೂಚಿಗಳನ್ನ ಪಾಲಿಸುವ ಅಗತ್ಯವಿಲ್ಲ. ಅಮೆರಿಕಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆಂಶನ್ ಇದನ್ನು ಸ್ಪಷ್ಟಪಡಿಸಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News